ಬಳ್ಳಾರಿ ಜಿಲ್ಲೆ ಬಹಳ ಹಿಂದಿನಿಂದಲೂ ದೊಡ್ಡಾಟಕ್ಕೆ ಪ್ರಸಿದ್ಧ. ಸಿನಿಮಾ, ಟಿ.ವಿ ಇಲ್ಲದ ಕಾಲದಲ್ಲಿ ದೊಡ್ಡಾಟ ಜನರಿಗೆ ಮನರಂಜನೆಯ ಮಾಧ್ಯಮವಾಗಿತ್ತು. ಈಗ ದೊಡ್ಡಾಟ, ಬಯಲಾಟಗಳು ಕಡಿಮೆಯಾಗಿವೆ. ಅದಕ್ಕೆ ತಕ್ಕಂತೆ ಜನರ ಉತ್ಸಾಹ, ಹುಮ್ಮಸ್ಸು ಕೂಡ ಕಡಿಮೆಯಾಗಿದೆ. ದೊಡ್ಡಾಟ ಕಲಾವಿದರು ತಮ್ಮ ಪರಿಕರಗಳನ್ನೆಲ್ಲ ಗಂಟು ಕಟ್ಟಿ ಅಟ್ಟದ ಮೇಲೆ ಇಟ್ಟಿರುವ ಈ ಸಮಯದಲ್ಲಿ ಕೂಡ್ಲಿಗಿಯ ರಂಗ ಕಲಾವಿದೆಯರು ‘ಸ್ತ್ರೀ ಶಕ್ತಿ ಸಂಘ’ದ ಹೆಸರಿನಲ್ಲಿ ದೊಡ್ಡಾಟ ಮೇಳ ಕಟ್ಟಿ ಯಶಸ್ವಿಯಾಗಿ ಪ್ರದರ್ಶನ ಮಾಡುತ್ತ ಜನರ ಗಮನ ಸೆಳೆದಿದ್ದಾರೆ.

ಕೂಡ್ಲಿಗಿಯ ಇಪ್ಪತ್ತಮೂರು ಕಲಾವಿದೆಯರು ವೀಣಾ ಮತ್ತು ರಾಜೇಶ್ವರಿ ಎಂಬ ಹೆಸರಿನ ಎರಡು ಸಂಘಗಳಲ್ಲಿದ್ದಾರೆ. ಇವರೆಲ್ಲ ಸೇರಿ ನಾಟಕಗಳಲ್ಲೂ ಪಾತ್ರವಹಿಸುತ್ತಾರೆ. ‘ವೀಣಾ ಸಂಘ’ಕ್ಕೆ ಕಲಾವಿದೆ ವೆಂಕಮ್ಮ ಅಧ್ಯಕ್ಷರು. ಮಾಲಾವತಿ ಕಾರ್ಯದರ್ಶಿ. ‘ರಾಜೇಶ್ವರಿ ಸಂಘ’ಕ್ಕೆ ಗೌರಮ್ಮ ಅಧ್ಯಕ್ಷೆ. ಅಂಜಿನಮ್ಮ ಕಾರ್ಯದರ್ಶಿ. ಉಳಿದ 19 ಕಲಾವಿದೆಯರು ಈ ಸಂಘಗಳ ಸದಸ್ಯೆಯರು. ಆರಂಭದಲ್ಲಿ ಇವರೂ ‘ಸ್ತ್ರೀ ಶಕ್ತಿ ಸಂಘ’ ಕಟ್ಟಿಕೊಂಡು ಹಣ ಉಳಿತಾಯ ಮಾಡುತ್ತಿದ್ದರು. ಆಗಾಗ ಒಂದೆಡೆ ಸೇರುತ್ತಿದ್ದರು. ಉಳಿತಾಯದ ಹಣಕ್ಕೆ ಪರದಾಡುತ್ತಿದ್ದರು.

ನಾಟಕಗಳಲ್ಲಿ ನಟನೆ ಮಾಡುವುದನ್ನು ಬಿಟ್ಟು ಬೇರೆ ಯಾವ ಕೆಲಸ ಮಾಡಿದ ಅನುಭವ ಇಲ್ಲದ ಈ ಕಲಾವಿದೆಯರು ಒಂದಾಗಿ ದೊಡ್ಡಾಟ ಮೇಳವನ್ನು ಕಟ್ಟಬಾರದೇಕೆ ಎಂಬ ಸಲಹೆ ಕೊಟ್ಟವರು ಕೂಡ್ಲಿಗಿಯ ಪ್ರಸಿದ್ಧ ರಂಗ ಕಲಾವಿದೆ ಎಸ್.ಸೊಲ್ಲಮ್ಮ . ‘ದೊಡ್ಡಾಟ ಗಂಡಸರ ಕಲೆ ಅದನ್ನು ಪ್ರದರ್ಶಿಸಲು ನಮ್ಮಿಂದ ಸಾಧ್ಯವೇ’ ಎಂಬ ಹಿಂಜರಿಕೆಯನ್ನು ಆರಂಭದಲ್ಲಿ ಎಲ್ಲ ಕಲಾವಿದೆಯರೂ ವ್ಯಕ್ತಪಡಿಸಿದರು. ಆಗ ಸೊಲ್ಲಮ್ಮ ನಾನೇ ತರಬೇತಿ ನೀಡುತ್ತೇನೆ ಎಂಬ ಪ್ರೋತ್ಸಾಹದ ಮಾತುಗಳನ್ನಾಡಿ ಕಲಾವಿದೆಯರನ್ನು ದೊಡ್ಡಾಟಕ್ಕೆ ಅಣಿಗೊಳಿಸಿದರು.

