ವಿಶ್ವದ ಆರನೇ ಒಂದು ಭಾಗದಷ್ಟು ಜನರು ಸುರಕ್ಷಿತ ಕುಡಿಯುವ ನೀರಿನಿಂದ ವಂಚಿತರಾಗಿದ್ದಾರೆ.

* ಪ್ರತಿವರ್ಷ ಸುಮಾರು 22 ಲಕ್ಷ ಜನರು ಕಲುಷಿತ ನೀರಿನ ಸೇವನೆಯಿಂದ ಉಂಟಾಗುವ ಸಮಸ್ಯೆಗಳಿಂದ ಸಾವನ್ನಪ್ಪುತ್ತಿದ್ದಾರೆ. ಅಭಿವೃದ್ಧಿಶೀಲ ದೇಶಗಳ ಈ ನತದೃಷ್ಟರಲ್ಲಿ ಮಕ್ಕಳ ಪ್ರಮಾಣವೇ ಹೆಚ್ಚು.

* ವಿಶ್ವಯುದ್ಧಗಳಿಂದ ಉಂಟಾದ ಪ್ರಾಣಹಾನಿಗಿಂತಲೂ ಹೆಚ್ಚಿನ ಬಲಿಯನ್ನು ಕಳೆದ ಹತ್ತು ವರ್ಷಗಳಲ್ಲಿ `ಅತಿಸಾರ~ ತೆಗೆದುಕೊಂಡಿದೆ.

* ಆಫ್ರಿಕಾ ಮತ್ತು ಏಷ್ಯಾ ದೇಶಗಳ ಕೆಲವು ಕಡೆಗಳಲ್ಲಿ ಕುಡಿಯುವ ನೀರು ತರಲಿಕ್ಕಾಗಿ ಆರು ಕಿಲೋಮೀಟರ್ಗೂ ಹೆಚ್ಚು ದೂರವನ್ನು ಮಹಿಳೆಯರು ಕ್ರಮಿಸುತ್ತಾರೆ. ಇದಕ್ಕಾಗಿ ಅವರ ದೈನಿಕದಲ್ಲಿ ಆರು ತಾಸು ಅಥವಾ ಅದಕ್ಕಿಂತ ಹೆಚ್ಚು ಸಮಯ ಖರ್ಚಾಗುತ್ತಿದೆ.

* ಮನೆಗೆ ನೀರನ್ನು ಹೊಂಚುವ ಕಾರಣದಿಂದಾಗಿಯೇ ಅನೇಕ ಮಕ್ಕಳು ಶಾಲೆಗಳನ್ನು ತಪ್ಪಿಸಿ ಮನೆಯಲ್ಲಿಯೇ ಉಳಿಯುತ್ತಿದ್ದಾರೆ.

* ಅಭಿವೃದ್ಧಿಶೀಲ ದೇಶಗಳಲ್ಲಿನ ಶೇ.80ರಷ್ಟು ಆರೋಗ್ಯ ಸಮಸ್ಯೆಗಳಿಗೆ ಮಲಿನಗೊಂಡ ನೀರು ಕಾರಣವಾಗಿದೆ.

* ಜಲಸಂಬಂಧಿ ಕಾಯಿಲೆಗಳು (Waterborne diseases) ಐದು ವರ್ಷದೊಳಗಿನ ಮಕ್ಕಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿವೆ. ವಿಶ್ವದ ಎಲ್ಲ ಆಸ್ಪತ್ರೆಗಳ ಅರ್ಧದಷ್ಟು ಹಾಸಿಗೆಗಳು, ಎಲ್ಲ ಕಾಲಗಳಲ್ಲೂ, ನೀರಿನ ಕಾರಣದಿಂದಾಗಿ ಉಂಟಾದ ರೋಗಿಗಳಿಂದ ತುಂಬಿರುತ್ತವೆ. ಕಲುಷಿತ ಕುಡಿಯುವ ನೀರು, ಸ್ವಚ್ಛತೆಯ ಕೊರತೆ ಹಾಗೂ ಶೌಚ ವ್ಯವಸ್ಥೆಯ ದೋಷವೇ ಈ ಸಮಸ್ಯೆಗಳಿಗೆ ಕಾರಣ.

ಪಟ್ಟಿ ಮುಗಿಯುವುದಿಲ್ಲ. ವಿಶ್ವವನ್ನು ಕಾಡುತ್ತಿರುವ ನೀರಿನ ಬಿಕ್ಕಟ್ಟಿನ ವ್ಯಥೆ ಯಾವ ರಾಮಾಯಣಕ್ಕೂ ಕಡಿಮೆಯದಲ್ಲ.

