ಶನಿವಾರ, ಮೇ 8, 2021
18 °C

ಕೃಷಿ ವಿಮಾ ಯೋಜನೆ: ವಿವಿಧ ಬೆಳೆಗಳಿಗೆ ಮಂಜೂರಾತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ರಾಷ್ಟ್ರೀಯ ಕೃಷಿ ವಿಮಾ ಯೋಜನೆಯಡಿ 2013ರ ಮುಂಗಾರು ಹಂಗಾಮಿಗೆ ಕರ್ನಾಟಕ ರಾಜ್ಯ ಸರ್ಕಾರದ ಆದೇಶದ ಅನ್ವಯ ಈ ಕೆಳಕಂಡ ಹೋಬಳಿ ಮಟ್ಟಕ್ಕೆ ವಿವಿಧ ಬೆಳೆಗಳನ್ನು ರಾಷ್ಟ್ರೀಯ ಕೃಷಿ ವಿಮಾ ಯೋಜನೆಯಡಿ ಅಳವಡಿಸಿ ಅನುಷ್ಠಾನಗೊಳಿಸಲು ಮಂಜೂರಾತಿ ನೀಡಲಾಗಿದೆ.ಚಿಕ್ಕಮಗಳೂರು ತಾಲ್ಲೂಕಿನ ಕಸಬ ಹೋಬಳಿ: ಭತ್ತ, ರಾಗಿ, ಅಂಬಳೆ ಹೋಬಳಿ- ಭತ್ತ, ರಾಗಿ, ಮುಸುಕಿನ ಜೋಳ, ನೆಲಗಡಲೆ, ಆಲ್ದೂರು ಹೋಬಳಿ- ಭತ್ತ (ಮಳೆ ಆಶ್ರಿತ), ಅವುತಿ- ಭತ್ತ, ಖಾಂಡ್ಯ ಭತ್ತ,, ಜಾಗರ -ಭತ್ತ, ಲಕ್ಯಾ -ಮುಸುಕಿನ ಜೋಳ, ರಾಗಿ, ಸೂರ್ಯಕಾಂತಿ, ಎಳ್ಳು, ವಸ್ತಾರೆ ಭತ್ತ(ನೀರಾವರಿ)ಕಡೂರು ತಾಲ್ಲೂಕಿನ ಬೀರೂರು ಹೋಬಳಿ-ಭತ್ತ, ಮುಸುಕಿನ ಜೋಳ, ರಾಗಿ,  ಸೂರ್ಯಕಾಂತಿ, ಹುರುಳಿ, ಹೆಸರು, ಎಳ್ಳು, ನೆಲಗಡಲೆ (ಶೇಂಗಾ), ಹಿರೇನಲ್ಲೂರು-ಮುಸುಕಿನ ಜೋಳ,  ರಾಗಿ, ಸೂರ್ಯಕಾಂತಿ, ಹುರುಳಿ, ಹೆಸರು, ಎಳ್ಳು, ಸಾವೆ, ನೆಲಗಡಲೆ (ಶೇಂಗಾ), ಚೌಳಹಿರಿಯೂರು- ಜೋಳ, ರಾಗಿ, ಸೂರ್ಯಕಾಂತಿ, ಹುರುಳಿ, ಹೆಸರು, ಎಳ್ಳು, ಸಾವೆ, ನೆಲಗಡಲೆ (ಶೇಂಗಾ),  ಕಸಬ ಹೋಬಳಿ- ಮುಸುಕಿನ ಜೋಳ, ರಾಗಿ, ಸೂರ್ಯಕಾಂತಿ, ಹುರುಳಿ, ಹೆಸರು, ಎಳ್ಳು, ಸಾವೆ, ನೆಲಗಡಲೆ (ಶೇಂಗಾ), ಪಂಚನಹಳ್ಳಿ-ಜೋಳ, ರಾಗಿ, ಹುರುಳಿ, ಹೆಸರು, ಎಳ್ಳು, ಸಾವೆ, ಉದ್ದು, ನೆಲಗಡಲೆ (ಶೇಂಗಾ), ಸಖರಾಯಪಟ್ಟಣ- ಭತ್ತ, ಮುಸುಕಿನ ಜೋಳ, ಜೋಳ, ರಾಗಿ, ಸೂರ್ಯಕಾಂತಿ, ಹುರುಳಿ, ಹೆಸರು, ಎಳ್ಳು, ನೆಲಗಡಲೆ (ಶೇಂಗಾ), ಸಿಂಗಟಗೆರೆ- ಜೋಳ, ರಾಗಿ, ಸೂರ್ಯಕಾಂತಿ (ಮಳೆ ಆಶ್ರಿತ),  ಹುರುಳಿ, ಹೆಸರು, ಎಳ್ಳು, ಸಾವೆ, ಉದ್ದು, ನೆಲಗಡಲೆ, (ಶೇಂಗಾ) (ಮಳೆ ಆಶ್ರಿತ), ಯಗಟಿ-ಜೋ, ಮುಸುಕಿನ ಜೋಳ, ರಾಗಿ, ಸೂರ್ಯಕಾಂತಿ, ಹುರುಳಿ, ಹೆಸರು, ಎಳ್ಳು, ಸಾವೆ, ನೆಲಗಡಲೆ (ಶೇಂಗಾ),ಮೂಡಿಗೆರೆ, ಕೊಪ್ಪ, ಎನ್.ಆರ್.ಪುರ ಹಾಗೂ ಶೃಂಗೇರಿ ತಾಲ್ಲೂಕುಗಳ ಹೋಬಳಿಗಳಿಗೆ: ಬತ್ತ

