ಹುಬ್ಬಳ್ಳಿ: ಕೃಷಿಯನ್ನು ಉಪಜೀವನದ ಮಾರ್ಗವೆಂದು ತಿಳಿಯುವ ಬದಲು ಉದ್ಯಮವನ್ನಾಗಿ ಪರಿಗಣಿಸಿದರೆ ರೈತರ ಬಾಳು ಹಸನಾಗಿ ಒಕ್ಕಲುತನವೂ ಅಭಿವೃದ್ಧಿಯಾಗುತ್ತದೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ. ಪಿ.ಎಸ್. ಮುಂದಿನಮನಿ ಹೇಳಿದರು. ಲಿಂಗರಾಜನಗರದ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಪ್ರೊಬಸ್ ಕ್ಲಬ್ ಪಾಕ್ಷಿಕ ಸಭೆಯಲ್ಲಿ ‘ಕೃಷಿ ಬಜೆಟ್’ ಕುರಿತು ಉಪನ್ಯಾಸ ನೀಡಿದ ಅವರು ಮುಂಗಡಪತ್ರದ ಸಾಧಕಗಳು ಮತ್ತು ಕೊರತೆಗಳನ್ನು ಬಿಡಿಸಿಟ್ಟರು.

‘ನಮ್ಮ ದೇಶದಲ್ಲಿ ಕೃಷಿಯೆನ್ನುವುದು ರೈತರ ಉಪಜೀವನದ ಕಸುಬಾಗಿ ಉಳಿದಿದೆ. ಇದುವರೆಗೆ ಇದೊಂದು ವ್ಯವಸ್ಥಿತ ಉದ್ಯಮವಾಗಿ ಬೆಳೆಯಲಿಲ್ಲ. ಕೃಷಿರಂಗವೂ ಉದ್ಯಮವಾಗಿ ಬೆಳೆದರೆ ಕೃಷಿಕರೂ ಶ್ರೀಮಂತರಾಗುತ್ತಾರೆ. ಅವರ ಜೀವನಮಟ್ಟ ಸುಧಾರಿಸುವುದರೊಂದಿಗೆ, ದೇಶದ ಅಭಿವೃದ್ಧಿಯೂ ಆಗುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಕೃಷಿ ಕ್ಷೇತ್ರ ಇವತ್ತು ಹಲವಾರು ಸಮಸ್ಯೆಗಳಲ್ಲಿ ಸಿಲುಕಿಕೊಂಡಿದೆ. ಸಣ್ಣ ಹಿಡುವಳಿದಾರರ ಸಂಖ್ಯೆ ಹೆಚ್ಚುತ್ತಿದೆ. ಉದ್ಯಮಪತಿಗಳು ಹೊಸ ಮಾದರಿಯ ಜಮಿನ್ದಾರರಾಗಿ ರೈತರ ದೌರ್ಬಲ್ಯಗಳನ್ನು ಬಳಸಿಕೊಳ್ಳುತ್ತಿದ್ದಾರೆ’ ಎಂದು ಹೇಳಿದರು.

‘ಸಣ್ಣ ಹಿಡುವಳಿದಾರರು ಒಂದಾಗಿ ಸಹಕಾರಿ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು. ಸಂಚಾರಿ ಮಾರುಕಟ್ಟೆಯ ಮೂಲಕ ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ಒದಗಿಸಬೇಕು. ಮನೆ ಬಾಗಿಲಿಗೆ ಸಾಲ ಒದಗಿಸುವ, ನದಿಜೋಡಣೆ ಕಾರ್ಯಕ್ರಮದ ಮೂಲಕ ನೀರಾವರಿಗೆ ಒತ್ತು ನೀಡುವ ಕಾರ್ಯವಾಗಬೇಕು. ಪ್ರತಿಯೊಂದು ಹಳ್ಳಿಯಲ್ಲಿಯೂ ಸರ್ಕಾರೇತರ ಸಂಸ್ಥೆಗಳನ್ನು ರಚಿಸಿ ಯೋಜನೆಗಳ ತಿಳಿವಳಿಕೆ ಮತ್ತು ಅನುಷ್ಠಾನಕ್ಕಾಗಿ ಶ್ರಮಿಸಲು ಪ್ರೋತ್ಸಾಹಿಸಬೇಕು. ಈ ಎಲ್ಲ ಅಂಶಗಳೂ ಬಜೆಟ್ನಲ್ಲಿ ಅಡಕವಾಗಬೇಕಿತ್ತು’ ಎಂದು ಅಭಿಪ್ರಾಯಪಟ್ಟರು.