ಅಮಾವಾಸ್ಯೆಗೊಮ್ಮೆ, ಹುಣ್ಣಿಮೆಗೆ ಇನ್ನೊಮ್ಮೆ ನೀರು ಪೂರೈಕೆಯಾಗುವ ಕರ್ನಾಟಕದ ವಿವಿಧ ಭಾಗಗಳ ವರದಿಗಳನ್ನು ಪತ್ರಿಕೆಗಳಲ್ಲಿ ಕಾಣುತ್ತಲೇ ಇರುತ್ತೇವೆ. ಉದ್ದನೆ ಸರತಿಯಲ್ಲಿನ ಕೊಡಪಾನಗಳ ಚಿತ್ರಗಳು ಪುನರಾವರ್ತನೆಗೊಳ್ಳುತ್ತಲೇ ಇರುತ್ತವೆ.

ನೀರಿನ ದಾಹದಿಂದ ಪರಿತಪಿಸುವ ಜನ-ಜಾನುವಾರು ಕುರಿತು ವರದಿಗಳು ನಿರಂತರವಾಗಿ ಪ್ರಕಟಗೊಳ್ಳುತ್ತಲೇ ಇವೆ. ಆದರೆ, ಇದು ಕನ್ನಡನಾಡಿನ ಅಥವಾ ಭಾರತದ ಸಮಸ್ಯೆಯೇನಲ್ಲ. ಇಡೀ ವಿಶ್ವವೇ ಕಾಯಿಲೆಗೆ ಬಿದ್ದಂತಿದೆ. ಎಲ್ಲೆಡೆ ಜಲಕ್ಷಾಮದ ಚಿತ್ರಗಳು. ಇಡೀ ವಿಶ್ವವೇ ಬಕಾಸುರ ಬಾಯಾರಿಕೆಗೆ ತುತ್ತಾದಂತಿದೆ.
ಅಮೆರಿಕಕ್ಕೆ ಸೆಡ್ಡು ಹೊಡೆಯುವಂತೆ ಪ್ರಗತಿ ಸಾಧಿಸುತ್ತಿರುವ ಚೀನಾದ ಕಥೆ ನೋಡಿ.

ದೇಶದ ರಾಜಧಾನಿ ಬೀಜಿಂಗ್ ಮಹಾ ನಗರ ಸೇರಿದಂತೆ ಚೀನಾದ ಸುಮಾರು 400 ನಗರಗಳು ನೀರಿನ ಕೊರತೆ ಎದುರಿಸುತ್ತಿವೆ. ನೀರಿನಲ್ಲಿ ನೈಟ್ರೇಟ್ ಆತಂಕಕಾರಿ ಪ್ರಮಾಣದಲ್ಲಿದೆ. 2020ರ ವೇಳೆಗೆ ನೀರಿನ ಬಿಕ್ಕಟ್ಟಿನ ಕಾರಣದಿಂದಾಗಿಯೇ ಮೂರು ಕೋಟಿ ಪರಿಸರ ಸಂತ್ರಸ್ತರು ಚೀನಾದಲ್ಲಿ ರೂಪುಗೊಳ್ಳಲಿದ್ದಾರೆ ಎಂದು ವರದಿಗಳು ಎಚ್ಚರಿಸಿವೆ. ವಿಶ್ವದ ಶೇ.20ರಷ್ಟು ಜನಸಂಖ್ಯೆಯನ್ನು ಹೊಂದಿರುವ ಚೀನಾದಲ್ಲಿ, ಶೇ.7ರಷ್ಟು ಜಲ ಸಂಪನ್ಮೂಲವಷ್ಟೇ ಇದೆ.

ಈ ತಪ್ಪಿದ ತಾಳವೇ ಹಾಹಾಕಾರಕ್ಕೆ ಕಾರಣವಾಗಿದೆ. ಶೇ.90 ನಗರಗಳ ಅಂತರ್ಜಲ ಕಲುಷಿತಗೊಂಡಿದೆ. ಮುಕ್ಕಾಲುಪಾಲು ನದಿಗಳು ನಂಜು ತುಂಬಿಕೊಂಡಿವೆ. ಹಾಗಾಗಿ, 70 ಕೋಟಿ ಚೀನೀಯರು ಪ್ರತಿದಿನ ಅಸುರಕ್ಷಿತ ನೀರನ್ನು ಕುಡಿಯುವಂತಾಗಿದೆ. ದಾರಿ ಕಾಣದ ಚೀನಾದ ಕಮ್ಯುನಿಸ್ಟ್ ಪ್ರಭುತ್ವ, ಸುಮಾರು 10 ಸಾವಿರ ವರ್ಷಗಳಷ್ಟು ಹಳೆಯದಾದ ನೀರ ಪೊಟರೆಗಳತ್ತ ಕಣ್ಣು ಹರಿಸಿದೆ.

