ಹುಬ್ಬಳ್ಳಿ: ಮುದ್ದು ಮಗು; ಅದರ ಮುಗ್ದತನಕ್ಕೆ ಸೋಲದವರಿಲ್ಲ. ಆದರೆ ಆ ಮಗುವಿಗೆ ಒಂದು ಕಾಲಿನ ಮೊಣಕಾಲ ಕೆಳಗೆ ತುಂಡರಿಸಿ ಹೋಗಿದ್ದು ಕಂಡವರ ಕರುಳಿಗೆ ಕೆಂಡ ಸುರಿದ ಅನುಭವ. ಅಪಘಾತವೊಂದರಲ್ಲಿ ಕಾಲು ಕಳೆದುಕೊಂಡ ಈ ಪುಟಾಣಿಗೆ ಕೃತಕ ಕಾಲಿನ ಬಲ ತುಂಬಲಾಯಿತು.

ಇನ್ನೊಂದು ಪ್ರಕರಣ. ಆತ ಶಾಲಾ ಬಾಲಕ. ಅಪಘಾತಕ್ಕೆ ಸಿಲುಕಿ ಎಡಗಾಲು ಸಂಪೂರ್ಣವಾಗಿ ಕಳೆದುಕೊಂಡ ಆತನಿಗೆ ಇಡೀ ಕಾಲನ್ನು ಕಾಣಿಕೆಯಾಗಿ ನೀಡಲಾಯಿತು.

ಮತ್ತೊಂದು ಪ್ರಕರಣದ ವ್ಯಕ್ತಿ ರೈತ. ಹೊಲದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ನಂಜಿನ ಅಂಶವಿರುವ ಮುಳ್ಳು ಚುಚ್ಚಿದ ಕಾರಣ ಅವರ ಕಾಲಿನ ಅರ್ಧ ಭಾಗವನ್ನು ಕತ್ತರಿಸಿ ತೆಗೆಯಲಾಯಿತು. ಆ ಅರ್ಧ ಭಾಗಕ್ಕೆ ಶಕ್ತಿ ತುಂಬಲಾಯಿತು.

ಇಂಥ ಸಾವಿರಾರು ಪ್ರಕರಣಗಳಲ್ಲಿ `ಜಂಘಾಬಲ~ವನ್ನೇ ಕಳೆದುಕೊಂಡವರಿಗೆ ಕೃತಕ ಅಂಗದ ನೆರವು ನೀಡಿ ನಡಿಗೆಯನ್ನು, ಕೆಲಸವನ್ನು ಸುಲಭಗೊಳಿಸಿದ್ದು ಹುಬ್ಬಳ್ಳಿಯ ಮಹಾವೀರ ಲಿಂಬ್ ಸೆಂಟರ್ನ ಕೃತಕ ಅಂಗಜೋಡಣಾ ಶಿಬಿರಗಳು.

ತ್ಯಾಗಮೂರ್ತಿಯಾದ ಮಹಾವೀರನ ತತ್ವಗಳಿಗೆ ಜೀವ ತುಂಬಲು ಟೊಂಕಕಟ್ಟಿ ನಿಂತಿರುವ ಯುವಕರ ತಂಡವಾದ `ಅಖಿಲ ಭಾರತ ಜೈನ ಯುವ ಒಕ್ಕೂಟ~ ನಡೆಸುತ್ತಿರುವ ಮಹಾವೀರ ಲಿಂಬ್ ಸೆಂಟರ್ ನಗರದ ಕಿಮ್ಸ ಆವರಣದಲ್ಲಿ 1997ರಿಂದ ಕಾರ್ಯಾಚರಿಸುತ್ತಿದೆ. ಇದಕ್ಕೂ ಎರಡು ವರ್ಷ ಮೊದಲೇ ಕೃತಕ ಅಂಗಜೋಡಣಾ ಶಿಬಿರಗಳನ್ನು ನಡೆಸುತ್ತಿದ್ದ ಒಕ್ಕೂಟ ಈಗ ಇಂಥ ಶಿಬಿರಗಳಲ್ಲಿ ಶತಕದ ಸಾಧನೆ ಮಾಡಿದೆ.

ಏಪ್ರಿಲ್ 7ರಂದು ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದ ಶ್ರೀಮತಿ ಬಸಪ್ಪ ಶೆಟ್ಟರ ಕಲ್ಯಾಣ ಮಂಟಪದಲ್ಲಿ ನಡೆದ ಶಿಬಿರ ನೂರನೆಯದು. ಅಲ್ಲಿ ಸುಮಾರು 90 ಮಂದಿಗೆ ಕೃತಕ ಕೈ-ಕಾಲುಗಳನ್ನು ಜೋಡಿಸಿದ ಒಕ್ಕೂಟದ ಸಾರಥಿಗಳು ಹೊಸ ಮೈಲಿಗಲ್ಲು ದಾಟಿದ ಧನ್ಯತೆಯನ್ನು ಅನುಭವಿಸಿದರು.

`ಬದುಕಿ, ಬದುಕಲು ಬಿಡಿ~ ಎಂಬ ಜಿನತತ್ವದೊಂದಿಗೆ ಕೆಲಸ ಮಾಡುತ್ತಿರುವ ಒಕ್ಕೂಟದ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ಪ್ರಮುಖವಾದದ್ದು ಕೃತಕ ಅಂಗಜೋಡಣೆ. ಅಂಗಗಳನ್ನು ಕಳೆದುಕೊಂಡವರಿಗೆ ಕ್ರಚ್ಗಳು, ಕ್ಯಾಲಿಪರ್ಗಳು, ತ್ರಿಚಕ್ರ ಸೈಕಲ್ಗಳನ್ನು ಕೂಡ ಒದಗಿಸಿದ ಒಕ್ಕೂಟ ನೂರಾರು ಮಂದಿಯ ಬದುಕಿನ ಹಾದಿಗೆ ಊರುಗೋಲಾಗಿದೆ.

