ಕೆನಡಾ ಶೃಂಗಸಭೆಗೆ ಭಾರತದ 25 ಕುಲಪತಿಗಳು
ಟೊರಾಂಟೊ: (ಐಎಎನ್ಎಸ್): ಕೆನಡಾದ ಒಟ್ಟಾವ ನಗರದ ಕಾರ್ಲ್ಟನ್ ವಿಶ್ವವಿದ್ಯಾಲಯದಲ್ಲಿ ‘ಭಾರತ ವರ್ಷಾಚರಣೆ’ಯ ಅಂಗವಾಗಿ ನಡೆಯಲಿರುವ ಶೈಕ್ಷಣಿಕ ಶೃಂಗಸಭೆಯಲ್ಲಿ ಭಾರತದ 25 ಕುಲಪತಿಗಳು ಪಾಲ್ಗೊಳ್ಳಲಿದ್ದಾರೆ. ಎರಡು ದಿನಗಳ ಈ ಶೃಂಗಸಭೆ ಮೇ 16 ಹಾಗೂ 17ರಂದು ನಡೆಯಲಿದ್ದು, ಶಾಸ್ತ್ರಿ ಇಂಡೊ-ಕೆನಡಿಯನ್ ಇನ್ಸ್ಟಿಟ್ಯೂಟ್, ವಿದೇಶಿ ವ್ಯವಹಾರಗಳ ವಿಭಾಗ ಹಾಗೂ ಕೆನಡಾದ ಅಂತರರಾಷ್ಟ್ರೀಯ ವ್ಯಾಪಾರ ಸಂಸ್ಥೆ , ಭಾರತೀಯ ಹೈ ಕಮಿಷನ್ ಹಾಗೂ ಕೆನಡಾ ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಸಹಯೋಗದಲ್ಲಿ ಈ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿವಿ ಹೇಳಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.