ಅಮೆರಿಕದಲ್ಲೂ ಹಾಹಾಕಾರ
ಪ್ರಾಕೃತಿಕ ನಿಕ್ಷೇಪಗಳನ್ನು ಕಾದಿರಿಸುವಲ್ಲಿ ಎತ್ತಿದ ಕೈಯಾದ ಅಮೆರಿಕದಲ್ಲೂ ನೀರಿನ ಹಾಹಾಕಾರವಿದೆ. ಕ್ಯಾಲಿಫೋರ್ನಿಯ, ಲಾಸ್ ಏಂಜಲೀಸ್ಗಳಲ್ಲಿ ನೀರಿಗೆ ಕೊರತೆಯಿದೆ. ಸಾಂತಾ ಬಾರ್ಬರದಿಂದ ಮೆಕ್ಸಿಕನ್ ಬಾರ್ಡರ್ವರೆಗಿನ ಪ್ರದೇಶದಲ್ಲಿ ಜನಸಂಖ್ಯೆ ವರ್ಷಂಪ್ರತಿ ದಟ್ಟವಾಗುತ್ತಿರುವುದರಿಂದ ಈ ಕೊರತೆ.

ಕ್ಯಾಲಿಫೋರ್ನಿಯಾದಲ್ಲಿ ಪ್ರತಿವರ್ಷ 10 ಲಕ್ಷ ಜನಸಂಖ್ಯೆ ಹೆಚ್ಚುತ್ತಿದ್ದು, 2030ರ ವೇಳೆಗೆ ಇಲ್ಲಿನ ಜನಸಂಖ್ಯೆ ಏಳೂವರೆ ಕೋಟಿ ಮುಟ್ಟುವ ಅಂದಾಜಿದೆ. ಆದರೆ, ಜಲಮೂಲಗಳ ಪ್ರಮಾಣ ಇದ್ದಷ್ಟೇ ಇರುತ್ತದೆ. ಪಶ್ಚಿಮ ಅಮೆರಿಕಾದ ಬಹುತೇಕ ಪ್ರದೇಶ ರಾಕಿ ಪರ್ವತ ಪ್ರಾಂತ್ಯದಿಂದ ಹರಿದು ಬರುವ ನೀರನ್ನೇ ಅವಲಂಬಿಸಿದೆ. ಆದರೆ, ಜನಸಂಖ್ಯೆ ಮತ್ತು ತಾಪಮಾನದ ಹೆಚ್ಚಳ ಈ ಜಲಮೂಲಗಳ ಸವಕಳಿಗೆ ಕಾರಣವಾಗುತ್ತಿದೆ.
ಜಲಮೂಲಕ್ಕೆ ಜನಸಂಖ್ಯೆ ಕೊಡಲಿ ಕಾವಾಗಿದೆ.

ಈ ಶತಮಾನದ ಮಧ್ಯಭಾಗದ ವೇಳೆಗೆ ಮೂರು ಶತಕೋಟಿ ಜನರು ಪ್ರಸ್ತುತ ನೀರಿನ ಹಾಹಾಕಾರ ಇರುವ ಪ್ರದೇಶಗಳಿಂದಲೇ ವಿಶ್ವ ಜನಸಂಖ್ಯೆಗೆ ಸೇರ್ಪಡೆಯಾಗುವ ಲೆಕ್ಕಾಚಾರವಿದೆ.

ಕ್ರಿಕೆಟ್ ಮೈದಾನಗಳನ್ನು ಟೀವಿಯಲ್ಲಿ ನೋಡಿ ಸಮೃದ್ಧ ದೇಶ ಎಂದು ಅನೇಕರು ಭಾವಿಸಿರುವ ಆಸ್ಟ್ರೇಲಿಯಾದಲ್ಲಿ ಕೂಡ ನೀರಿನ ಒರತೆ ಸುಲಲಿತವಾಗಿಲ್ಲ.