ಪ್ರತಿ ದಿನ ಲಿಂಬ್ ಸೆಂಟರ್ಗೆ ಆಗಮಿಸಿ ಕೃತಕ ಅಂಗ ಜೋಡಿಸಿಕೊಳ್ಳುವವರ ಸಂಖ್ಯೆ ಸಾಕಷ್ಟಿದೆ. ಹಳೆಯದಾದ ಕೃತಕ ಅಂಗಗಳನ್ನು ನವೀಕರಿಸುವವರು, ಅಂಗಜೋಡಣೆಗೆ ಹೆಸರು ನೋಂದಾಯಿಸುವವರು, ಮಾಹಿತಿ ತಿಳಿದುಕೊಂಡು ಹೋಗಲು ಬರುವವರು ಹೀಗೆ ಲಿಂಬ್ ಸೆಂಟರ್ನಲ್ಲಿ ಯಾವಾಗಲೂ `ಬಲ~ ಕಳೆದುಕೊಂಡವರ ಸಾಲೇ ಇರುತ್ತದೆ. ಅಲ್ಲಿ ಪ್ರತಿದಿನ ಕನಿಷ್ಟ ಒಬ್ಬರಿಗೆ ಕೃತಕ ಅಂಗವನ್ನು ಉಚಿತವಾಗಿ ಜೋಡಿಸಲಾಗುತ್ತದೆ.

ಇದೆಲ್ಲಕ್ಕಿಂತ ಹೊರತಾಗಿ ದೀನರ ಬಳಿಗೆ ಹೋಗಿ ಸೌಲಭ್ಯಗಳನ್ನು ಒದಗಿಸುವ ಶಿಬಿರಗಳು ಈಗ ಶತಕ ತಲುಪಿವೆ.
ಅಂಗ ಕಳೆದುಕೊಂಡರಿಗೆ ನೆರವು ನೀಡಲು ಉತ್ತರ ಕರ್ನಾಟಕದಲ್ಲಿ ಒಂದು ಕಾಲದಲ್ಲಿ ಯಾವುದೇ ಸಂಸ್ಥೆ ಇರಲಿಲ್ಲ. ಕೈಕಾಲುಗಳನ್ನು ಕೃತಕವಾಗಿ ಜೋಡಿಸಬೇಕಾದರೆ ಜೈಪುರಕ್ಕೆ ಹೋಗಿ ಬರಬೇಕಾದ ಪರಿಸ್ಥಿತಿ ಇತ್ತು. ಅಂಥ ಸಂದರ್ಭದ್ಲ್ಲಲಿ ಆರಂಭವಾದ ಮಹಾವೀರ ಲಿಂಬ್ ಸೆಂಟರ್ಈ ವರೆಗೆ ವಿತರಿಸಿದ ಕೃತಕ ಅಂಗಗಳ ಸಂಖ್ಯೆ 5 ಸಾವಿರ ಮೀರಿದೆ.

1995ರ ನವೆಂಬರ್ನಲ್ಲಿ 810 ಮಂದಿಗೆ ಕೃತಕ ಅಂಗ ಜೋಡಿಸುವುದರೊಂದಿಗೆ ಮೊದಲ ಶಿಬಿರ ನಡೆಸಿದ ಒಕ್ಕೂಟ 25ರ ಸಂಖ್ಯೆ ತಲುಪಲು 7 ವರ್ಷ ತೆಗೆದುಕೊಂಡಿತು. ಮತ್ತೆ ಕೇವಲ 3 ವರ್ಷಗಳಲ್ಲಿ ಅರ್ಧ ಶತಕದ ಗಡಿ ದಾಟಿದ ಶಿಬಿರಗಳ ಸಂಖ್ಯೆ ನಂತರದ ಎರಡು ವರ್ಷಗಳಲ್ಲಿ 75ರ ಗಡಿ ದಾಟಿತು. ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳು, ಚಿಕ್ಕಮಗಳೂರು, ಹಾಸನ, ದಾವಣಗೆರೆ ಮುಂತಾದ ಕಡೆಗಳಲ್ಲಿ ಒಕ್ಕೂಟ ಶಿಬಿರಗಳನ್ನು ನಡೆಸಿದೆ. ಗೋವಾದಲ್ಲಿ ಏಳು ಬಾರಿ ಶಿಬಿರಗಳನ್ನು ನಡೆಸಿದ್ದು ಒಂದು ಶಿಬಿರಕ್ಕೆ ಆಂಧ್ರ ಪ್ರದೇಶವೂ ಆತಿಥ್ಯ ವಹಿಸಿದೆ.

`ಶಿಬಿರಗಳನ್ನು ನಡೆಸಲು ಸ್ಥಳೀಯ ಸಂಘ-ಸಂಸ್ಥೆಗಳು ನೆರವು ನೀಡುತ್ತವೆ. ಶಿಬಿರಕ್ಕೆ ತಗಲುವ ವೆಚ್ಚದ ಅರ್ಧದಷ್ಟನ್ನು ಆತಿಥೇಯರು ಭರಿಸುತ್ತಾರೆ. ಅಂಥವ ಸಹೃದಯತೆಯಿಂದ ಒಕ್ಕೂಟದ ಆಶಯ ಈಡೇರುತ್ತಿದೆ~ ಎಂದು ಒಕ್ಕೂಟದ ಅಧ್ಯಕ್ಷ ಮಹೇಂದ್ರ ಎಚ್. ಸಿಂಘಿ `ಪ್ರಜಾವಾಣಿ~ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.