ಆತನಿಗೆ ಎಲ್ಲಾ ಕೆಲಸಕ್ಕೂ ಕಾಲೇ ಆಧಾರ. ಬಡತನದ ಕುಟುಂಬಕ್ಕೆ ಬೆನ್ನೆಲುಬಾಗಿದ್ದ ತಂದೆಯ ಅಕಾಲಿಕ ಮರಣದಿಂದ ಆತ ಎದೆಗುಂದಲಿಲ್ಲ. ಆತ್ಮವಿಶ್ವಾಸಕ್ಕಿಂತ ಬೇರೆ ಸ್ಫೂರ್ತಿಯೇ ಇಲ್ಲ ಎಂಬ ಅಚಲ ನಂಬಿಕೆ ಇತ್ತು. `ಈ ಬದುಕು ನನ್ನಂಥವರಿಗಲ್ಲ~ ಎನ್ನುವ ಭಾವನೆ ಹತ್ತಿರ ಸುಳಿಯದಂತೆ ಮಾಡಿತು.

ಅಂಗವಿಕಲನಾದ ಹಿರಿಯ ಮಗನಿಗೆ ಇಡೀ ಕುಟುಂಬದ ನೊಗ ಹೊರಲು ನೆರವಾಗಿದ್ದು ಆತ ಹುಟ್ಟಿನಿಂದಲೂ ಧ್ಯಾನದಂತೆ ರೂಢಿಸಿಕೊಂಡಿದ್ದ ಚಿತ್ರ ಬಿಡಿಸುವ ಕಲೆ. ಸಂದಿಗ್ಧ ಪರಿಸ್ಥಿತಿಯ್ಲ್ಲಲೂ ಕೈಹಿಡಿದದ್ದೇ ತಾನು ನೆಚ್ಚಿಕೊಂಡ ಕಲೆ.

ಕಳೆದ ಐದು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಮೆಜೆಸ್ಟಿಕ್ನ ಫ್ಲೈಓವರ್, ಕೆ.ಜಿ.ರಸ್ತೆ ಮತ್ತು ಎಂ. ಜಿ. ರಸ್ತೆಯಂತಹ ಜನನಿಬಿಡ ಸ್ಥಳಗಳ ಯಾವುದೋ ಒಂದು ಮೂಲೆಯಲ್ಲಿ ಬಣ್ಣದ ಪೆನ್ನುಗಳನ್ನು ಕಾಲಿನ ಬೆರಳುಗಳಿಗೆ ಸಿಕ್ಕಿಸಿಕೊಂಡು ಹೊಳೆಯುವ ಬಿಳಿ ಹಾಳೆಗಳ ಮೇಲೆ ಚಿತ್ರಗಳನ್ನು ಮೂಡಿಸಿದ ಮಂಜು ಅವರ ಹಿನ್ನೆಲೆ ಇದು. ಮಂಜು ಕಲೆ ಮೂಡಿಸುವುದನ್ನು ದಾರಿಹೋಕರು ಆಶ್ಚರ್ಯದಿಂದ ನೋಡುತ್ತಾರೆ. ಬಿಡಿಸಿದ ಚಿತ್ರದ ಮೇಲೆ ಚಿಲ್ಲರೆ ಪೈಸೆಗಳು ಬೀಳುತ್ತಿದ್ದ ಕಾಲ ಅದಾಗಿತ್ತು.

ಮೂಲತಃ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಸಿದ್ದಾಪುರ ಗೇಟ್ನವರಾದ ಮಂಜು ಅವರ ತಂದೆ-ತಾಯಿಗೆ ಮೂವರು ಮಕ್ಕಳು. ಅವರಲ್ಲಿ ಇವರೇ ಮೊದಲನೆಯವರು. ಉಳಿದಂತೆ ಒಬ್ಬ ಸಹೋದರ ಹಾಗೂ ತಂಗಿ ಊರಿನಲ್ಲಿದ್ದಾರೆ.

