ಸೋಮವಾರ, ಏಪ್ರಿಲ್ 12, 2021
24 °C

ಕುಲುಕಾಟವಿಲ್ಲದ ಸಂಚಾರ

ಎನ್‌ಕೆ Updated:

ಅಕ್ಷರ ಗಾತ್ರ : | |

ವಾಹನಗಳಲ್ಲಿ ಕುಲುಕಾಟ ಸಾಮಾನ್ಯ. ಕೆಟ್ಟ ರಸ್ತೆಗಳಿದ್ದಲ್ಲಿ ಏನು ತಾನೆ ಮಾಡಲು ಸಾಧ್ಯ. ಎಷ್ಟೇ ಉತ್ತಮವಾದ ಸಸ್ಪೆನ್‌ಷನ್ ವ್ಯವಸ್ಥೆ ಇದ್ದರೂ ಕುಲುಕಾಟ ಅನಿವಾರ್ಯ ಎಂಬಷ್ಟು ಸ್ಥಿತಿಯಿದೆ. ಆದರೂ ಕುಲುಕಾಟವನ್ನು ಕಡಿಮೆ ಮಾಡಿಕೊಳ್ಳುವ ಪ್ರಯತ್ನವಂತೂ ಆಗಿದೆ.ಏರ್ ಸಸ್ಪೆನ್‌ಷನ್, ಪವರ್ ಸಸ್ಪೆನ್‌ಷನ್ ಮುಂತಾದ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳುವ ಪ್ರಯತ್ನ ಆಗಿದೆ. ಆದರೂ ಕುಲುಕಾಟ ಇದ್ದದ್ದೇ. ಅತ್ಯಂತ ಐಷಾರಾಮಿ ಕಾರ್‌ಗಳಲ್ಲಿ ಮಾತ್ರ ಕುಲುಕಾಟ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ ಇರುತ್ತದೆ. ಆದರೂ ಅದು ಶೂನ್ಯ ಕುಲುಕಾಟ ಅಲ್ಲ.ಆಕ್ಟಿವ್ ಸಸ್ಪೆನ್‌ಷನ್ ಸಿಸ್ಟಂ


ಕೆಲವೊಮ್ಮೆ ವಿಮಾನಗಳೂ ಕುಲುಕುವುದು ಉಂಟಂತೆ! ಏಕೆಂದರೆ ಕಳಪೆ ಗುಣಮಟ್ಟದ ಜೆಟ್ ಯಂತ್ರ, ಹಳೆಯ ವಿಮಾನಗಳಲ್ಲಿ ಈ ಸಮಸ್ಯೆ ಇರುತ್ತದೆ. ಆದರೆ ಕಾರ್ ಕುಲುಕಾಟ ತಡೆಗೆ ವಿಮಾನ ತಂತ್ರಜ್ಞಾನ ಬಳಕೆ ಆದರೆ ಹೇಗೆ? ಹೀಗೊಂದು ಪ್ರಯತ್ನ ಮಾಡಿರುವುದು ಬೋಸ್ ಸಂಸ್ಥೆ.ಧ್ವನಿವರ್ಧಕಗಳು, ಸ್ಪೀಕರ್‌ಗಳನ್ನು ತಯಾರಿಸುವಲ್ಲಿ ಪ್ರಸಿದ್ಧರಾಗಿರುವ ಬೋಸ್, ವಾಹನ ಸಂಬಂಧಿತ ಅನೇಕ ಅಕ್ಸೆಸರಿಗಳನ್ನೂ ತಯಾರಿಸುವುದುಂಟು. ಇವರು ಆಕ್ಟಿವ್ ಸಸ್ಪೆನ್‌ಷನ್ ಸಿಸ್ಟಂ ಎನ್ನುವ ವಿಶೇಷ ಸಾಧನವನ್ನು ಆವಿಷ್ಕರಿಸಿದ್ದಾರೆ. ಇದರ ವಿಶೇಷ ಏನೆಂದರೆ, ವಿಮಾನಗಳಲ್ಲಿ ಹಾರಾಟಕ್ಕೆ ಬಳಕೆಯಾಗುವ ಗಾಳಿಯ ಒತ್ತಡವನ್ನು ಪ್ರತಿರೋಧಿಸುವ ಒತ್ತಡ ತಂತ್ರಜ್ಞಾನವನ್ನು ಕಾರ್ ಸಸ್ಪೆನ್‌ಷನ್‌ಗೆ ಅಳವಡಿಸಿಕೊಳ್ಳಲಾಗಿದೆ.ಇದರಲ್ಲಿನ ವಿಶೇಷ ಸ್ಪ್ರಿಂಗ್‌ಗಳು ಕುಲುಕಾಟವನ್ನು ಹೀರಿಕೊಂಡು ಕುಲುಕಾಟವನ್ನು ಅತಿ ಕಡಿವೆು ಮಾಡುತ್ತವೆ. ವಾಹನದ ಚಕ್ರ ಹಳ್ಳವೊಂದಕ್ಕೆ ಇಳಿದಲ್ಲಿ, ಕಾರ್‌ನ ಪ್ರತ್ಯೇಕ ಚಕ್ರಗಳಿಗೆ ಅಳವಡಿಸಲ್ಪಟ್ಟಿರುವ ಈ ಸಾಧನ, ತಾನೂ ಜತೆಗೆ ಹಳ್ಳದ ಕಡೆಗೆ ಕೆಳಮುಖವಾಗಿ ಇಳಿಯುತ್ತದೆ.ಆದರೆ ವಾಹನವನ್ನು ಮೇಲ್ಮುಖವಾಗಿ ಎತ್ತುತ್ತದೆ. ಇವೆಲ್ಲವೂ ಕ್ಷಣಾರ್ಧದಲ್ಲಿ ನಡೆಯುವ ಪ್ರಕ್ರಿಯೆಗಳು. ಇದರಿಂದ ವಾಹನ ಹಳ್ಳಕ್ಕೆ ಇಳಿದದ್ದು ಒಳಗಿರುವ ಪ್ರಯಾಣಿಕರಿಗೆ ತಿಳಿಯುವುದೇ ಇಲ್ಲ. ಅಷ್ಟ ಅಲ್ಲದೇ, ಕಾರ್‌ನ ಓಲಾಟಗಳನ್ನೂ ಇದು ನಿಯಂತ್ರಿಸುತ್ತದೆ. ಕಾರ್ ವೇಗವಾಗಿ ದಿಕ್ಕು ಬದಲಿಸುವ ಸಂದರ್ಭದಲ್ಲಿ ತಾನು ಸ್ಪಂದಿಸಿ ಕೊಂಚವೂ ವಾಲದಂತೆ ನೋಡಿಕೊಳ್ಳುತ್ತದೆ. ಜತೆಗೆ ಕುಲುಕಾಟದ ಶಬ್ದವೂ ಇಲ್ಲಿ ಇಲ್ಲವಾಗಿದೆ.ಆಟೊ ಇಂಡಿಕೇಟರ್

