ಕೆಟಿಎಂನ ಡ್ಯೂಕ್ ಭಾರತಕ್ಕೆ ಕಾಲಿಟ್ಟಾಗ ಇಲ್ಲಿನ ಯುವಕರಲ್ಲಿ ಸಂಚಲನ ಮೂಡಿತ್ತು. ಇದಕ್ಕೆ ಕಾರಣವಿಷ್ಟೇ. ಅಂತರರಾಷ್ಟ್ರಿಯ ಸೌಲಭ್ಯಗಳುಳ್ಳ ಬೈಕ್ ಭಾರತದಲ್ಲಿ ಇರಲೇ ಇಲ್ಲ. ಅದರಲ್ಲೂ ಸರಿಸುಮಾರು 1 ಲಕ್ಷದಿಂದ 2.5 ಲಕ್ಷ ರೂಪಾಯಿಗೆ ಈ ರೀತಿಯ ಬೈಕ್ ಸಿಗುವುದು ನಿಜಕ್ಕೂ ಅಚ್ಚರಿಯೇ ಸರಿ. ಏಕೆಂದರೆ ಆಮದುಗೊಂಡ ಅಂತರರಾಷ್ಟ್ರೀಯ ಬೈಕ್ಗೆ ಸೆಕೆಂಡ್ ಹ್ಯಾಂಡ್ಗೇ ಸುಮಾರು 8 ಲಕ್ಷ ರೂಪಾಯಿ ಆಗುತ್ತದೆ!

ಹೀಗಿರುವಾಗ ಬಜಾಜ್ ಮೋಟಾರ್ಸ್ ಕೆಟಿಎಂನ ಡ್ಯೂಕ್ ಬೈಕ್ಗಳನ್ನು ಆಮದು ಮಾಡಿ ಮಾರಾಟ ಮಾಡಿದಾಗ ಎಲ್ಲರ ಹುಬ್ಬೇರಿದ್ದು ಸಹಜ. ಆದರೆ ಬಹಳಷ್ಟು ಮಂದಿಗೆ ಮರೆತು ಹೋಗಿರಬಹುದು. ಈ ರೀತಿ ಅಂತರರಾಷ್ಟ್ರೀಯ ಬ್ರಾಂಡ್ನ ಬೈಕ್ಗಳನ್ನು ಆಮದು ಮಾಡಿಸಿಕೊಂಡಿದ್ದು ಬಜಾಜ್ ಮೊದಲನೆಯದಲ್ಲ. ಇದಕ್ಕೂ ಮುಂಚೆ 2003-4ರಲ್ಲಿ ಕೈನೆಟಿಕ್ ಹ್ಯೂಸಂಗ್ನ ಬೈಕ್ಗಳನ್ನು ಆಮದು ಮಾಡಿಕೊಂಡಿದ್ದು. ಆಗಲೂ ಅಕ್ವಿಲಾ ಹೆಸರಿನ ಬೈಕ್ಗಳೇ ಭಾರತದಲ್ಲಿ ಸಂಚರಿಸಿದ್ದವು. ಆದರೆ ಆಗ ಬಂದದ್ದು ಕ್ರೂಸರ್.

ಸ್ಪೋರ್ಟ್ಸ್ ಬೈಕ್ ಅಲ್ಲ. ಆದರೆ ಬಹಳಷ್ಟು ವರ್ಷಗಳ ಕಾಲ ತೆರೆ ಮರೆಗೆ ಸರಿದಿದ್ದ ಅಕ್ವಿಲಾ ಈಗ ಮತ್ತೆ ಭಾರತದಲ್ಲಿ ಪದಾರ್ಪಣೆ ಮಾಡಿದೆ. ಈಗಲೂ ತಾನು ಕ್ರೂಸರ್ ಪ್ರಿಯನೇ ಎಂದು ತೋರಿಸಿಕೊಂಡಿದೆ. ಈಗಾಗಲೇ ಹ್ಯೋಸಂಗ್ ತನ್ನದೇ ಘಟಕವನ್ನು ಭಾರತದಲ್ಲಿ ಆರಂಭಿಸಿದ್ದು, ಹೊಸ ಬೈಕ್ಗಳನ್ನು ತಯಾರಿಸಿಯೇ ಬಿಟ್ಟಿದೆ. ಸುಮಾರು ೬ ಸಾವಿರ ಚದರ ಅಡಿಗಳ ಶೋರೂಂ ಪುಣೆಯಲ್ಲಿ ಮುಕ್ತವಾಗಿದ್ದು, ಜನರಿಗೆ ಆಕರ್ಷಣೆಯ ಕೇಂದ್ರವೂ ಆಗಿಬಿಟ್ಟಿದೆ.