ತರೀಕೆರೆ  ತಾಲ್ಲೂಕಿನ ಅಜ್ಜಂಪುರ ಬತ್ತ, ಮುಸುಕಿನ ಜೋಳ, ರಾಗಿ, ಸೂರ್ಯಕಾಂತಿ, ಹುರುಳಿ, ಜೋಳ, ಎಳ್ಳು, ನೆಲಗಡಲೆ (ಶೇಂಗಾ), ಅಮೃತಾಪುರ ಬತ್ತ (ನೀರಾವರಿ), ಭತ್ತ, ಮುಸುಕಿನ ಜೋಳ, ರಾಗಿ, ಹುರುಳಿ, ಎಳ್ಳು, ನೆಲಗಡಲೆ (ಶೇಂಗಾ), ಲಕ್ಕವಳ್ಳಿ- ಬತ್ತ, ಮುಸುಕಿನಜೋಳ, ರಾಗಿ, ಲಿಂಗದಹಳ್ಳಿ ಭತ್ತ, ಮುಸುಕಿನ ಜೋಳ, ರಾಗಿ, ಹುರುಳಿ, ಎಳ್ಳು, ನೆಲಗಡಲೆ (ಶೇಂಗಾ), ಶಿವನಿ-ಬತ್ತ, ಮುಸುಕಿನ ಜೋಳ, ಸೂರ್ಯಕಾಂತಿ, ರಾಗಿ, ಹುರುಳಿ, ಎಳ್ಳು, ನೆಲಗಡಲೆ (ಶೇಂಗಾ), ಕಸಬಾ- ಬತ್ತ, ಮುಸುಕಿನ ಜೋಳ, ಹುರುಳಿ.

ಈ ಯೋಜನೆಯಲ್ಲಿ ಬೆಳೆ ಸಾಲ ಪಡೆಯದ ರೈತರು ಬೆಳೆ ಬಿತ್ತಿದ, ನಾಟಿ ಮಾಡಿದ ನಂತರ 30 ದಿನಗೊಳಗಿರುವ ಬೆಳೆಗಳಿಗೆ ಮಾತ್ರ ವಿಮಾ ಕಂತು ಕಟ್ಟಿ ಅರ್ಜಿ ಸಲ್ಲಿಸತಕ್ಕದ್ದು. ವಿವಿಧ ಬೆಳೆಗಳಿಗೆ ಬೆಳೆ ಸಾಲ ಪಡೆಯದ ರೈತರು ಬ್ಯಾಂಕುಗಳಿಗೆ ಘೋಷಣೆ ಸಲ್ಲಿಸಲು ಆಗಸ್ಟ್ 31 ಕೊನೆ ದಿನ.ವಿಮಾ ಕಂತು ಬತ್ತ (ನೀರಾವರಿ) 817.50 ಹಾಗೂ ಬತ್ತ (ಮಳೆ ಆಶ್ರಿತ) 407.50, ಮುಸುಕಿನ ಜೋಳ 467, ಜೋಳ 300, ರಾಗಿ 405, ಸಾವೆ 322.50, ಉದ್ದು 210, ಹೆಸರು 140, ಹುರಳಿ 195, ಸೂರ್ಯಕಾಂತಿ 262, ಎಳ್ಳು 483 ಹಾಗೂ ನೆಲಗಡಲೆಗೆ ರೂ. 500 ರೂಪಾಯಿ ನಿಗದಿಪಡಿಸಲಾಗಿದೆ.ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ಇಲಾಖೆ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.