ಟಿ.ಜಾನ್ ಕಾಲೇಜು ಕೊಠಡಿಗಳಲ್ಲಿ ಆವತ್ತು ಬೇಕರಿ ತಿಂಡಿಗಳ ಘಮಲು. ಹೋಟೆಲ್ ಮ್ಯಾನೇಜ್ಮೆಂಟ್ ಕಲಿಯುತ್ತಿರುವ ವಿದ್ಯಾರ್ಥಿಗಳೆಲ್ಲರೂ ಸೇರಿಕೊಂಡು ಸ್ವಾದಿಷ್ಟ ಹಾಗೂ ರುಚಿರುಚಿಯಾದ ಬ್ರೆಡ್, ಕೇಕ್, ಚಾಕೋ ಲಾವಾ ಕೇಕ್, ಪೇಸ್ಟ್ರಿ ಟಾರ್ಟ್ಸ್ ಹೀಗೆ ನಾನಾ ನಮೂನೆಯ ಬೇಕರಿ ತಿನಿಸುಗಳನ್ನು ತಯಾರಿಸಿ ಅಲ್ಲಿದ್ದವರಿಗೆ ತಮ್ಮ ಕೈ ರುಚಿ ತೋರಿಸಿದರು. ವಿದ್ಯಾರ್ಥಿಗಳು ಸಿದ್ಧಪಡಿಸಿದ ತಿನಿಸುಗಳನ್ನು ತಿಂದವರು ಮೆಚ್ಚಿ ಅವರ ಬೆನ್ನು ತಟ್ಟಿದರು.

ಹೋಟೆಲ್ ನಿರ್ವಹಣೆ ಕೋರ್ಸ್ ಕಲಿಯುತ್ತಿರುವ ವಿದ್ಯಾರ್ಥಿಗಳಿಗಾಗಿ ಟಿ. ಜಾನ್ ಕಾಲೇಜು `ದಿ ಬೇಕರಿ ವರ್ಕ್ ಷಾಪ್~ ಅನ್ನು ಈಚೆಗೆ ಆಯೋಜಿಸಿತ್ತು. ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳು ಭಾಗವಹಿಸುವ ಮೂಲಕ ಬೇಕರಿ ತಿಂಡಿ ತಯಾರಿಕೆಯಲ್ಲಿ ಪ್ರಾಯೋಗಿಕ ಅನುಭವ ಪಡೆದುಕೊಂಡರು.

ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ನಾನಾ ಬಗೆಯ ಸ್ವಾದಿಷ್ಟ ಹಾಗೂ ರುಚಿಕರ ಬೇಕರಿ ತಿನಿಸುಗಳನ್ನು ತಯಾರಿಸಿದರು. ತಿನಿಸು ತಯಾರಿಕೆ ಕೌಶಲ್ಯ ಹಾಗೂ ಕೈರುಚಿ ಮೂಲಕ ವಿದ್ಯಾರ್ಥಿಗಳು ನೆರೆದಿದ್ದ ಸಭಿಕರಿಗೆ ರಸದೌತಣ ಉಣಿಬಡಿಸಿದರು. ಅಲ್ಲದೇ ತಮ್ಮ ಪಾಕ ಕೌಶಲ್ಯ ಪ್ರದರ್ಶಿಸಲು ಹಾಗೂ ಬೇಕರಿ ತಿಂಡಿ ತಿನಿಸುಗಳನ್ನು ತಯಾರಿಸುವ ಕುರಿತು ಮತ್ತಷ್ಟು ಕಲಿಯಲು ಅವಕಾಶ ಮಾಡಿಕೊಟ್ಟ ಕಾಲೇಜಿಗೆ ಅವರು ಅಭಿನಂದನೆಯನ್ನೂ ಸಲ್ಲಿಸಿದರು.

`ವಿದ್ಯಾರ್ಥಿಗಳು ಕಲಿಯುವುದರೊಂದಿಗೆ ಮೋಜಿನ ಕ್ಷಣಗಳನ್ನು ಸವಿಯುವ ಸಲುವಾಗಿ ಈ ಕಾರ್ಯಾಗಾರ ಆಯೋಜಿಸಲಾಗಿತ್ತು. ಈ ಕಾರ್ಯಾಗಾರ ವಿದ್ಯಾರ್ಥಿಗಳ ಕೈರುಚಿ, ಕೌಶಲ್ಯ ಹಾಗೂ ಚುರುಕುತನವನ್ನು ತಿಳಿಯಲು ಅವಕಾಶ ಮಾಡಿಕೊಟ್ಟಿತು. ಕಾರ್ಯಾಗಾರ ಯಶಸ್ವಿಯಾಗಿಲು ಶ್ರಮಿಸಿದ ಅಪ್ಪೆರೆಟ್ ಕ್ಲಬ್ನ ಶ್ರಿಧರ್ ಕೃಷ್ಣನ್ ಮತ್ತು ತಂಡದ ಸದಸ್ಯರಿಗೆ ನನ್ನ ಅಭಿನಂದನೆ~ ಎಂದು ಟಿ. ಜಾನ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಪಿ. ನೀಲಾವತಿ ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.