ಸೊಲ್ಲಮ್ಮ ಅವರ ಮಾರ್ಗದರ್ಶನದಲ್ಲಿ ಕಲಾವಿದೆಯರು ‘ಪ್ರಮೀಳಾ ದರ್ಬಾರ್’ ಹೆಸರಿನ ದೊಡ್ಡಾಟ ಕಲಿತರು. ಅದನ್ನು ಬಳ್ಳಾರಿ ಜಿಲ್ಲೆಯ ಅನೇಕ ಊರುಗಳಲ್ಲಿ ಪ್ರದರ್ಶಿಸಿದ್ದಾರೆ. ಪ್ರದರ್ಶನದಿಂದ ಬಂದ ಹಣದಲ್ಲಿ ಸ್ವಲ್ಪ ಭಾಗವನ್ನು ಬಡ ಕಲಾವಿದರ ಕುಟುಂಬಗಳ ಮಕ್ಕಳ ಓದು ಮತ್ತಿತರ ಖರ್ಚುಗಳಿಗೆ ವಿನಿಯೋಗಿಸುತ್ತಾರೆ. ಉಳಿದ ಹಣವನ್ನು ಸಂಘದ ಉಳಿತಾಯ ಖಾತೆಗೆ ಜಮಾ ಮಾಡುತ್ತಾರೆ.

ದೊಡ್ಡಾಟ ನಾಟಕ ಪ್ರದರ್ಶನದಷ್ಟು ಸಲೀಸಲ್ಲ. ಭಾರವಾದ ಕಿರೀಟ, ಭುಜ ಕೀರ್ತಿ, ಎದೆಯ ಕವಚ ಇತ್ಯಾದಿ ತೂಕದ ಆಭರಣಗಳನ್ನು ಧರಿಸಿ ರಂಗದ ಮೇಲೆ ಕುಣಿಯುವುದು ಪ್ರಯಾಸದ ಕೆಲಸ. ದುರ್ಯೋಧನ, ಭೀಮ, ಕಂಸ, ಬಲರಾಮ ಇತ್ಯಾದಿ ಪಾತ್ರಗಳನ್ನು ಬಲಿಷ್ಠರಾದ ಗಂಡಸರು ನಿರ್ವಹಿಸುತ್ತಿದ್ದರು.

‘ಸ್ತ್ರೀ ಶಕ್ತಿ ಸಂಘ’ದ ಕಲಾವಿದೆಯರು ಪುರುಷರಿಗೆ ಸರಿ ಸಮನಾಗಿ ಪಾತ್ರಗಳನ್ನು ಆವಾಹನೆ ಮಾಡಿಕೊಂಡವರಂತೆ ಭಾವಪೂರ್ಣವಾಗಿ ನಟಿಸುತ್ತ ಗಮನ ಸೆಳೆಯುತ್ತಿದ್ದಾರೆ. ಗವಿ ಸಿದ್ದೇಶ್ವರ ಮಹಾತ್ಮೆ, ಕನಕಾಂಗಿ ಕಲ್ಯಾಣ ಮತ್ತಿತರ ಕಥಾ ಪ್ರಸಂಗಗಳನ್ನು ಪ್ರದರ್ಶಿಸುವ ಕೂಡ್ಲಿಗಿ ಕಲಾವಿದೆಯರು ಹೊಸ ಭರವಸೆ ಹುಟ್ಟಿಸಿದ್ದಾರೆ. ಸಾಂಪ್ರದಾಯಿಕ ದೊಡ್ಡಾಟಗಳಲ್ಲಿ ದ್ರೌಪದಿ, ಸೀತೆ, ಕೈಕೇಯಿ, ಮಂಥರೆ ಇತ್ಯಾದಿ ಪಾತ್ರಗಳನ್ನು ಪುರುಷ ಕಲಾವಿದರು ನಿರ್ವಹಿಸುತ್ತಿದ್ದರು. ಈಗ ಕೂಡ್ಲಿಗಿ ಕಲಾವಿದೆಯರೇ ಈ ಪಾತ್ರಗಳ ಜತೆಗೆ ಪುರುಷ ಪಾತ್ರಗಳನ್ನೂ ನಿರ್ವಹಿಸುತ್ತ ಜನಪ್ರಿಯರಾಗುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.