ಆಸ್ಟ್ರೇಲಿಯಾದ ಬಹುದೊಡ್ಡ ಭಾಗ ಈಗಾಗಲೇ ಮರಳುಗಾಡಾಗಿದೆ. ದೇಶದ ಬಹುತೇಕ ನಗರಗಳಲ್ಲಿ ನೀರಿನ ನಿಯಂತ್ರಣದ ಕುರಿತು ಎಚ್ಚರಿಕೆ ತೆಗೆದುಕೊಳ್ಳಲಾಗಿದೆ. ಕೆಲವು ನಗರಗಳಲ್ಲಿ ಜಲ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲಾಗಿದೆ.

ಏಷ್ಯಾದ ಪಾಲಿಗೆ ಹಿಮಾಲಯದ ತಪ್ಪಲು ಬಹುದೊಡ್ಡ ನೀರಿನ ಆಕರವಷ್ಟೇ. ಗಂಗೆ, ಬ್ರಹ್ಮಪುತ್ರ, ಇಂಡಸ್, ಮೆಕಾಂಗ್, ಸಲ್ವೀನ್, ಹಳದಿ ನದಿ ಸೇರಿದಂತೆ ಬಹುದೊಡ್ಡ ನೀರ ಹರಿವುಗಳ ತಾಯಿ ಈ ಹಿಮತಪ್ಪಲು.

ಆದರೆ, ಇವತ್ತಿನ ಜಾಗತಿಕ ತಾಪಮಾನ ಏರಿಕೆಯ ಗತಿ ಮುಂದುವರಿದಿದ್ದೇ ಆದರೆ, ಬಹುತೇಕ ನದಿಗಳು ಕಣ್ಮರೆಯಾಗುವ ಸಾಧ್ಯತೆಯಿದೆ. ಭಾರತ, ಚೀನಾ, ನೇಪಾಳ, ಮ್ಯಾನ್ಮಾರ್, ಪಾಕಿಸ್ತಾನ ದೇಶಗಳು ಭೀಕರ ಬರದ ದವಡೆಗೆ ಸಿಲುಕಲಿವೆ. ಭಾರತದ ವಿಷಯವನ್ನೇ ನೋಡೋಣ: ಇಲ್ಲಿ, ಕೋಟ್ಯಂತರ ಮಂದಿ ಕುಡಿಯುವ ನೀರು ಮತ್ತು ಕೃಷಿ ಚಟುವಟಿಕೆಗಳಿಗಾಗಿ ಗಂಗಾ ನದಿಯನ್ನು ಅವಲಂಬಿಸಿದ್ದಾರೆ.

ಆದರೆ, ಗಂಗೆಯ ಹರಿವು ವರ್ಷದಿಂದ ವರ್ಷಕ್ಕೆ ಸವಕಳಿ ಆಗುತ್ತಿದೆ ಹಾಗೂ ಮಾಲಿನ್ಯದ ಪ್ರಮಾಣ ನಿರಂತರವಾಗಿ ಏರುಮುಖವಾಗಿದೆ.

ಸೂಡಾನ್, ವೆನಿಜುವೆಲಾ, ಇಥಿಯೋಪಿಯ, ಟ್ಯುನೇಷಿಯ, ಕ್ಯೂಬಾ- ಇಲ್ಲೆಲ್ಲ ಅಸಂಖ್ಯ ಜನ ಕಲುಷಿತ ನೀರನ್ನು ಅನಿವಾರ್ಯವಾಗಿ ಸೇವಿಸುತ್ತಿದ್ದಾರೆ.

ಪರಿಸರದ ಮೇಲೆ ಕರಿನೆರಳು
`ನೇಚರ್~ ಪತ್ರಿಕೆಯಲ್ಲಿನ ವರದಿಯೊಂದರ ಪ್ರಕಾರ- `ವಿಶ್ವದ ಜನಸಂಖ್ಯೆಯಲ್ಲಿ ನೂರಕ್ಕೆ ಎಂಬತ್ತರಷ್ಟು ಮಂದಿ ನೀರಿನ ಸುರಕ್ಷತೆಗೆ ಆತಂಕ ಉಂಟಾಗಿರುವ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ~. ಈ ನೀರಿನ ಸುರಕ್ಷತೆ ಮನುಷ್ಯರಿಗೆ ಸೀಮಿತವಾದ ಸಮಸ್ಯೆಯೇನೂ ಅಲ್ಲ. ಅದರ ಕರಿನೆರಳು ಪರಿಸರದ ಮೇಲೆಯೂ ಇದೆ. ನೀರಿನ ನಿರ್ವಹಣೆ ಕುರಿತ ಮನುಷ್ಯರ ಯೋಜನೆಗಳು ವನ್ಯಜೀವಿಗಳ ನಿದ್ದೆಗೆಡಿಸುತ್ತಿವೆ. (ಉದಾ: ಮೀನುಗಳ ವಲಸೆ). ಜನಸಂಖ್ಯೆ ದಟ್ಟವಾಗಿರುವ ಮತ್ತು ಕೃಷಿ ಚಟುವಟಿಕೆಗಳು ವ್ಯಾಪಕವಾಗಿರುವ ಪ್ರದೇಶಗಳು ನೀರಿನ ಸುರಕ್ಷತೆಗೆ ಹೆಚ್ಚು ಅಪಾಯವೊಡ್ಡಿವೆ.

