ದೊರೆಯ ವಿರುದ್ಧ ಇನ್ನಾರಲ್ಲಿ ದೂರುವುದಯ್ಯ!
ಫೆ. 27ರಂದು ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ 69ನೆಯ ಜನ್ಮದಿನವನ್ನು ಸಂಭ್ರಮ ಹಾಗೂ ಸಂತೋಷದಿಂದ ಆಚರಿಸಿಕೊಂಡರು. ಕೆಲವು ಗುಡಿಗಳಿಗೆ ಹೋಗಿ ಪೂಜೆ ಸಲ್ಲಿಸಿದರು. ಇದು ಕೇವಲ ಕೌಟುಂಬಿಕ ಅಥವಾ ಸೀಮಿತ ವಲಯದ ಸಂಭ್ರಮವಾಗಬೇಕಿತ್ತು. ಆದರೆ ಇಲ್ಲೂ ನಿಯಮಗಳ ಉಲ್ಲಂಘನೆಯಾಯಿತು.

ಹಿಂದೆ ಧರ್ಮಸಿಂಗ್, ಮಲ್ಲಿಕಾರ್ಜುನ ಖರ್ಗೆ ಹಾಗೂ ಕುಮಾರಸ್ವಾಮಿ ಬೆಂಬಲಿಗರು ಮಾಡಿದಂತೆಯೇ, ಇವರ ಬೆಂಬಲಿಗರೂ ವಿಧಾನಸೌಧದ ಬಳಿಯ ಬಸವಣ್ಣನವರ ಪ್ರತಿಮೆಯ ಸುತ್ತಲೂ ಜಾಹೀರಾತು ಫಲಕಗಳನ್ನು ನಿಲ್ಲಿಸಿದರು. ಆದರೆ ವ್ಯತ್ಯಾಸ ಇಷ್ಟೇ. ಈ ಫಲಕದ ಅಬ್ಬರದಲ್ಲಿ ಬಸವಣ್ಣನವರ ಪ್ರತಿಮೆಯೇ ಮರೆಯಾಗಿತ್ತು.

ಶಾಸಕರಾದ ಜಿ. ಸೋಮಶೇಖರರೆಡ್ಡಿಯವರು ಯಡಿಯೂರಪ್ಪನವರ ಸುಮಾರು 25 ಅಡಿಗಳ ಎತ್ತರದ ಫ್ಲೆಕ್ಸ್ ಹಾಕಿದ್ದರು. ಹೀಗಾಗಿ ಬಸವಣ್ಣನವರ ಶಿಲ್ಪ ಕಾಣುತ್ತಲೇ ಇರಲಿಲ್ಲ. ಬಹುಶಃ ರೆಡ್ಡಿಯವರ ಕಂಗಳಲ್ಲಿ ಯಡಿಯೂರಪ್ಪನವರು ಜಗಜ್ಯೋತಿ ಬಸವೇಶ್ವರರಿಗಿಂತ ದೊಡ್ಡವರು!

ಈ ಸಂದರ್ಭದಲ್ಲಿ ನನಗೆ ಬಸವಣ್ಣನವರ ಒಂದು ವಚನ ನೆನಪಾಗುತ್ತದೆ.
ಏರಿ ನೀರುಂಬಡೆ, ಬೇಲಿ ಕೆಯ್ಯ ಮೇವಡೆ,
ನಾರಿ ತನ್ನ ಮನೆಯಲ್ಲಿ ಕಳುವಡೆ,
ತಾಯ ಮೊಲೆವಾಲು ನಂಜಾಗಿ ಕೊಲುವಡೆ
ಇನ್ನಾರಿಗೆ ದೂರುವೆನಯ್ಯಾ ಕೂಡಲಸಂಗಮದೇವಾ?
ಆದರೆ ಜನತಂತ್ರದಲ್ಲಿ ದೊರೆಯ ವಿರುದ್ಧ ಜನತೆಯಲ್ಲಿ ದೂರುವುದೇ ಸರಿ! ಅಲ್ಲವೆ?
-ಡಾ. ಹೆಚ್. ಚಂದ್ರಶೇಖರ್

