ಕೃಷಿ ಸ್ನಾತಕ ಪದವಿ: ನಾಳೆ ಕೌನ್ಸೆಲಿಂಗ್
ರಾಯಚೂರು: ರಾಯಚೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಶೈಕ್ಷಣಿಕ ವರ್ಷ 2013-14ನೇ ಸಾಲಿಗಾಗಿ ಬಿಎಸ್ಸಿ(ಕೃಷಿ), ಬಿ.ಟೆಕ್ (ಕೃಷಿ ತಾಂತ್ರಿಕತೆ) ಸ್ನಾತಕ ಪದವಿಗಳ ಪ್ರವೇಶಕ್ಕೆ ಈಗಾಗಲೇ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಅರ್ಹತಾ ಪಟ್ಟಿ (ಮೆರಿಟ್) ವಿವರವನ್ನು ಕೃಷಿ ವಿವಿ ಅಂತರ್ಜಾಲದಲ್ಲಿ (ಅಂತರ್ಜಾಲ ವಿಳಾಸ: www.uasraichur.edu.in ) ಜುಲೈ 4ಕ್ಕೆ ಪ್ರಕಟಿಸಲಾಗಿದೆ.
ಕೃಷಿ ವಿ.ವಿಯು ಜುಲೈ 8ರಿಂದ 10ರವರೆಗೆ ಮೂರು ವಿಭಾಗಗಳಲ್ಲಿ ಕೌನ್ಸೆಲಿಂಗ್ ನಡೆಸಲಿದೆ. ಎನ್ಸಿಸಿ, ಕ್ರೀಡೆ, ಸ್ಕೌಟ್ಸ್ ಅಂಡ್ ಗೈಡ್ಸ್, ಡಿಫೆನ್ಸ್, ಮಾಜಿ ಸೈನಿಕ, ಅಂಗವಿಕಲ ಮತ್ತು ಆಂಗ್ಲೋ ಇಂಡಿಯನ್ ವಿಶೇಷ ಕೋಟಾದಡಿ ಸೀಟು ಬಯಸುವ ಅಭ್ಯರ್ಥಿಗಳು ಜುಲೈ 8ರಂದು ಹಾಜರಾಗಬೇಕು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.