ನೀರಿನ ಬಿಕ್ಕಟ್ಟು ಎರಡು ಬಗೆಯದು. ಒಂದು ಕೊರತೆಗೆ ಸಂಬಂಧಿಸಿದ್ದು, ಇನ್ನೊಂದು ಜಲಮೂಲಗಳು ಕಲುಷಿತಗೊಳ್ಳುತ್ತಿರುವುದರ ಕುರಿತಾದದ್ದು. ಕೊಲಂಬಿಯಾ ವಿಶ್ವವಿದ್ಯಾಲಯದ ಸಂಶೋಧಕರೊಬ್ಬರು ತಮ್ಮ ಅಧ್ಯಯನದಲ್ಲಿ- ಮಳೆ ಪ್ರಮಾಣದಲ್ಲಿ ಉಂಟಾಗಿರುವ ವ್ಯತ್ಯಯಕ್ಕಿಂತಲೂ ಜನಸಂಖ್ಯೆಯ ಏರುಮುಖವೇ ನೀರಿನ ಕೊರತೆಗೆ ಕಾರಣವಾಗಿದೆ. ಬರ ಎನ್ನುವುದು ಮನುಕುಲಕ್ಕೆ ಹೊಸತೂ ಅಲ್ಲ, ಅನಿರೀಕ್ಷಿತವೂ ಅಲ್ಲ. ಆದರೆ, ಈ ಬರವೊಂದೇ ನೀರಿನ ಕೊರತೆಗೆ ಕಾರಣವಲ್ಲ ಎನ್ನುವ ಅವರು, ನೀರಿನ ಕೊರತೆಗೆ ಜನಸಂಖ್ಯಾ ಸ್ಫೋಟದತ್ತ ಬೆಟ್ಟು ಮಾಡುತ್ತಾರೆ.

ಇಲ್ಲೊಂದು ವಿಷಯವನ್ನು ಸ್ಪಷ್ಟಪಡಿಸಬೇಕು. ನೀರಿನ ಕೊರತೆ ಎಂದರೆ ನೀರೇ ಇಲ್ಲ ಎಂದಲ್ಲ; ಅದು ನಮ್ಮ ಅಗತ್ಯಗಳಿಗೆ ತಕ್ಕಂತಹ ನೀರಿನ ಕೊರತೆ ಎಂದರ್ಥ. ಏಕೆಂದರೆ ವಿಶ್ವದಲ್ಲಿ ಲಭ್ಯವಿರುವ ಶೇ. 97ರಷ್ಟು ಪ್ರಮಾಣದ ನೀರು ಉಪ್ಪೇ ಉಪ್ಪು. ಉಳಿದ ಶೇ.3ರಷ್ಟು ನೀರು ಮಾತ್ರ ಮನುಷ್ಯರು ಬಳಸಲು ಯೋಗ್ಯವಾದುದು. ಆದರೆ, ಈ ಕನಿಷ್ಠ ಪ್ರಮಾಣದ ನೀರಿನ ಮೇಲೆ ಹಕ್ಕುಸಾಧಿಸುತ್ತಿರುವ ಜನಸಂಖ್ಯೆಯ ಪ್ರಮಾಣ ಒಂದೇ ಸಮನೆ ಏರುಮುಖದಲ್ಲಿದೆ.

