ಮುಂಬೈ (ಪಿಟಿಐ): ಸೇವಾ ತೆರಿಗೆ ಇಲಾಖೆಯು ಕಿಂಗ್ಫಿಶರ್ಗೆ ಸೇರಿದ 40 ಬ್ಯಾಂಕ್ ಖಾತೆಗಳನ್ನು ಶನಿವಾರ ಸ್ಥಗಿತಗೊಳಿಸಿದೆ. ಈ ಮೂಲಕ ಕಳೆದ ಕೆಲವು ದಿನಗಳಿಂದ ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದ ಕಿಂಗ್ಫಿಶರ್ಗೆ ಮತ್ತೊಂದು ತೊಡಕು ಎದುರಾಗಿದೆ.

ಕಿಂಗ್ಫಿಶರ್ ಬಾಕಿ ಉಳಿಸಿಕೊಂಡಿದ್ದ ಸುಮಾರು 40 ಕೋಟಿ ರೂ.ನಷ್ಟು ಸೇವಾ ತೆರಿಗೆಯನ್ನು ಫೆಬ್ರುವರಿ 29ರೊಳಗೆ ಪಾವತಿಸುವಂತೆ ಗಡುವು ನೀಡಲಾಗಿತ್ತು. ಆದರೆ ಸಂಸ್ಥೆ ಗಡುವು ಮೀರಿದರೂ ಪಾವತಿ ಮಾಡದ ಕಾರಣ ಅದರ 40 ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಸೇವಾ ತೆರಿಗೆ ಇಲಾಖೆ ಆಯುಕ್ತ ಎಸ್.ಕೆ. ಸಾಲೊಂಕಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಈ ಮಧ್ಯೆ ನಷ್ಟದಲ್ಲಿರುವ ಕಿಂಗ್ಫಿಶರ್ ಬಗೆಗೆ ಪ್ರತಿಕ್ರಿಯಿಸಿರುವ ಕಾರ್ಪೊರೇಟ್ ವ್ಯವಹಾರಗಳ ಸಚಿವ ವೀರಪ್ಪ ಮೋಯಿಲಿ ಅವರು ಕಿಂಗ್ಫಿಶರ್ ಉಳಿಸುವುದಕ್ಕೆ ಅದರ ಮಾಲೀಕ ವಿಜಯ್ ಮಲ್ಯ ಅವರು ಕೆಲವು ಸಕಾರಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಹೇಳಿದ್ದಾರೆ. ಕಿಂಗ್ಫಿಶರ್ನ ಇಂದಿನ ದುರವಸ್ಥೆಗೆ ಅದನ್ನು ಸರಿಯಾಗಿ ನಿರ್ವಹಣೆ ಮಾಡದೇ ಇದ್ದದ್ದೇ ಕಾರಣ ಎಂದು ಅವರು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.