`ಕೇವಲ ಎಂಟನೆ ತರಗತಿವರೆಗೆ ಮಾತ್ರ ಓದಿರುವ ನಾನು ಶಾಲೆಯಲ್ಲಿ ಹೆಚ್ಚಿನ ಸಮಯವನ್ನು ಚಿತ್ರ ಬಿಡಿಸುವುದರಲ್ಲೇ ಕಳೆಯುತ್ತ್ದ್ದಿದೆ. ಓದಿಗೆ ಬದಲಾಗಿ ರೂಢಿಸಿಕೊಂಡ ನನ್ನ ಈ ಚಿತ್ರಬಿಡಿಸುವ ಗೀಳು ತಂದೆಯವರ ಮರಣಾನಂತರ ಕುಟುಂಬ ಮುನ್ನಡೆಸಲು ಆಧಾರವಾಯಿತು.

ಜತೆಗೆ ಇಡೀ ಸಂಸಾರದ ಹೊಣೆ ಹೊತ್ತಿದ್ದ ನನ್ನ ತಾಯಿಗೆ ಬೆನ್ನುಲುಬಾಗಿ ನಿಂತೆ. ಓದುವುದನ್ನು ನಿಲ್ಲಿಸಿ, ಪ್ರತಿನಿತ್ಯ ತಾಲ್ಲೂಕಿನ ಸುತ್ತಮುತ್ತ ಇರುವ ಶಾಲಾ- ಕಾಲೇಜುಗಳಿಗೆ ಭೇಟಿ ನೀಡಿ ಕಾಲಿನಲ್ಲಿ ಚಿತ್ರ ಬಿಡಿಸಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ನೀಡುತ್ತಿದ್ದ ಚಿಲ್ಲರೆ ಹಣವನ್ನು ಅಮ್ಮನಿಗೆ ತಂದು ಕೊಡುತ್ತಿದ್ದೆ. ತಮ್ಮ ಮತ್ತು ತಂಗಿಯನ್ನು ಓದಿಸುವ ಆಸೆಯಿಂದ ಪ್ರತಿನಿತ್ಯ ನನ್ನ ಈ ಕಾಯಕವನ್ನು ಮುಂದುವರೆಸುತ್ತಿದ್ದೆ~ ಎನ್ನುತ್ತಾ ಮಂಜು ಗದ್ಗದಿತರಾಗುತ್ತಾರೆ.

ನಗರಕ್ಕೆ ಪಯಣ
ಶಾಲಾ- ಕಾಲೇಜುಗಳಲ್ಲಿ ಅಲೆಯುತ್ತಾ ತಮ್ಮ ಚಿತ್ರ ಬಿಡಿಸುವ ಕಾಯಕ ನಡೆಸುತ್ತಿದ್ದ ಮಂಜು ಒಂದೆರಡು ಬಾರಿ ಸ್ನೇಹಿತರ ಜತೆ ಬೆಂಗಳೂರಿಗೆ ಬಂದು ಹೋಗಿದ್ದರು. ಈ ನಗರದಲ್ಲೇ ನೆಲೆಸಿದರೆ ಹೇಗೆ ಎಂಬ ಯೋಚನೆ ಮೂಡಿದ್ದೇ, ಅಮ್ಮನ ಆಶೀರ್ವಾದ ಪಡೆದು ಬೆಂಗಳೂರು ಬಸ್ಸು ಹತ್ತಿದರು.

ಆರಂಭದಲ್ಲಿ ಇಲ್ಲಿ ನೆಲೆಸಿದ್ದ ಸ್ನೇಹಿತರ ಆಶ್ರಯ ಪಡೆದ ಮಂಜು, ಕೆಲಸಕ್ಕಾಗಿ ಅಲೆದರು. ಆದರೆ ಇವರ ದೈಹಿಕ ಪರಿಸ್ಥಿತಿಯನ್ನು ಗಮನಿಸಿದವರು ಕೆಲಸ ನೀಡಲು ಮುಂದಾಗಲಿಲ್ಲ.

