ಭಾನುವಾರ, ಮೇ 9, 2021
19 °C

ಕುಸಿದ ಕಟ್ಟಡ: 10 ಜನರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಠಾಣೆ, ಮಹಾರಾಷ್ಟ್ರ (ಪಿಟಿಐ):  ಇಲ್ಲಿನ ಬಜಾರ್‌ಪೇಟೆಯಲ್ಲಿ ಶುಕ್ರವಾರ ಮೂರು ಅಂತಸ್ತಿನ ಕಟ್ಟಡವೊಂದು ಕುಸಿದು ಬಿದ್ದ ಪರಿಣಾಮ 10 ಜನರು ಮೃತ ಪಟ್ಟು 14 ಮಂದಿ ಗಾಯ ಗೊಂಡಿದ್ದಾರೆ.ಇಲ್ಲಿನ ಮುಂಬ್ರಾ ಪ್ರದೇಶದ ಬಜಾರ್‌ಪೇಟೆಯಲ್ಲಿರುವ 35 ವರ್ಷಗಳ ಹಳೆಯದೆನ್ನಲಾದ ಮೂರು ಅಂತಸ್ತಿನ `ಶಕುಂತಲಾ' ಹೆಸರಿನ ಕಟ್ಟಡ ಶುಕ್ರವಾರ ನಸುಕಿನಲ್ಲಿ ಕುಸಿದು ಬಿದ್ದಿದೆ. ಆಗ ಕಟ್ಟಡದಲ್ಲಿದ್ದ ಜನರೆಲ್ಲ ನಿದ್ರೆಯಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಘಟನೆಯಲ್ಲಿ ಮೃತಪಟ್ಟವರಲ್ಲಿ ಎರಡು ತಿಂಗಳ ಮಗುವೂ ಸೇರಿದೆ.  ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಘಟನಾ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯವನ್ನು ಕೈಗೊಂಡರು. ಕಟ್ಟಡದ ಅವಶೇಷಗಳಡಿ ಸಿಲುಕಿದ ಜನರು ಗಾಬರಿಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.