ಈ ಹಿಂದೆ ಹೇಳಿದಂತೆ ಅಂತರರಾಷ್ಟ್ರೀಯ ಬೈಕ್ಗಳು ಭಾರತಕ್ಕೆ ಬರುವ ಕಾಲ ಆರಂಭವಾಗಿಬಿಟ್ಟಿದೆ. ಈಗಾಗಲೇ ಹಾರ್ಲಿ ಡೇವಿಡ್ಸನ್ ಅತಿ ದೊಡ್ಡ ಬಳಗವನ್ನೇ ಹುಟ್ಟುಹಾಕಿಕೊಂಡು ಕ್ರೂಸರ್ ಅಷ್ಟೇ ಅಲ್ಲದೇ, ಸ್ಪೋರ್ಟ್ಸ್ ವಿಭಾಗದಲ್ಲೂ ಮುಂದಿದೆ. ಹಾರ್ಲಿ ಹಾಗೂ ಅಕ್ವಿಲಾ ಭಾರತದ ರಾಯಲ್ ಎನ್ಫೀಲ್ಡ್ಗೆ ಪ್ರತಿಸ್ಪರ್ಧಿಗಳು. ಎನ್ಫೀಲ್ಡ್ಗೆ ತನ್ನದೇ ಅಭಿಮಾನಿ ಬಳಗ ಇದ್ದು, ಈ ಬೈಕ್ಗಳಿಗಿಂತ ಕಡಿಮೆ ಬೆಲೆ ಹಾಗೂ ಹೆಚ್ಚು ದೃಢ ಆಗಿರುವುದರಿಂದ ಅದಕ್ಕೇನೂ ಪ್ರಸಿದ್ಧಿ ಕಳೆದುಕೊಳ್ಳುವ ಅಪಾಯವಿಲ್ಲ. ಆದರೆ ಹೊಸ ತಲೆಮಾರಿನ ಯುವಕರು ಮಾತ್ರ ಈ ಹೊಸ ಬೈಕ್ಗಳತ್ತ ಗಮನ ಹರಿಸಿದರೆ ಆಶ್ಚರ್ಯವಿಲ್ಲ. ಈ ನಿಟ್ಟಿನಲ್ಲಿ ಹ್ಯೋಸಂಗ್ನ ಅಕ್ವಿಲಾ ಎಲ್ಲ ರೀತಿಯ ಅಚ್ಚರಿಗಳನ್ನು ತನ್ನಲ್ಲಿ ಹುದುಗಿಸಿಕೊಂಡು ಬಂದಿದೆ.

ಮಸಲ್ ಫುಲ್ ಲುಕ್
ದಷ್ಟಪುಷ್ಟವಾದ ಮಾಂಸಖಂಡಗಳುಳ್ಳ ದೈತ್ಯನಂತೆ ಅಕ್ವಿಲಾ ಕಾಣುತ್ತದೆ. ಈ ಹಿಂದೆ 2003ರಲ್ಲಿ ಬಂದಿದ್ದ ಅಕ್ವಿಲಾಗೂ ಈಗಿನ ಆಕ್ವಿಲಾಗೂ ಅನೇಕ ಸಾಮ್ಯತೆಗಳಿವೆ. ದೇಹ ರಚನೆ, ವಿನ್ಯಾಸ, ಚಕ್ರಗಳ ರಚನೆ ಯಥಾವತ್ ಇದೆ. ಆದರೆ ಕಾಲಕ್ಕೆ ತಕ್ಕಂತೆ ಬದಲಾವಣೆ ಆಗಿದೆ. ಫ್ಯುಯೆಲ್ ಇಂಜೆಕ್ಷನ್ ಸೌಲಭ್ಯ ಇದ್ದು, ಅತಿ ಹೆಚ್ಚು ವೇಗ ಹಾಗೂ ಮೈಲೇಜ್ ದೊರೆಯುತ್ತದೆ. 250 ಸಿಸಿ ಎಂಜಿನ್ ಆದರೂ, ಕನಿಷ್ಠ 4೦ ಕಿಲೋಮೀಟರ್ ಮೈಲೇಜ್ಗೆ ಮೋಸವಿಲ್ಲ ಎಂದು ಕಂಪೆನಿ ಹೇಳಿಕೊಂಡಿದೆ. ಇದು ಕೇವಲ ಪೇಪರ್ ಮೇಲಿನ ಭರವಸೆ ಆಗಿರದೆ, ಆನ್ ರೋಡ್ ಮೈಲೇಜ್ ಆಗಿರುವುದೂ ವಿಶೇಷವೇ.