ನೀರ ಹರಿವಿಗೆ ರಂಧ್ರಗಳು
ನೀರಿನ ಅಸರ್ಮಪಕ ಬಳಕೆಯೂ ನೀರಿನ ಬಿಕ್ಕಟ್ಟಿಗೆ ಕಾರಣವಾಗಿದೆ. ಅಂತರ್ಜಲದ ಶೋಷಣೆ ಎಗ್ಗುಸಿಗ್ಗಿಲ್ಲದೆ ನಡೆಯುತ್ತಿರುವುದು, ಕೃಷಿಗೆ ಅಳತೆ ಮೀರಿದ ಪ್ರಮಾಣದಲ್ಲಿ ನೀರು ಬಳಸಲಾಗುತ್ತಿರುವುದು, ನೀರಿನ ವಿತರಣೆಯ ಜಾಲದಲ್ಲಿನ ತೂತುಗಳಿಂದಲೂ ನೀರು ಸೋರಿಕೆಯಾಗುತ್ತಿದೆ. ವಿಶ್ವಸಂಸ್ಥೆಯ ವರದಿಯೊಂದು ಹೇಳುತ್ತದೆ:

`ಪ್ರತಿಯೊಬ್ಬರಿಗೂ ನೀರು ಸಾಕಷ್ಟಿದೆ. ಆದರೆ, ಅಸಮರ್ಪಕ ನಿರ್ವಹಣೆ, ಭ್ರಷ್ಟಾಚಾರ, ಆಡಳಿತಶಾಹಿಯ ನಿರ್ಲಕ್ಷ್ಯ, ಮೂಲಭೂತ ಸೌಕರ್ಯಗಳ ಕಲ್ಪಿಸುವ ಬಂಡವಾಳ ತೊಡಗಿಸುವಿಕೆಯ ಕೊರತೆ- ಇವೆಲ್ಲದರಿಂದಾಗಿ ನೀರಿನ ಸಮಸ್ಯೆ ತಲೆದೋರಿದೆ~.

ನೀರಿನ ಕೊರತೆ ದೇಶಗಳ ಕೃಷಿ ನಕ್ಷೆಯನ್ನೇ ಬದಲಾಯಿಸಿವೆ. ವಿಶ್ವದ ಅನೇಕ ಸಣ್ಣ ದೇಶಗಳ ಕೃಷಿ ಉತ್ಪನ್ನಗಳ ಆಮದು ಹೆಚ್ಚಾಗಿದೆ. ಅಲ್ಜೀರಿಯಾ, ಈಜಿಪ್ಟ್, ಇರಾನ್, ಮೆಕ್ಸಿಕೊ ದೇಶಗಳ ಆಹಾರ ಧಾನ್ಯಗಳ ಆಮದು ಪ್ರಮಾಣ ಹೆಚ್ಚುತ್ತಲೇ ಇದೆ. ಈ ಅವಲಂಬಿತರ ಸಾಲಿಗೆ ಸೇರುವ ಸರತಿಯಲ್ಲಿ ಚೀನಾ, ಭಾರತದಂಥ ದೊಡ್ಡ ದೇಶಗಳೂ ಇವೆ. ಪಾಕಿಸ್ತಾನ, ಇರಾಕ್ಗಳಲ್ಲಿ ಕೂಡ ನೀರಿನ ಕೊರತೆಯಿಂದಾಗಿ ಕೃಷಿ ಚಟುವಟಿಕೆಗಳು ನಿಯಂತ್ರಣಕ್ಕೊಳಗಾಗಿವೆ.

ನೀರಿನ ಪುನರ್ ಬಳಕೆ ಈಗಿನ ಕೊರತೆಗೆ ಒಂದು ಪರಿಹಾರ. ಆದರದು ಸುಲಭ ಸಾಧ್ಯವಾದುದೇನೂ ಅಲ್ಲ. ನೀರಿನ ಸಂಸ್ಕರಣಾ ಘಟಕಗಳ ಸ್ಥಾಪನೆ ದೊಡ್ಡ ಮೊತ್ತದ ಬಂಡವಾಳ ಬಯಸುವಂತಹದ್ದು. ನಿರ್ವಹಣೆಯ ವೆಚ್ಚ ಕೂಡ ಕಡಿಮೆಯೇನಿಲ್ಲ. ಹಾಗಾಗಿ, ಜಲ ಸಂಸ್ಕರಣೆಯ ಗೊಡವೆಗೆ ಅನೇಕ ದೇಶಗಳು ಹೋಗುತ್ತಿಲ್ಲ. ಇಸ್ರೇಲ್, ಸಿಂಗಪುರ, ಸೌದಿ ಅರೇಬಿಯ, ಆಸ್ಟ್ರೇಲಿಯಾಗಳಲ್ಲಿ ನೀರಿನ ಸಂಸ್ಕರಣೆ ಗಮನಾರ್ಹ ಪ್ರಮಾಣದಲ್ಲಿ ನಡೆಯುತ್ತಿದೆ. ಅಮೆರಿಕಾದಲ್ಲಿ ಕೂಡ ಜಲ ಸಂಸ್ಕರಣೆಗೆ ಉತ್ತೇಜನ ನೀಡಲಾಗುತ್ತಿದೆ. ಪ್ರಸ್ತುತ ವಿಶ್ವದಲ್ಲಿ ನಡೆಯುತ್ತಿರುವ ಜಲ ಸಂಸ್ಕರಣೆಯ ಪ್ರಮಾಣ, 2020ರ ವೇಳೆಗೆ ಮೂರು ಪಟ್ಟು ಹೆಚ್ಚಬಹುದೆನ್ನುವ ನಿರೀಕ್ಷೆಯಿದೆ.