ಬ್ಯಾಂಕ್, ಎಟಿಎಂ ಬೇಕು
ಸರ್ ಎಂ. ವಿಶ್ವೇಶ್ವರಯ್ಯ 3,4,5,6 ಮತ್ತು 7ನೇ ಬಡಾವಣೆ ಒಳಗೊಂಡ ಉಲ್ಲಾಳು, ಉಲ್ಲಾಳು ಉಪನಗರ, ರೈಲ್ವೆ ಬಡಾವಣೆ, ಭವಾನಿ ನಗರ, ಉಪಕಾರ್ ಲೇಔಟ್, ಬಾಲಾಜಿ ಲೇಔಟ್, ಮಂಗನಹಳ್ಳಿ, ವಿನಾಯಕ ಬಡಾವಣೆಗಳು ಜನಭರಿತ ಪ್ರದೇಶವಾಗಿವೆ.ಆದರೆ ಇಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಶಾಖೆ ಹಾಗೂ ಎಟಿಎಂ ಸೌಲಭ್ಯ ಇಲ್ಲ. ಇದರಿಂದ ತುಂಬ ಅನಾನುಕೂಲ ಆಗುತ್ತಿದೆ. ಸಂಬಂಧಿಸಿದವರು ಗಮನಿಸಲು ಮನವಿ.
- ವೈ.ಎಸ್. ಕೃಷ್ಣಮೂರ್ತಿ

ಉದ್ಯಾನ ದುರವಸ್ಥೆ
ಮಹಾಲಕ್ಷ್ಮಿಪುರದ ನಾಗಪುರ ವಾರ್ಡ್ನಲ್ಲಿರುವ ಸ್ವಾಮಿ ವಿವೇಕಾನಂದ ಉದ್ಯಾನವನ ಸುತ್ತಲಿನ ನಾಗರಿಕರಿಗೆ ವರದಾನವಾಗಿದೆ. ಕಳೆದ ಮೂರು ತಿಂಗಳ ಹಿಂದೆ ಈ ಉದ್ಯಾನವನ್ನು ನವೀಕರಣ ಮಾಡಲು ತರಾತುರಿಯಲ್ಲಿ ಕಾಮಗಾರಿ ಮಾಡಲಾಯಿತು. ಆದರೆ, ಕಾಮಗಾರಿ ಕೈಗೊಂಡ ಗುತ್ತಿಗೆದಾರರು ಅರ್ಧಂಬರ್ಧ ಕೆಲಸ ಮಾಡಿದ್ದು, ಪಾರ್ಕ್ ಈಗ ಅವ್ಯವಸ್ಥೆಯ ಆಗರವಾಗಿದೆ. ಸಂಬಂಧಪಟ್ಟ ಪಾಲಿಕೆ ಅಧಿಕಾರಿಗಳು ಸದಸ್ಯರು ಇತ್ತ ಗಮನಹರಿಸಿ ಪಾರ್ಕ್ನಲ್ಲಿ ಕುಳಿತುಕೊಳ್ಳಲು, ಮಕ್ಕಳಿಗೆ ಆಟವಾಡಲು ಕ್ರಮ ಕೈಗೊಳ್ಳಬೇಕಾಗಿ ವಿನಂತಿ.
-ಎಚ್.ಡಿ. ಲಕ್ಷ್ಮೀನಾರಾಯಣ

