ಚಿತ್ರ ನಿರ್ಮಾಣ ಸಂಸ್ಥೆಯಾದ ರಾಕ್ಲೈನ್ ಎಂಟರ್ಪ್ರೈಸಸ್ ಕಿರುತೆರೆಯಲ್ಲಿ ಧಾರಾವಾಹಿಗಳನ್ನು ನಿರ್ಮಿಸುವತ್ತ ಮನಸ್ಸು ಮಾಡಿದೆ.

ಜೀ ಕನ್ನಡ ವಾಹಿನಿಯಲ್ಲಿ ‘ಜನುಮದ ಜೋಡಿ’ ಎಂಬ ಧಾರಾವಾಹಿ ನಿರ್ಮಿಸುತ್ತಿರುವ ರಾಕ್ಲೈನ್ ವೆಂಕಟೇಶ್ ಆ ಮೂಲಕ ಕಿರುತೆರೆಯ ನಿರ್ಮಾಪಕರಾಗಿದ್ದಾರೆ.

ಸಾಮಾಜಿಕ ಕಥಾಕಲ್ಪನೆಯೊಂದಿಗೆ ಪ್ರೀತಿ, ಮಮತೆಯ ದಾರಿಯೊಳಗೆ ನಡೆಯುವ ಜನುಮದ ಜೋಡಿಯ ಕಥೆ ಇದಾಗಿದೆ. ಕಥೆಗೆ ಪುನರ್ಜನ್ಮದ ನಂಟು ಕೂಡ ಬೆಸೆದುಕೊಂಡಿದೆ.

ನೈಜ ಘಟನೆ ಆಧರಿಸಿರುವ ಧಾರಾವಾಹಿಯನ್ನು ರಾಘು ಶಿವಮೊಗ್ಗ ನಿರ್ದೇಶಿಸುತ್ತಿದ್ದು, ರಾಜಸ್ತಾನದ ಜೈಪುರ ಸೇರಿದಂತೆ ಹಲವು ಸ್ಥಳಗಳಲ್ಲಿ ಚಿತ್ರೀಕರಣ ನಡೆದಿದೆ. ವಿವೇಕ್ ಸಿಂಹ ನಾಯಕನಾಗಿದ್ದು, ನೇಹಾ ಪಾಟೀಲ್ ನಾಯಕಿ.

ಧಾರಾವಾಹಿಯು ಆಗಸ್ಟ್ 8ರಿಂದ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8 ಗಂಟೆಗೆ ಪ್ರಸಾರಾವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.