ಒಂದೆಡೆ ಜಲ ಸಂಸ್ಕಾರದ ಪ್ರಯತ್ನಗಳು ನಡೆಯುತ್ತಿದ್ದರೆ, ಇನ್ನೊಂದು ಕಡೆ ಇದರ ವಿರೋಧದ ದನಿಗಳೂ ಕೇಳಿಸುತ್ತಿವೆ. ಆರ್ಥಿಕವಾಗಿ ಹೊರೆಯಾದ ಇಂಥ ಯೋಜನೆಗಳ ಬದಲು, ನೀರ ಮೂಲಗಳ ಪುನಶ್ಚೇತನವೇ ಹೆಚ್ಚು ಪರಿಣಾಮಕಾರಿ ಎನ್ನುವ ವಾದಗಳಿವೆ.

ನೀರಿನ ಕೊರತೆಗೆ ಮದ್ದಾದರೂ ಎಲ್ಲಿದೆ? ಅದು ನಮ್ಮಲ್ಲೇ ಇದೆ. ನಮ್ಮ ಅವಶ್ಯಕತೆಗಳನ್ನು ಮಿತಿಗೊಳಿಸಿಕೊಂಡು ಹೆಚ್ಚು ಹೆಚ್ಚು ಪರಿಸರ ಸ್ನೇಹಿಯಾಗಿ ಬದುಕುವುದೇ ಬಾಯಾರಿಕೆಗೆ ಪರಿಹಾರವಾಗಿದೆ. ಜೈವಿಕ ಪರಿಸರವನ್ನು ರಕ್ಷಿಸುವುದು ಹಾಗೂ ನೈಸರ್ಗಿಕ ಜಲಚಕ್ರಗಳ ರಚನೆಯಲ್ಲಿ ವ್ಯತ್ಯಯ ಉಂಟಾಗದಂತೆ ಎಚ್ಚರವಹಿಸಬೇಕಾಗಿದೆ. ಮಳೆ ನೀರು ಸಂಗ್ರಹದ ಬಗ್ಗೆ ಆಸ್ಥೆ ವಹಿಸಬೇಕಾಗಿದೆ.

ವೈಯಕ್ತಿಕ ನೆಲೆಗಟ್ಟಿನ ಇದೆಲ್ಲದರ ಜೊತೆಗೆ ನೀರಿನ ಪುನರ್ ಬಳಕೆ - ಸಂಸ್ಕರಣೆ, ಜಲಮೂಲಗಳ ರಕ್ಷಣೆಯ ಬಗ್ಗೆ ಸರ್ಕಾರಗಳು ಎಚ್ಚರವಹಿಸಬೇಕಾಗಿದೆ.

`ಬಾಯಾರಿತು ಎಂದು ಬಾವಿ ನೀರಿಗೆ ಹೋದೆ / ಬಾವಿ ಜಲ ಬತ್ತಿ ಬರಿದಾಯ್ತು ಹರಿಯೇ~ ಎನ್ನುವ ದಾಸವಾಣಿ ನಮ್ಮನ್ನು ನಿತ್ಯ ಎಚ್ಚರದಲ್ಲಿ ಇಡಬೇಕಾಗಿದೆ.