ಕ್ರಿಕೆಟ್ ಸಮೂಹ ಸನ್ನಿ

ಕಾರ್ಯಕ್ರಮದಲ್ಲಿ ವಿಶ್ವಕಪ್ ಕ್ರಿಕೆಟ್ ಟೂರ್ನಿ ಕುರಿತು ಉಪನ್ಯಾಸ ನೀಡಿದ ಪ್ರಜಾವಾಣಿ ಸ್ಥಾನಿಕ ಸಂಪಾದಕ ಗೋಪಾಲಕೃಷ್ಣ ಹೆಗಡೆ, ‘ನಮ್ಮ ಇಂಗ್ಲಿಷ್ ವ್ಯಾಮೋಹವೇ ಕ್ರಿಕೆಟ್ ಬೆಳೆಯಲು ಕಾರಣವಾಗಿದೆ. ಇಂದು ಈ ಆಟದ ಸಮೂಹ ಸನ್ನಿಗೆ ಜನರು ಒಳಗಾಗಿದ್ದಾರೆ’ ಎಂದು ಹೇಳಿದರು. ‘ಕ್ರಿಕೆಟ್ ಒಂದು ಒಳ್ಳೆಯ ಆಟ. ಜಾತಿ, ಮತ, ಬೇಧ ಮರೆತು ಎಲ್ಲರನ್ನೂ ಒಂದುಗೂಡಿಸುವ ಶಕ್ತಿ ಇದಕ್ಕಿದೆ. ಆದರೆ ಹಣದ ಹುಚ್ಚುಹೊಳೆ ಇಲ್ಲಿ ಹರಿಯುತ್ತಿದೆ. ದೃಶ್ಯ ಮಾಧ್ಯಮಗಳ ವಿಪರೀತ ಪ್ರಚಾರವೂ ಕ್ರಿಕೆಟ್ ಈ ರೀತಿ ಜನರ ಮನವನ್ನು ಆವರಿಸಲು ಕಾರಣವಾಗಿದೆ. ಈ ಆಟದ ಜನಪ್ರಿಯತೆ ಜೂಜಾಟಕ್ಕೂ ದಾರಿ ಮಾಡಿಕೊಟ್ಟಿದೆ. ಒಂದು ರಾಜ್ಯದ ಬಜೆಟ್ ಮೀರಿಸುವ ಮೊತ್ತದಷ್ಟು ಹಣ ಕ್ರಿಕೆಟ್ ಬೆಟ್ಟಿಂಗ್ನಲ್ಲಿರುತ್ತದೆ’ ಎಂದರು.

‘ಕ್ರಿಕೆಟ್ನಿಂದಾಗಿ ಬೇರೆ ಆಟಗಳು ಹಾಳಾಗಲಿಲ್ಲ. ಮಾಧ್ಯಮಗಳು, ಖಾಸಗಿ ಸಂಸ್ಥೆಗಳು ಕ್ರಿಕೆಟ್ ಜನಪ್ರಿಯತೆಯನ್ನು ಬಳಸಿಕೊಂಡು ಶ್ರೀಮಂತವಾದವು. ಆದರೆ ಉಳಿದ ಆಟಗಳಲ್ಲಿ ಈ ಕೆಲಸ ಆಗಲಿಲ್ಲ. ಪಾಲಕರಿಗೂ ತಮ್ಮ ಮಕ್ಕಳು ಸಚಿನ್ ತೆಂಡೂಲ್ಕರ್ ಆಗಬೇಕು. ಕೋಟಿಗಟ್ಟಲೆ ಹಣ ಗಳಿಸಬೇಕು ಎಂಬ ಆಸೆ. ಆದರೆ ಕ್ರಿಕೆಟ್ ಬಗ್ಗೆ ಇರುವ ಈ ಆದರ ಪ್ರೀತಿಯನ್ನು ಸಮಾಜ ಮತ್ತು ದೇಶದ ಎಲ್ಲ ಆಗುಹೋಗುಗಳ ಬಗ್ಗೆಯೂ ಬೆಳೆಸಿಕೊಳ್ಳುವಂತೆ ಮಕ್ಕಳಿಗೆ ಹೇಳಿಕೊಡುವ ಕೆಲಸವಾಗಬೇಕು’ ಎಂದು ಅಭಿಪ್ರಾಯಪಟ್ಟರು.

ಪ್ರೊಬಸ್ ಕ್ಲಬ್ ಅಧ್ಯಕ್ಷ ಡಾ. ಸಿ.ಆರ್. ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಮೂಶಣ್ಣವರ ಮತ್ತು ಪ್ರೊ. ಯುವರಾಜ್ ಅತಿಥಿಗಳನ್ನು ಪರಿಚಯಿಸಿದರು. ಕಾರ್ಯದರ್ಶಿ ಪ್ರೊ. ಶಶಿಕಾಂತ ಡಿ. ಕರ್ಕಿ ನಿರೂಪಿಸಿ, ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.