ಬೆಂಗಳೂರು: ಕುಮುದ್ವತಿ ನದಿ ಪುನಶ್ಚೇತನ ಯೋಜನೆಯ ಬಗ್ಗೆ ಅರಿವು ಮೂಡಿಸುವ ಉದೇಶದಿಂದ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಶನಿವಾರ (ಜೂ. 8) ಜಾಗೃತಿ ಜಾಥಾ ಕಾರ್ಯಕ್ರಮವನ್ನು ಆಯೋಜಿಸಿದೆ.

`ಉತ್ತಮ ಭಾರತಕ್ಕಾಗಿ ಸ್ವಯಂಸೇವಕರಾಗಿ' ಎಂಬ ಘೋಷಣೆಯಡಿ ನದಿ ಪುನಶ್ಚೇತನ ಯೋಜನೆಯನ್ನು ಪ್ರಾರಂಭಿಸಲಾಗಿದೆ.

ಜಾಥಾದಲ್ಲಿ ಸಂಸ್ಥೆಯ ಶ್ರೀ ಶ್ರೀ ರವಿಶಂಕರ್ ಗುರೂಜಿ, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಪರಿಸರವಾದಿ ಅ.ನ.ಯಲ್ಲಪ್ಪ ರೆಡ್ಡಿ, ನಿವೃತ್ತ ಐಎಫ್ಎಸ್ ಅಧಿಕಾರಿಗಳು, ಕುಮುದ್ವತಿ ನದಿ ದಂಡೆಯ ಗ್ರಾಮಸ್ಥರು ಹಾಗೂ ವಿವಿಧ ಸ್ವಯಂಸೇವಾ ಸಂಸ್ಥೆಗಳ ಸದಸ್ಯರು ಪಾಲ್ಗೊಳ್ಳಲಿದ್ದಾರೆ.

ಬೆಂಗಳೂರಿಗೆ ಶೇ 60 ಕುಡಿಯುವ ನೀರನ್ನು ಒದಗಿಸುವ ಸಾಮರ್ಥ್ಯ ಕುಮುದ್ವತಿ ನದಿಗಿದೆ. ಆದರೆ, ನದಿ ಪಾತ್ರದಲ್ಲಿ ಸದ್ಯ ನೀರಿನ ಹರಿವು ಕಡಿಮೆಯಾಗಿದೆ. ಹೀಗಾಗಿ ಮೂರು ವರ್ಷಗಳ ನದಿ ಪುನಶ್ಚೇತನ ಯೋಜನೆಯನ್ನು ಸಂಸ್ಥೆ ಆರಂಭಿಸಿದೆ. ಈ ವರ್ಷದ ಫೆಬ್ರುವರಿಯಿಂದ ಯೋಜನೆ ಜಾರಿಗೊಳಿಸಲಾಗಿದ್ದು, ನದಿ ಪಾತ್ರದಲ್ಲಿ ಸ್ವಯಂಸೇವಕರು 15ರಿಂದ 20 ಅಡಿ ಆಳದ ಮರುಪೂರಣ ಬಾವಿಗಳನ್ನು ನಿರ್ಮಿಸುತ್ತಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.

`ನದಿಯ ದಂಡೆಯಲ್ಲಿ ಮರಗಳು, ಪೊದೆ ಗಿಡಗಳು ಹಾಗೂ ಹುಲ್ಲನ್ನು ನಾಟಿ ಮಾಡಲಾಗುತ್ತಿದೆ. ನದಿ ಪಾತ್ರದ ಕೆರೆಕೊತ್ತಿಗನೂರು, ಟಿ.ಬೇಗೂರು, ಸೋಲದೇವನಹಳ್ಳಿ, ಅರೆಬೊಮ್ಮನಹಳ್ಳಿ, ಯಂಟಗಾನಹಳ್ಳಿ, ಕಂಬಾಳು ಹಾಗೂ ಅಕ್ಕಪಕ್ಕದ ಗ್ರಾಮಗಳಲ್ಲಿ ಒಟ್ಟು 17 ಕಲ್ಯಾಣಿಗಳ ಹೂಳು ತೆಗೆದು ಶುಚಿಗೊಳಿಸಲಾಗಿದೆ' ಎಂದು ಸ್ವಯಂಸೇವಕ ವಿವೇಕಾನಂದ ತಿಳಿಸಿದರು.

`ಯೋಜನೆಯಡಿ ಫೆಬ್ರುವರಿ ತಿಂಗಳಿನಲ್ಲಿ ಕೆರೆಕೊತ್ತಿಗನೂರಿನ ಗ್ರಾಮಸ್ಥರ ನೆರವಿನೊಂದಿಗೆ ಗ್ರಾಮದ ಕಲ್ಯಾಣಿಯ ಹೂಳು ತೆಗೆಯಲಾಗಿತ್ತು. ಈಗ ಕಲ್ಯಾಣಿಯಲ್ಲಿ ನೀರು ತುಂಬಿದೆ. ಇದರಿಂದ ನಮ್ಮ ಉತ್ಸಾಹ ಹೆಚ್ಚಾಗಿದೆ' ಎಂದು ಅವರು ಹೇಳಿದರು.

ಕಲ್ಯಾಣಿಗಳ ಹೂಳನ್ನು ತೆಗೆಯಲಾಗುತ್ತಿರುವುದರಿಂದ ಅಂತರ್ಜಲದ ಮಟ್ಟ ಹೆಚ್ಚಾಗಿ ನದಿಯನ್ನು ಪುನಶ್ಚೇತನಗೊಳಿಸಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಶನಿವಾರ ನಗರದ ಮಹಾತ್ಮ ಗಾಂಧಿ ರಸ್ತೆಯ ಗಾಂಧಿ ಪ್ರತಿಮೆ ಎದುರಿನಿಂದ ಕಬ್ಬನ್ ಉದ್ಯಾನ, ಕೆ.ಆರ್.ವೃತ್ತ ಮಾರ್ಗವಾಗಿ ಸ್ವಾತಂತ್ರ್ಯ ಉದ್ಯಾನದವರೆಗೆ ಜಾಥಾ ನಡೆಯಲಿದೆ. ಬೆಳಿಗ್ಗೆ 9ಗಂಟೆಗೆ ಜಾಥಾ ಆರಂಭವಾಗಲಿದೆ.

ಸಂಪರ್ಕಿಸಿ : 96633 82878.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.