ಇ-ಟೋಕನ್ ಅವಸರವಿರಲಿಲ್ಲ
ಸಾರಿಗೆ ಸಚಿವರು ಇತ್ತೀಚೆಗೆ ಆರ್ಟಿಒ ಕಛೇರಿಯಲ್ಲಿ ಇ-ಟೋಕನ್ ಜಾರಿಗೊಳಿಸಿದರು. ಮದ್ಯವರ್ತಿಗಳ ಹಾವಳಿ ತಡೆಯಲು ಈ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂಬ ಹೇಳಿಕೆ ಓದಿದಾಗ ನನಗೆ ನಗು ಬಂತು. ಇಂದು ಇದಕ್ಕಿಂತ ಮುಖ್ಯವಾಗಿ ಆಗಬೇಕಾಗಿದ್ದು ರಾಜ್ಯದ ಎಲ್ಲಾ ಆರ್ಟಿಒ ಕಛೇರಿಗಳಲ್ಲಿ ಕಂಪ್ಯೂಟರ್ ನೆಟ್ವರ್ಕ್ ಸೌಲಭ್ಯ. ಭಾರತದ ಸಿಲಿಕಾನ್ ವ್ಯಾಲಿ ಎನಿಸಿರುವ ಬೆಂಗಳೂರಿನಲ್ಲಿ ಕಂಪ್ಯೂಟರೀಕರಣ ಕುಂಟುತ್ತಲೇ ಸಾಗುತ್ತಿದೆ. ಸಾರಿಗೆ ಇಲಾಖೆಯಲ್ಲಿ ಜಂಟಿ ಆಯುಕ್ತರಾಗಿದ್ದ ಶಾಂಭಟ್ ಕಾಲದಿಂದಲೂ ಕಂಪ್ಯೂಟರೀಕರಣ ಶೀಘ್ರವಾಗಿ ಮಾಡುವುದಾಗಿ ಅಧಿಕಾರಶಾಹಿ ಹೇಳಿಕೆಗಳನ್ನು ನೀಡುತ್ತಲೆ ಬಂದಿದೆ.

ವಾಹನದ ಮಾಲೀಕರಿಗೆ ತುರ್ತಾಗಿ ಹಣದ ಅವಶ್ಯಕತೆ ಇದ್ದಲ್ಲಿ ಅದನ್ನು ಮಾರಾಟ ಮಾಡಬೇಕೆಂದರೆ ಹರಸಾಹಸ ಮಾಡಬೇಕು. ಆರ್ಟಿಒ ಕಚೇರಿಗಳಲ್ಲಿ ವಾಹನ ತಿರುವಳಿ ಪತ್ರ (ಕ್ಲಿಯರೆನ್ಸ್ ಸರ್ಟಿಫಿಕೇಟ್) ಪಡೆಯಲು ಸಾವಿರಾರು ರೂಪಾಯಿ ವೆಚ್ಚವಾಗುತ್ತದೆ. ಆರ್ಟಿಒ ಕಚೇರಿಗಳು ಕಂಪ್ಯೂಟರೀಕರಣವಾಗಿದ್ದರೆ ಈ ಕೆಲಸ ಸುಲಭವಾಗಿ ಆಗುತ್ತಿತ್ತು. ಇಂದು ವಾಹನ ಮಾಲೀಕ ವಾಹನ ಮಾರಾಟವಾಗಿದ್ದರೆ ಅದು ವರ್ಗಾವಣೆ ಆಗಿದೆ ಇಲ್ಲವೆ ಎಂದು ತಿಳಿಯಲು ಕಛೇರಿಗೆ ಬರಬೇಕು. ಕೋಟ್ಯಾಂತರ ರೂಪಾಯಿ ಮೌಲ್ಯದ ಷೇರುಗಳನ್ನು ಮನೆಯಿಂದಲೇ ಬೇರೆಯವರ ಹೆಸರಿಗೆ ವರ್ಗಾವಣೆ ಮಾಡುವ ಸೌಲಭ್ಯ ಇರುವ ಕಾಲದಲ್ಲಿ ಆರ್ಟಿಒ ಇಲಾಖೆ ಓಬೀರಾಯನ ಕಾಲದಲ್ಲೇ ಇರುವುದು ನಾಚಿಕೇಗೇಡಿನ ಸಂಗತಿ.
-ಬಿ.ಎಸ್.ಸಿ. ಶೇಖರ್