ವಾಹನಗಳಲ್ಲಿ ಇಂಡಿಕೇಟರ್ ಈಗ ಸಾಮಾನ್ಯ. ವಾಹನ ಯಾವುದಾದರೂ ದಿಕ್ಕಿಗೆ ತಿರುಗುವಾಗ ಈ ದಿಕ್ಕಿಗೆ ತಿರುಗುತ್ತಿದೆ ಎಂದು ತೋರಿಸುವ ವ್ಯವಸ್ಥೆ ಇದು. ಸುಮಾರು 50 ವರ್ಷ ಹಳೆಯ ಬೈಕ್, ಕಾರ್‌ಗಳಲ್ಲೂ ಇಂಡಿಕೇಟರ್ ವ್ಯವಸ್ಥೆ ಇದ್ದದ್ದನ್ನು ಗಮನಿಸಬಹುದು.

 

ಆದರೆ ಇಂಡಿಕೇಟರ್‌ಗಳಲ್ಲಿನ ಅತಿ ಮುಖ್ಯ ಸಮಸ್ಯೆ ಎಂದರೆ, ಇಂಡಿಕೇಟರ್ ಹಾಕಿದ ನಂತರ ಮರೆತುಬಿಡುವುದು. ಇಲ್ಲವೇ ಇಂಡಿಕೇಟರ್ ಹಾಕುವುದನ್ನೇ ಮರೆಯುವುದು. ಹೀಗಾದಾಗ ಹಿಂಬದಿ ಅಥವಾ ಎದುರಿನ ವಾಹನಗಳಿಗೆ ತೊಂದರೆ ಆಗುವುದು ಸಹಜ. ಅದಕ್ಕಾಗೇ ಈಗ ಆಟೊ ಇಂಡಿಕೇಟರ್‌ಗಳು ಅಭಿವೃದ್ಧಿಗೊಂಡಿದೆ.

 

ಈ ಇಂಡಿಕೇಟರ್‌ಗಳಲ್ಲಿನ ಸೆನ್ಸರ್‌ಗಳು ವಾಹನ ಚಲಿಸುವ ವೇಗ, ದಿಕ್ಕನ್ನು ಗಮನಿಸುತ್ತ ಇರುತ್ತದೆ. ವಾಹನ ಯಾವುದೇ ದಿಕ್ಕಿಗೆ ತಿರುಗಿದರೂ ಇಂಡಿಕೇಟರ್‌ನ ದೀಪ ಹತ್ತಿಕೊಳ್ಳುತ್ತದೆ. ವಾಹನ ಮತ್ತೆ ನೇರವಾಗಿ ಚಲಿಸಲು ಆರಂಭಿಸಿದ ಕೂಡಲೇ ದೀಪ ನಂದಿಹೋಗುತ್ತದೆ. ಅಗತ್ಯವಿದ್ದಲ್ಲಿ ಶಬ್ದವೂ ಹೊಮ್ಮುವ ವ್ಯವಸ್ಥೆ ಇದೆ. ಆದರೆ ಕೆಲವರಿಗೆ ಶಬ್ದ ಬಳಕೆ ಇಷ್ಟವಾಗದು. ಅಂಥವರು ನಿಶ್ಯಬ್ದ ಇಂಡಿಕೇಟರ್ ಗಳನ್ನೇ ಬಯಸುತ್ತಾರೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.