ಕೆಂಭಾವಿ: ಕೃಷ್ಣಾ ಮೇಲ್ದಂಡೆ ಯೋಜನೆಯ ನಾರಾಯಣಪುರ ಎಡದಂಡೆ ಕಾಲುವೆಯ ನೀರಾವರಿ ಪ್ರದೇಶದಲ್ಲಿ ಕಾಲುವೆಯ ನೀರಿನ ಸಹಾಯದಿಂದ ಬತ್ತ ಬೆಳೆಯುವ ರೈತರು, ಈ ಬಾರಿ ತೊಂದರೆ ಅನುಭವಿಸುವಂತಾಗಿದೆ. ಮುಂಗಾರು ಹಂಗಾಮಿನ ಬೆಳೆ ಬೆಳೆಯಲು ಕೊಳವೆಬಾವಿ ಹಾಗೂ ಹಳ್ಳದ ನೀರನ್ನು ಉಪಯೋಗಿಸಿ, ಗದ್ದೆಯಲ್ಲಿ ಸಸಿ ತಯಾರು ಮಾಡುವಂತಾಗಿದೆ.

ಸಾಮಾನ್ಯವಾಗಿ ಪ್ರತಿ ವರ್ಷ ಜುಲೈ 15ರಿಂದ ನಾರಾಯಣಪುರ ಎಡದಂಡೆ ಕಾಲುವೆಗೆ ನೀರು ಹರಿಸಲಾಗುತ್ತದೆ. ರೈತರು ಜೂನ್ ಮೊದಲ ವಾರದಿಂದಲೇ ಸಸಿಗಳನ್ನು ಬೆಳೆಸಲು ಪ್ರಾರಂಭಿಸುತ್ತಾರೆ. ಇದೀಗ ಸಸಿಗಳು 25 ರಿಂದ 35 ದಿನಗಳು ತುಂಬುತ್ತಿದ್ದು, ಜಲಾಶಯದಲ್ಲಿ ನೀರು ಇಲ್ಲದೇ ಇರುವುದರಿಂದ ದಿಕ್ಕು ತೋಚದಂತಾಗಿದ್ದಾರೆ.

ಮಳೆ ಸುರಿದು, ಜಲಾಶಯದಿಂದ ಕಾಲುವೆಗೆ ನೀರು ಬಿಡಲಾಗುವುದು ಎಂಬ ವಿಶ್ವಾಸದಲ್ಲಿಯೇ ಸಸಿಗಳ ತಯಾರಿಯನ್ನು ಜೋರಾಗಿಯೇ ನಡೆಸಿದ್ದಾರೆ. ಕಳೆದ ಬಾರಿ ಹಿಂಗಾರಿನಲ್ಲಿ ನವೀಕರಣಕ್ಕಾಗಿ ಕಾಲುವೆಗೆ ನೀರು ಸ್ಥಗಿತಗೊಳಿಸಲಾಗಿತ್ತು. ಇದರಿಂದಾಗಿ ಒಂದು ಬೆಳೆ ಕಳೆದುಕೊಂಡ ರೈತರು, ಎರಡೂ ಬೆಳೆಗಳ ಹಣವನ್ನು ಪಡೆಯುವ ಹುಮ್ಮಸ್ಸಿನಲ್ಲಿ ಭರ್ಜರಿ ತಯಾರಿ ನಡೆಸಿದ್ದಾರೆ, ಸಸಿಗಳ ಬೆಳವಣಿಗೆಗೆ ಮಳೆರಾಯ ಕೂಡಾ ಸಾಥ್ ನೀಡಿದ್ದು, ಉತ್ತಮ ಸಸಿಗಳು ತಯಾರಾಗುತ್ತಿವೆ. ಕಾಲುವೆಗೆ ನೀರು ಬರುವುದನ್ನೇ ರೈತರು ಎದುರು ನೋಡುತ್ತಿದ್ದಾರೆ. ಕಾಲುವೆಯ ನವೀಕರಣ ಕಾಮಗಾರಿ ಮುಗಿದಿರುವುದರಿಂದ ಈ ಬಾರಿ ಕಾಲುವೆಗೆ 10 ಸಾವಿಕ ಕ್ಯೂಸೆಕ್ ನೀರು ಹರಿಯಲಿದೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದು, ನೀರು ಸಿಗದೇ ಪರಿತಪಿಸುತ್ತಿರುವ ಕೆಳಭಾಗದ ರೈತರಲ್ಲೂ ಹೆಚ್ಚಿನ ಉತ್ಸಾಹ ಮೂಡಿಸಿದೆ. ಕಾಲುವೆಗೆ ನೀರು ಹರಿದಾಗ ಮಾತ್ರ ಇದರ ನಿಜ ಬಣ್ಣ ಬಯಲಾಗಲಿದೆ ಎಂದು ರೈತ ಮುಖಂಡರು ಹೇಳುತ್ತಿದ್ದಾರೆ.

ಸಸಿಗಳಿಗೆ 45 ದಿನಗಳಾದ ನಂತರ ನಾಟಿ ಮಾಡಲು ಸಿದ್ಧಗೊಳ್ಳುತ್ತವೆ. 45 ದಿನಗಳಿಗಿಂತ ಹೆಚ್ಚಾದರೆ, ಇಳುವರಿಯ ಮೇಲೆ ಪರಿಣಾಮ ಬೀರಲಿದೆ ಎಂದು ರೈತ ರವಿ ಹೇಳುತ್ತಾರೆ.

ಈಗಾಗಲೇ ಸಸಿಗಳನ್ನು ತಯಾರು ಮಾಡಿರುವ ರೈತರಿಗೆ ನಿಗದಿತ ಸಮಯದಲ್ಲಿ ಕಾಲುವೆ ನೀರು ದೊರೆಯಬೇಕು. ಇಲ್ಲವಾದಲ್ಲಿ, ಈ ಬಾರಿಯ ಮುಂಗಾರು ಬೆಳೆಯನ್ನೂ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಕನಿಷ್ಠ ಮಹಾರಾಷ್ಟ್ರದಲ್ಲಾದರೂ ಉತ್ತಮ ಮಳೆ ಬೀಳಲಿ ಎಂದು ರೈತರು ಪ್ರಾರ್ಥಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.