ಬಸ್ಸಿನ ಅನಾನುಕೂಲ
ನಾನು ವಿಜಯನಗರದ ಕಾವೇರಿ ಬಡಾವಣೆಯ ನಿವಾಸಿ. ಮೊದಲು, ಬಿ.ಎಂ.ಟಿ.ಸಿ. ಅತ್ಯುತ್ತಮ ವ್ಯವಸ್ಥೆಗೆ ನನ್ನ ಅಭಿನಂದನೆಗಳು. ನಾನು ಬಸವೇಶ್ವರನಗರಕ್ಕೆ ಹೋಗಬೇಕಾದರೆ ಆಟೋಗಳನ್ನು ಬಳಸಬೇಕಾಗುತ್ತದೆ ಏಕೆಂದರೆ ಅಲ್ಲಿಗೆ ನಮ್ಮ ಬಡಾವಣೆಯಿಂದ ಬಸ್ಸಿನ ವ್ಯವಸ್ಥೆ ಇಲ್ಲ. ಇದರಿಂದ ನನ್ನೊಬ್ಬಳಿಗೇ ಅಲ್ಲ ಹಲವಾರು ಸಾರ್ವಜನಿಕರಿಗೆ ಕಷ್ಟವಾಗುತ್ತಿದೆ. ಆದ್ದರಿಂದ ನಾಗರಬಾವಿಯಿಂದ ಬಸವೇಶ್ವರನಗರಕ್ಕೆ ಸೂಕ್ತ ಬಸ್ಸಿನ ವ್ಯವಸ್ಥೆ ಒದಗಿಸಿ ಎಂದು ಸಾರ್ವಜನಿಕರ ಪರವಾಗಿ ಕೋರುತ್ತೇನೆ.
-ಎಸ್. ಕಲಾ

ಸಂಚಾರ ಬವಣೆ
ಬೆಂಗಳೂರಿನ ಗುಂಡಿ ರಸ್ತೆಗಳ ಮಧ್ಯೆ ಸಂಚಾರ ದಟ್ಟಣೆ, ಟ್ರಾಫಿಕ್ ಜಾಮ್ನಿಂದ ಸದಾ ತೊಂದರಗೆ ಒಳಗಾಗುವ ವಾಹನ ಚಾಲಕರು, ಜನತೆಯ ಸಮಸ್ಯೆ-ಸಂಕಟಗಳತ್ತ ಗಮನ ಹರಿಸುವಂತೆ ರಾಜ್ಯ ಹೈಕೋರ್ಟ್ ಸರ್ಕಾರ, ಬಿಬಿಎಂಪಿ ಮತ್ತು ನಗರಾಭಿವೃದ್ಧಿ ಇಲಾಖೆಗಳನ್ನು ಇತ್ತೀಚೆಗೆ ತರಾಟೆಗೆ ತೆಗೆದುಕೊಂಡಿದೆ.ಮೆಟ್ರೊ ಕಾಮಗಾರಿ, ಮೇಲುಸೇತುವೆ ಕಾಮಗಾರಿ, ಅಂಡರ್ಪಾಸ್ ಕಾಮಗಾರಿ, ಸಮಾವೇಶ, ಪ್ರತಿಭಟನೆ, ಮೆರವಣಿಗೆಗಳ ಜೊತೆಗೆ ಮಾಲ್ಗಳ ಮುಂದಿನ ರಸ್ತೆಗಳ ವಾಹನಗಳ ದಟ್ಟಣೆಯಿಂದ, ನಗರದ ಟ್ರಾಫಿಕ್ಜಾಮ್ನ ಬಿಸಿ ಇನ್ನಷ್ಟು ಜಾಸ್ತಿಯಾಗುತ್ತಿದ್ದರೂ ಸಂಬಂಧಪಟ್ಟ ಇಲಾಖೆಗಳು, ಅಧಿಕಾರಿಗಳು, ಸಚಿವರು ಜಾಣಕುರುಡು! ಕಿವುಡು! ಪ್ರದರ್ಶಿಸುತ್ತಿದ್ದಾರೆ.ಹೈಕೋರ್ಟ್ ನ್ಯಾಯಮೂರ್ತಿಗಳು ನೀಡಿರುವ ಸಲಹೆಗಳನ್ನು ಸರ್ಕಾರ ಗಂಭೀರವಾಗಿ ಗಮನಿಸಲಿ. ಸಮಸ್ಯೆಗೆ ಸ್ಪಂದಿಸಲಿ.
-ಕಾಡನೂರು ರಾಮಶೇಷ, ಹುಲಿಮಂಗಲ.

