ತಿರುನೆಲ್ವೇಲಿ,(ಪಿಟಿಐ): ಕೂಡುಂಕುಳಂನಲ್ಲಿ ಬೀಡುಬಿಟ್ಟಿದ್ದ ರಷ್ಯದ ಪರಮಾಣು ಪೂರೈಕೆ ಕಂಪೆನಿಯ ತಜ್ಞರು ಶುಕ್ರವಾರ ಸ್ಥಳದಿಂದ ವಾಪಸು ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದೇ ವೇಳೆ ಅಣುಸ್ಥಾವರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಂಜಿನಿಯರ್ಗಳನ್ನು ಸಹಾ ಪ್ರತಿಭಟನಾಕಾರರು ಒಳಕ್ಕೆ ಬಿಡುತ್ತಿಲ್ಲವಾದ್ದರಿಂದ ಅವರೆಲ್ಲರೂ ಸಮೀಪದ ಅನುವಿಜಯ್ ವಸತಿ ಪ್ರದೇಶದಲ್ಲಿ ಆಶ್ರಯ ಪಡೆದಿದ್ದಾರೆ.

ರಷ್ಯದ ಆಟಂಸ್ಟ್ರಾಯ್ ತಜ್ಞರ ತಂಡವು ಶುಕ್ರವಾರ ಸ್ಥಾವರಕ್ಕೆ ಭೇಟಿ ನೀಡಲು ಉದ್ದೇಶಿಸಿತ್ತು. ಆದರೆ 10 ದಿನಗಳಿಂದ ನಿರಂತರ ಪ್ರತಿಭಟನೆ ನಡೆಸುತ್ತಿರುವ ಸ್ಥಾವರ ವಿರೋಧಿ ಚಳವಳಿಕಾರರು ತಂಡದ ಮೇಲೆ ಯಾವುದೇ ಸಂದರ್ಭದಲ್ಲಿ ಹಲ್ಲೆ ನಡೆಸಬಹುದೆಂಬ ಭೀತಿಯಿಂದ ಪೊಲೀಸರು ಅವರನ್ನು ಸ್ಥಳಕ್ಕೆ ತೆರಳದಂತೆ ತಡೆದರು. ಇದರಿಂದಾಗಿ ತಜ್ಞರ ತಂಡವು ಸ್ಥಳದಿಂದ ವಾಪಸು ತೆರಳಿತು ಎಂದು ಮೂಲಗಳು ವಿವರಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.