ಕೆನ್‌ವುಡ್ ಲಕ್ಕಿಡ್ರಾ

7

ಕೆನ್‌ವುಡ್ ಲಕ್ಕಿಡ್ರಾ

Published:
Updated:

ಯುರೋಪ್‌ನ ಪ್ರತಿಷ್ಠಿತ  ಆಹಾರ ತಯಾರಿಕಾ ಉಪಕರಣಗಳ ಬ್ರಾಂಡ್ `ಕೆನ್‌ವುಡ್~ ಈಗ ಬೆಂಗಳೂರು ಮಾರುಕಟ್ಟೆ ಪ್ರವೇಶಿಸಿದೆ. ತನ್ನ ಉತ್ಪನ್ನಗಳ ಮಾರಾಟಕ್ಕಾಗಿ ಇ ಜೋನ್ ಮತ್ತು ಹೋಮ್‌ಟೌನ್‌ನೊಂದಿಗೆ  ಒಪ್ಪಂದ ಮಾಡಿಕೊಂಡಿದೆ.ರಾಜಾಜಿನಗರ, ಕೋರಮಂಗಲದಲ್ಲಿನ ಈ ಮಳಿಗೆಗಳಲ್ಲಿ ಅಕ್ಟೋಬರ್ 6ರ ಒಳಗೆ 5 ಸಾವಿರ ರೂಪಾಯಿಗೂ ಹೆಚ್ಚಿನ ಮೌಲ್ಯದ ಕೆನ್‌ವುಡ್ ಸಾಧನಗಳನ್ನು ಖರೀದಿಸುವ ಗ್ರಾಹಕರು ಲಕ್ಕಿ ಡ್ರಾದಲ್ಲಿ ಭಾಗವಹಿಸಬಹುದು.ವಿಜೇತರಿಗೆ 10 ಅಗ್ರಮಾನ್ಯ ಕೆನ್‌ವುಡ್ ಉತ್ಪನ್ನಗಳ ಪೈಕಿ ಒಂದನ್ನು ಗೆಲ್ಲುವ ಅವಕಾಶ ಇರುತ್ತದೆ. ಪ್ರತಿ ಮಳಿಗೆಯಿಂದ 10 ರಂತೆ ಒಟ್ಟೂ 40 ವಿಜೇತರ ಹೆಸರನ್ನು ಅ. 9ರಂದು ಪ್ರಕಟಿಸಲಾಗುತ್ತದೆ.   ಕೆನ್‌ವುಡ್ ಉತ್ಪನ್ನಗಳಲ್ಲಿ ಫುಡ್ ಪ್ರೊಸೆಸರ್‌ಗಳು, ಟ್ರೈಬ್ಲೇಡ್ ಹ್ಯಾಂಡ್ ಬ್ಲೆಂಡರ್‌ಗಳು ಮತ್ತು ಹೆಲ್ತ್ ಗ್ರಿಲ್, ಫುಡ್ ಸ್ಟೀಮರ್ಸ್‌, ಹ್ಯಾಂಡ್ ಮಿಕ್ಸರ್‌ಗಳು, ಸ್ಮೂದಿ ಮೇಕರ್ಸ್‌, ಕೆಟಲ್‌ಗಳು, ಬ್ರೆಡ್ ಮೇಕರ್ ಮುಂತಾದವು ಸೇರಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry