ಕಾರಟಗಿ: ಗಣರಾಜ್ಯೋತ್ಸವವನ್ನು ಗುರುವಾರ ಇಲ್ಲಿ ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ಶಾಲಾ, ಕಾಲೇಜ್ ವಿದ್ಯಾರ್ಥಿಗಳು ಪರೇಡ್ ನಡೆಸಿ, ಧ್ವಜದೊಂದಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಗಮನ ಸೆಳೆದರು. ಶಾಲಾ, ಕಾಲೇಜ್ ಸೇರಿದಂತೆ ವಿವಿಧ ಸರ್ಕಾರಿ ಕಛೇರಿ ಹಾಗೂ ಸಂಘಟನೆಗಳಲ್ಲಿ ಧ್ವಜಾರೋಹಣದೊಂದಿಗೆ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಯಿತು.

ಸಮೀಪದ ನವನಗರದ ಕಮ್ಮಾವಾರಿ ಶಿಕ್ಷಣ ಸಂಸ್ಥೆಯ ರೆಡ್ಡಿ ವೀರಣ್ಣ ಸಂಜೀವಪ್ಪ ವಸತಿ ಶಾಲೆಯಲ್ಲಿ ಪ್ರಾಚಾರ್ಯ ಗುರುಮಠ ಧ್ವಜಾರೋಹಣ ಮಾಡಿದರು. ವಿದ್ಯಾರ್ಥಿಗಳು ಪಥ ಸಂಚಲನೆ ನಡೆಸಿ ಗೌರವ ವಂದನೆ ಸಲ್ಲಿಸಿದರು.

ಸಂಸ್ಥೆಯ ಅಧ್ಯಕ್ಷ ಕೊಲ್ಲಾ ಶೇಷಗಿರಿರಾವ್, ಬಿಜೆಪಿ ಮುಖಂಡ ಗುರುಸಿದ್ದಪ್ಪ ಎರಕಲ್, ಸಂಸ್ಥೆ ಕಾರ್ಯದರ್ಶಿ ಎಲ್. ವೀರಭದ್ರರಾವ್, ಪ್ರಾಚಾರ್ಯ ಡಾ. ಮಹ್ಮದ್ ರಫೀಕ್, ಲಿಂಗಾರೆಡ್ಡಿ ಆಲೂರ, ಸಂಗಪ್ಪ, ಸಾಧಿತಾ, ಗಂಗಮ್ಮ ಹಿರೇಮಠ, ಚಂದ್ರಶೇಖರರೆಡ್ಡಿ, ದುರ್ಗಾಪ್ರಸಾದ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿವಿಧ ಸ್ಫರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಕಾರಟಗಿ ತುಂಗಭದ್ರಾ ಲಘು ವಾಹನ ಚಾಲಕರ ಸಂಘದಲ್ಲಿ ಪಿಎಸ್ಐ ಡಿ. ದುರುಗಪ್ಪ ಧ್ವಜಾರೋಹಣ ನೆರವೇರಿಸಿ ಮಾತನಾಡಿ ನಮ್ಮ ಹಕ್ಕುಗಳನ್ನು ಅನುಭವಿಸುವ ಜೊತೆಗೆ ಕರ್ತವ್ಯಗಳನ್ನು ಮಾಡುವ ಮೂಲಕ ದೇಶಪ್ರೇಮ ಮೆರೆಯಬೇಕು ಎಂದರು.

ಸಂಘದ ಅಧ್ಯಕ್ಷ ಗೋವಿಂದ ಈಳಿಗೇರ, ಗೌರವಾಧ್ಯಕ್ಷ ಎಚ್. ಚಾಂದಸಿಂಗ್ ರಜಪೂತ, ಶಿಕ್ಷಣ ಸಂಯೋಜಕ ಕೇರುಪವಾರ್, ಪ್ರಮುಖರಾದ ವೇಣುಗೋಪಾಲಶ್ರೇಷ್ಠಿ, ಕೊಟ್ರಪ್ಪ ಸಜ್ಜನ್, ಮಂಜುನಾಥ ಮಸ್ಕಿ ಮೊದಲಾದವರು ಉಪಸ್ಥಿತರಿದ್ದರು.

ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜ್ ಪ್ರೌಢಶಾಲಾ ವಿಭಾಗದಲ್ಲಿ ಉಪ ಪ್ರಾಚಾರ್ಯ ಶರಣಪ್ಪ ಗೌರಿಪೂರ ಧ್ವಜಾರೋಹಣ ಮಾಡಿದರು.
ಎಸ್ಡಿಎಂಸಿ ಉಪಾಧ್ಯಕ್ಷ ಶರಣಪ್ಪ ಉಪನಾಳ, ವಿಜಯಕುಮಾರ್, ಬಸವರಾಜ್ ಬಿ, ಲಕ್ಷ್ಮಣ ಹುಲಿಗಿ, ಶಂಕ್ರಪ್ಪ, ಹಜರತ್ ಬಾಗಲಿ, ಗುರುಬಸಪ್ಪ ಪಟ್ಟಣಶೆಟ್ಟಿ, ಶಕುಂತಲಾ, ಗೌತಮಿ, ರೋಹಿಣಿ, ಸಲೀಮಾ, ಮೀನಾಕ್ಷಿ ಲಕ್ಷ್ಮೀದಟ್ಟಿ, ವಿ. ಮಂಜುನಾಥ, ಮೌನೇಶ್, ಗುರಪ್ಪಯ್ಯ, ಅಡಿವೆಪ್ಪ ಗುಣಾರಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಗೆ ಭಾಷಣ, ಗಾಯನ, ರಂಗೋಲಿ, ಕ್ವಿಜ್ ಸ್ಫರ್ಧೆಗಳನ್ನು ಏರ್ಪಡಿಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಶಾಂತಿ ನಿಕೇತನ ಪಬ್ಲಿಕ್ ಸ್ಕೂಲ್ನಲ್ಲಿ ರುದ್ರಗೌಡ ನಂದಿಹಳ್ಳಿ ಧ್ವಜಾರೋಹಣ ಮಾಡಿದರು. ಸಂಸ್ಥೆ ಅಧ್ಯಕ್ಷ ಶರಣಪ್ಪ ಅಂಗಡಿ, ಶರಣಯ್ಯ, ಅಶೋಕ, ಸೋಮನಾಥ, ಹನುಮೇಶ್ ಪೂಜಾರ್, ಹಿರೇಮಠ ಮೊದಲಾದವರು ಉಪಸ್ಥಿತರಿದ್ದರು.
ಗಿರಿಜಾ ಮಹಿಳಾ ಮಂಡಳದಲ್ಲಿ ಅಧ್ಯಕ್ಷೆ ಟಿ. ಎಂ. ನೀಲಮ್ಮ ಧ್ವಜಾರೋಹಣ ಮಾಡಿದರು. ಸುರೇಖಾ, ಪ್ರಭಾವತಿ ಶೆಟ್ಟರ್, ಲಕ್ಷ್ಮೀದೇವಿ ಗೋಡಿ, ಸಜ್ಜನ್ ಲಕ್ಷ್ಮೀ, ಅರುಣಾ ಟೀಚರ್ ಮೊದಲಾದವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.