ವಿಧಿಯಿಲ್ಲದೆ ಕಾಲಿನಿಂದ ಚಿತ್ರ ಬಿಡಿಸುವ ತಮ್ಮ ಮೂಲವೃತ್ತಿಯನ್ನೇ ನಂಬಿಕೊಂಡರು. ಮೊದಲಿಗೆ ಮೆಜೆಸ್ಟಿಕ್ ಬಸ್ ನಿಲ್ದಾಣದ ಮೇಲ್ಸೇತುವೆ ಬಳಿ ಪ್ಲಾಸ್ಟಿಕ್ ಚೀಲವೊಂದನ್ನು ಹಾಸಿಕೊಂಡು ಕುಳಿತು ತಮ್ಮ ಕಾಲಿನಿಂದ ಬಿಳಿ ಹಾಳೆಗಳ ಮೇಲೆ ಚಿತ್ರ ಬಿಡಿಸತೊಡಗಿದರು.

ಮೇಲ್ಸೇತುವೆ ಮಾರ್ಗದಲ್ಲಿ ಓಡಾಡುವ ಪ್ರಯಾಣಿಕರು ಇವರ ಶ್ರಮವನ್ನು ಗಮನಿಸಿ ಚಿತ್ರದ ಮೇಲೆ ಚಿಲ್ಲರೆ ಕಾಸು ಎಸೆಯತೊಡಗಿದರು. ಹೀಗೆಯೇ ಸ್ವಲ್ಪ ದಿನ ಕಳೆಯಿತು. ನಂತರ ಮೇಲ್ಸೆತುವೆ ಮೇಲೆ ಗಸ್ತು ತಿರುಗುವ ಸಹೃದಯಿ ಪೊಲೀಸರೊಬ್ಬರ ಪರಿಚಯವಾಯಿತು. ಅವರು ಗಾಂಧಿನಗರದ ಲಾಡ್ಜ್ವೊಂದರ ಮಾಲೀಕರಿಗೆ ಶಿಫಾರಸು ಮಾಡಿ, ಕಡಿಮೆ ಬಾಡಿಗೆಗೆ ಚಿಕ್ಕ ರೂಮು ಸಿಗುವಂತೆ ಮಾಡಿದರು.

ಕೀಳರಿಮೆ ಇಲ್ಲ
`ನನ್ನ ಈ ಕೆಲಸ ನೋಡುಗರಿಗೆ ಭಿಕ್ಷೆ ಬೇಡುವಂತೆ ಕಂಡರೂ ನನಗೆಂದೂ ನನ್ನ ಅದರ ಕುರಿತು ಕೀಳರಿಮೆ ಮೂಡಿಲ್ಲ. ಬದಲಿಗೆ ನಾನು ಯಾರೊಬ್ಬರ ಮೇಲೂ ಅವಲಂಬಿತನಾಗದೆ ನನ್ನ ಕಾಲ ಮೇಲೆ ನಿಂತಿದ್ದೇನೆ. ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದೇನೆಂಬ ಸಾರ್ಥಕತೆಯೂ ನನಗಿದೆ~ ಎನ್ನುತ್ತಾರೆ ಮಂಜು.

ನಗರದ ಎರಡು ಮೂರು ಸ್ಥಳಗಳಲ್ಲಿ ಚಿತ್ರ ಬಿಡಿಸುವುದಿಂದ ಬರುವ ಚಿಲ್ಲರೆ ಕಾಸಿನಲ್ಲಿಯೇ ಪ್ರತಿ ತಿಂಗಳು ಅಮ್ಮನಿಗೆ ಮಂಜು ಒಂದೂವರೆಯಿಂದ ಎರಡು ಸಾವಿರ ರೂಪಾಯಿ ಕಳುಹಿಸಿಕೊಡುತ್ತಾರೆ.

ಒಂದಿಷ್ಟು ಬಂಡವಾಳ ಇಟ್ಟುಕೊಂಡು ತಮ್ಮೂರಿಗೆ ಮರಳಿ ಏನಾದರೊಂದು ವ್ಯಾಪಾರ ಮಾಡಬೇಕೆಂಬುದು ಮಂಜು ಕನಸು. ಅದನ್ನು ನನಸಾಗಿಸಿಕೊಳ್ಳಲು ಐದು ವರ್ಷಗಳಿಂದ ನಗರದಲ್ಲಿ ಅವರು ಕಾಲಿನ ಬೆರಳುಗಳಿಂದ ಚಿತ್ರ ಮೂಡಿಸುತ್ತಲೇ ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.