ಉಪ್ಪು ತಿಂದ ಮೇಲೆ...
`ಭಾರತದಲ್ಲೇ ಆಗಲೀ ಅಥವಾ ಕರ್ನಾಟಕದಲ್ಲಿಯೇ ಆಗಲಿ ಮುಂದಿನ ದಿನಗಳಲ್ಲಿ ಇರುವ ನೀರಿನ ಪ್ರಮಾಣ ಕಡಿಮೆಯಾಗುತ್ತಾ ಹೋಗುತ್ತದೆ. ಒಂದು ಪ್ರದೇಶದಲ್ಲಿ ಜನಸಂಖ್ಯೆ ಹೆಚ್ಚುತ್ತಾ ಹೋದಂತೆ ಅಲ್ಲಿ ಜೀವನಾವಶ್ಯಕ ದ್ರವ್ಯವಾದ ನೀರಿನ ಬೇಡಿಕೆಯೂ ಹೆಚ್ಚುತ್ತಾ ಹೋಗುತ್ತದೆ.

ಆದರೆ ಅದೇ ಕಾಲಕ್ಕೆ ನೀರಿನ ಪ್ರಮಾಣವೇನೂ ಹೆಚ್ಚುವುದಿಲ್ಲ. ಹತ್ತು ವರ್ಷದ ಹಿಂದೆ ಬಾಟಲಿ ನೀರು ಎಂದರೇನು ಎಂದು ಜನ ಕೇಳುತ್ತಿದ್ದರು. ವಿದೇಶಿಗರ ಕೈಯಲ್ಲಿ ಮಾತ್ರ ಬಾಟಲಿ ನೀರನ್ನು ನೋಡುತ್ತಿದ್ದೆವು. ಈಗ ಪರಿಸ್ಥಿತಿ ಬದಲಾಗಿದೆ. ಸಾಮಾನ್ಯ ಜನರು ಕೂಡ ಬಾಟಲಿ ನೀರಿನ ಮೊರೆ ಹೋಗಿದ್ದಾರೆ. ಮುಂದೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಬಹುದು.

ಹಳ್ಳಿಗಳಲ್ಲಿ ಕೂಡ ನೀರಿನ ತತ್ವಾರ ಇನ್ನಷ್ಟು ಹೆಚ್ಚಾಗಬಹುದು. ಸರ್ಕಾರ ನೀರು ತಂದುಕೊಡಬೇಕು ಎನ್ನುವುದು ಜನರ ಒತ್ತಾಯ. ಆದರೆ ಆಡಳಿತ ನಡೆಸುವವರು ತಾನೇ ಎಲ್ಲಿಂದ ನೀರು ತಂದುಕೊಟ್ಟಾರು? ಸರ್ಕಾರವೇನು ನೀರು ಉತ್ಪಾದಿಸುವ ಕಾರ್ಖಾನೆಯೇ? ಮುಂದೆ ಅಂತರ್ಜಲಕ್ಕಿಂತಲೂ ಮಳೆ ನೀರು ಸಂಗ್ರಹವೇ ವಾಸಿ ಎಂಬ ಮನೋಭಾವ ಮೂಡಬಹುದು. ಏಕೆಂದರೆ ಈಗಾಗಲೇ ಅಂತರ್ಜಲ ಫ್ಲೋರೈಡ್ಯುಕ್ತವಾಗಿರುವುದು ಎಲ್ಲರಿಗೂ ತಿಳಿದ ವಿಚಾರ.

ಈಗ ಮಳೆ ನೀರನ್ನು ತುಚ್ಛವಾಗಿ ಕಾಣುತ್ತಿದ್ದೇವೆ. ಅದಕ್ಕೆ ಬೆಲೆಯೇ ಇಲ್ಲದಂತಾಗಿದೆ. ಭೂಮಿಯ ಮೇಲಿರುವ ನೀರು ಸಾಕಾಗದು ಎಂದು ತಿಳಿದಾಗ ಜನರಿಗೆ ಬುದ್ಧಿ ಬರುತ್ತದೆ. ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕು! ಮುಂದೆ ನೀರು ಸಂರಕ್ಷಣೆಗೆ ಹೆಚ್ಚು ಒತ್ತು ಕೊಡಬೇಕಾಗುತ್ತದೆ. ನೀರಿನ ಮರುಬಳಕೆಗೆ ಮುಂದಾಗಬೇಕಾಗುತ್ತದೆ. ಮಿತವ್ಯಯಕ್ಕೆ ಪ್ರಾಧಾನ್ಯತೆ ನೀಡಬೇಕಾಗುತ್ತದೆ.
-ಎ.ಆರ್. ಶಿವಕುಮಾರ್, ವಿಜ್ಞಾನಿ, ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ, ಭಾರತೀಯ ವಿಜ್ಞಾನ ಸಂಸ್ಥೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.