249 ಸಿಸಿ 4 ಸ್ಟ್ರೋಕ್ ಎಂಜಿನ್, 26.2 ಬಿಎಚ್ಪಿ (9500 ಆರ್ಪಿಎಂ), 2.1 ಕೆಜಿಎಂ ಟಾರ್ಕ್ (7೦೦೦ ಆರ್ಪಿಎಂ) ಇದೆ. ಹಾಗಾಗಿ ಅತಿ ಬಲಿಷ್ಠ ಶಕ್ತಿ ಬೈಕ್ಗೆ ಸಿಗುತ್ತದೆ. ಕ್ರೂಸರ್ ಆಗಿರುವ ಕಾರಣ, ಆರಾಮದಾಯಕ ವಿಶಾಲವಾದ ಸೀಟ್ಗಳಿವೆ. ವಿಶೇಷ ಎಂದರೆ ಇದು ಕುಳ್ಳ ಬೈಕ್. ಕೇವಲ 17 ಇಂಚುಗಳ ಚಕ್ರಗಳಿವೆ. ಹಾಗಾಗಿ ಪಕ್ಕಾ ಕ್ರೂಸರ್ ಇದು ಎಂಬುವುದನ್ನು ಬಲವಂತವಾಗಿ ನೆನಪಿಸುತ್ತದೆ!

ಅಕ್ವಿಲಾ ಹಾಗೂ ಹಾರ್ಲಿ ಬೈಕ್ಗಳಿಂದ ದೇಸೀಯ ರಾಯಲ್ ಎನ್ಫೀಲ್ಡ್ ಅಳವಡಿಸಿಕೊಳ್ಳುವುದಂತೂ ಸಾಕಷ್ಟಿದೆ. ಈಗಲೂ ತನ್ನ ದುಬಾರಿ ಬೈಕ್ಗಳಲ್ಲಿ ಫ್ಯುಯಲ್ ಇಂಜೆಕ್ಷನ್ ಸೌಲಭ್ಯ ಬದಲಿಗೆ, ಕಾರ್ಬುರೇಟರ್ ಇದೆ. ಇದನ್ನು ಬದಲಿಸಿಕೊಳ್ಳುವುದು ಉತ್ತಮ. ಚಕ್ರಗಳಿಗೆ ಸ್ಪೋಕ್ಸ್ ಜತೆ ಅಲಾಯ್ ಅವಕಾಶವನ್ನೂ ಕೊಡಬೇಕಾದ್ದು ಇಂದಿನ ಕಾಲದ ಅನಿವಾರ್ಯತೆ.

14 ಲೀಟರ್ ಪೆಟ್ರೋಲ್ ಇರುವ ಕಾರಣ, ತಡೆರಹಿತ 560 ಕಿಲೋಮೀಟರ್ ದೂರವನ್ನು ಕ್ರಮಿಸುವ ಅವಕಾಶವಿದೆ. ಕ್ರೂಸರ್ಗಳಿಗೆ ಬೇಕಿರುವುದು ಸಹ ಇದೇ. ಮತ್ತೆ ಮತ್ತೆ ಪೆಟ್ರೋಲ್ ಬಂಕ್ಗಳಿಗೆ ತೆರಳುವ ಗೋಜು ಇರಬಾರದು. ಸುರಕ್ಷೆಯೂ ಉತ್ತಮವಿದೆ. 275 ಎಂಎಂ ಎದುರಿನ ಡಿಸ್ಕ್ ಬ್ರೇಕ್ ಇದೆ. ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಇದೆ. ಇದು ಸಹ ಡಿಸ್ಕ್ ಇರಬೇಕಿತ್ತು. ಭಾರತೀಯರಿಗೆ ಇಷ್ಟು ಸಾಕು ಎನ್ನುವಂತಿದೆ ಇದು. ಬೆಲೆ 2.65 ಲಕ್ಷ ರೂಪಾಯಿ. ಕಾಸಿಗೆ ತಕ್ಕ ಕಜ್ಜಾಯ ಎನ್ನುವುದರಲ್ಲಿ ಎರಡು ಮಾತಿಲ್ಲ. ಕಿಸೆಯಲ್ಲಿ ಕಾಸಿದ್ದವರು ಕೊಳ್ಳಲು ಅರ್ಹತೆಯುಳ್ಳ ಬೈಕ್ ಇದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.