ಸ್ಪಷ್ಟೀಕರಣ ನೀಡಿ
ಯಲಹಂಕ ಹಳೇ ನಗರ ಜಲಮಂಡಲಿ ವ್ಯಾಪ್ತಿಗೆ ಸೇರಿದ ನಂತರ ಜಲಮಂಡಳಿಯವರು ತಿಂಗಳಿಗೆ 50 ರೂಪಾಯಿನಂತೆ ಶುಲ್ಕ ವಿಧಿಸಿರುತ್ತಾರೆ. ಹಿಂದಿನ ಬಾಕಿ ರದ್ದು ಆಗಿದೆ. ಆದರೆ ಸಿಬ್ಬಂದಿಗಳು ಬಾಕಿ ಎಂದು ರೂ. 3,000 ಪಡೆದು 1400ಕ್ಕೆ ಮಾತ್ರ ರಸೀದಿ ನೀಡುತ್ತಾರೆ. ಸಂಬಂಧಪಟ್ಟ ಜಲಮಂಡಲಿ ಕಚೇರಿಯವರು ಇದಕ್ಕೆ ಸ್ಪಷ್ಟೀಕರಣ ಕೊಡಬೇಕೆಂದು ಮನವಿ.
- ರಮೇಶ್ ರಾವ್

ಪಾರ್ಕಿಂಗ್ನಿಂದ ಅಡ್ಡಿ
ಬೆಂಗಳೂರು ನಗರದಲ್ಲಿ ವಾಹನಗಳ ಸಂಖ್ಯೆ ಅಧಿಕವಾಗಿದ್ದು ಬಾಡಿಗೆ ಮನೆಗಳ ಮಾಲೀಕರು ಸೂಕ್ತ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಿರುವುದಿಲ್ಲ. ಆದ್ದರಿಂದ ವಾಹನಗಳನ್ನು ವಿರಳವಾಗಿ ಉಪಯೋಗಿಸುವವರು ತಮ್ಮ ವಾಹನಗಳನ್ನು ಯಾವಾಗಲೂ ರಸ್ತೆಯಲ್ಲಿ ನಿಲುಗಡೆ ಮಾಡಿ, ಬೇರೆ ವಾಹನಗಳ ಸಂಚಾರಕ್ಕೆ ತೊಂದರೆ ಉಂಟು ಮಾಡುತ್ತಿದ್ದಾರೆ. ಆದ್ದರಿಂದ ಕಿರಿದಾದ ರಸ್ತೆಗಳಿರುವ ಸ್ಥಳಗಳಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಸಂಬಂಧಪಟ್ಟವರಲ್ಲಿ ಮನವಿ.
- ಆರ್.ಬಿ.

ಬಸ್ಸಿನ ಸಂಖ್ಯೆ ಹೆಚ್ಚಲಿ
ಐ.ಟಿ.ಪಿ.ಎಲ್ ವೈದೇಹಿ ಆಸ್ಪತ್ರೆ (ವೈಟ್ಫೀಲ್ಡ್) ಯಿಂದ ವಿಜಯನಗರಕ್ಕೆ ಆಚರಣೆ ಆಗುವ ಮಾರ್ಗ ಸಂಖ್ಯೆ 500 ಕೆ ಮಧ್ಯಾಹ್ನ 3 ಗಂಟೆಯಿಂದ 5 ಗಂಟೆಯವರೆಗೆ ನಾಪತ್ತೆ ಆಗಿರುತ್ತೆ. ಹೀಗಾಗಿ ಇಲ್ಲಿಂದ (ಐ.ಟಿ.ಪಿ.ಎಲ್.) ಬನಶಂಕರಿ ಮಾರ್ಗವಾಗಿ ಕತ್ರಿಗುಪ್ಪೆ, ಕಾಮಾಕ್ಯ, ವಿಜಯನಗರಕ್ಕೆ ಹೋಗುವ ಜನರಿಗೆ ತುಂಬಾ ತೊಂದರೆ ಆಗಿದೆ. ವಿಪರೀತ ಬಿಸಿಲು ಬೇರೆ, ಕಚೇರಿ ಇನ್ನಿತರ ಕಡೆ ಕೆಲಸ ಮಾಡುವ ನೌಕರರು ‘500 ಕೆ’ ಬಸ್ಸಿಗಾಗಿ (ವಜ್ರ) ಗಂಟೆಗಟ್ಟಲೆ ಕಾಯುವ ಹಾಗಿದೆ. ಆದ್ದರಿಂದ ವೈದೇಹಿ ಆಸ್ಪತ್ರೆಯಿಂದ ಬನಶಂಕರಿ ಹಾಗೂ ಕತ್ರಿಗುಪ್ಪೆ ಕಡೆಗೆ ಹೆಚ್ಚು ವೊಲ್ವೊ ಬಸ್ಸುಗಳು (ಮಾರ್ಗ 500 ಕೆ) ಓಡಾಡುವಂತಾಗಲಿ ಅಂತ ಕೋರಿಕೆ.
- ರಮ್ಯಾ ಬೆಳ್ಳಾವೆ

ಹಾಡುಹಗಲೇ ಭೂಕಬಳಿಕೆ
ಜೆ.ಪಿ. ನಗರ 4ನೇ ಹಂತ, ಡಾಲರ್ ಕಾಲೋನಿ ಬಿ.ಬಿ.ಎಂ.ಪಿ. ತೋಟಗಾರಿಕೆಯ ಉದ್ಯಾನವನದ ಹಿಂಭಾಗ ಮೋರಿಯ ಪಕ್ಕದಲ್ಲಿ ಈ ಹಿಂದೆ ಬಿ.ಡಿ.ಎ. ನವರು ಅರಣ್ಯ ವಿಭಾಗದವರು ಗಿಡಗಳನ್ನು ನೆಟ್ಟು ತಂತಿ ಬೇಲಿ ಕಾಂಪೌಂಡ್ ನಿರ್ಮಿಸಿದ್ದರು.ಒಂದು ತಿಂಗಳಿನಿಂದೀಚೆಗೆ ಜೆ.ಪಿ. ನಗರ 4ನೇ ಹಂತದ ಕ್ಷೇಮಾಭಿವೃದ್ಧಿ ಸಂಘದವರು ಈ ಉದ್ಯಾನವನದ ಬೇಲಿಯನ್ನು ಕಿತ್ತು ಹಾಕಿ ಕಟ್ಟಡವನ್ನು ನಿರ್ಮಿಸುತ್ತಿದ್ದಾರೆ. ಈ ಹಿಂದೆ ಬಿ.ಡಿ.ಎ. ನವರು ನೆಟ್ಟಿರುವ ಗಿಡ ಮರಗಳು ಬಿದಿರು ಗಿಡಗಳನ್ನು ಕಿತ್ತು ಹಾಕಿ 1 ಕೋಟಿ ರೂಪಾಯಿ ಬೆಲೆ ಬಾಳುವ ಜಾಗವನ್ನು ಭೂಕಬಳಿಕೆ ಮಾಡುತ್ತಿದ್ದಾರೆ. ಸರ್ಕಾರ ಈ ಸಂಘದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಈಗಾಗಲೇ ರಾಜ್ಯಪಾಲರು, ಮುಖ್ಯಮಂತ್ರಿಗಳು, ಲೋಕಾಯುಕ್ತರು, ಆಯುಕ್ತರು ಬಿ.ಡಿ.ಎ.ಗೆ ಮನವಿ ಸಲ್ಲಿಸಲಾಗಿದೆ. ಉದ್ಯಾನವನದ ಜಾಗವನ್ನು ಭೂಗಳ್ಳರ ಕೈಯಿಂದ ತಪ್ಪಿಸಿ ಸಾರ್ವಜನಿಕ ಬಳಕೆಗೆ ಆಗುವಂತೆ ಉಳಿಸಿಕೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತೇನೆ.
- ಕೆ. ಲಕ್ಷ್ಮೀನರಸಿಂಹಯ್ಯ

ಸಿಗ್ನಲ್ ದೀಪ ಅಳವಡಿಸಿ
ಬಿ.ಬಿ.ಎಂ.ಪಿ. ವಾರ್ಡ್ ನಂ. 149 ವರ್ತೂರಿನಲ್ಲಿ ಹೆಚ್ಚಿದ ವಾಹನ ಸಂಚಾರದಿಂದ ಶಾಲಾ ಮಕ್ಕಳು, ಹೆಂಗಸರು ಹಾಗೂ ವಯೋವೃದ್ಧರು ರಸ್ತೆ ದಾಟುವುದೇ ತುಂಬಾ ಕಷ್ಟಕರವಾಗಿದೆ. ಅತಿ ಮುಖ್ಯವಾಗಿ ವರ್ತೂರು ಹೈಸ್ಕೂಲ್ ಬಳಿ ಸಿಗ್ನಲ್ ಲೈಟ್ ಕೂಡಲೇ ಅಳವಡಿಸಿದರೆ ತುಂಬಾ ಅನುಕೂಲ. ನಂತರ ಟ್ರಾಫಿಕ್ ನಿಯಂತ್ರಣ ಮಾಡಲು ಹೈಸ್ಕೂಲ್, ಮಸೀದಿ, ಗಾಂಧಿ ಸರ್ಕಲ್ ಬಳಿ ಟ್ರಾಫಿಕ್ ಪೊಲೀಸರನ್ನು ಬೆಳಿಗ್ಗೆ 8 ರಿಂದ ರಾತ್ರಿ 8 ಗಂಟೆ ತನಕ ಹಾಕಬೇಕು. ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು ಕೂಡಲೆ ಈ ಕಡೆ ಗಮನಕೊಟ್ಟು ತೊಂದರೆಗಳನ್ನು ನಿವಾರಿಸಬೇಕು ಎಂದು ಮನವಿ.
- ಎಂ. ಲಚ್ಚಪ್ಪ

ಮೋರಿಯಾದ ರಸ್ತೆ
ಬೆಂಗಳೂರಿನ ಹೃದಯ ಭಾಗದಲ್ಲಿರುವ ಕೆಂಪೇಗೌಡ ಸರ್ಕಲ್ನಲ್ಲಿರುವ ಮಾರ್ಗವನ್ನು ಮಕ್ಕಳು, ವೃದ್ಧರು, ಅಂಗವಿಕಲರು ಮತ್ತು ಮಹಿಳೆಯರು ಬಳಸುತ್ತಾರಷ್ಟೇ. ಈ ಪಾದಚಾರಿ ಮಾರ್ಗ ಈಗ ಮೋರಿಯಾಗಿ ಬದಲಾಗಿದೆ. ನಿತ್ಯ ಎರಡು ಕಡೆಯಿಂದ ಒಳಚರಂಡಿ ನೀರು ಮೇಲೆ ಬಂದು ಸಾರ್ವಜನಿಕರಿಗೆ ಮತ್ತು ವ್ಯಾಪಾರಿಗಳಿಗೆ ಕಿರಿಕಿರಿಯಾಗುತ್ತದೆ. ಮಳೆಗಾಲದಲ್ಲಿ ನೀರು ಕೆರೆಯಂತೆ ನಿಂತು ಅನೇಕ ರೋಗ ರುಜಿನಗಳು ಹರಡುತ್ತದೆ. ಬಿಬಿಎಂಪಿ ಅಧಿಕಾರಿಗಳು ಇದನ್ನು ಸಂಪೂರ್ಣ ಸ್ವಚ್ಛ ಮಾಡಬೇಕೆಂದು ಮನವಿ ಮಾಡಿಕೊಳ್ಳುತ್ತವೆ.
-ಮಂಜುನಾಥ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.