ಶನಿವಾರ, ಜೂನ್ 12, 2021
28 °C

ಕೆಯುಡಿ ಪರೀಕ್ಷಾ ಶುಲ್ಕ ಹೆಚ್ಚಳ: ವಿದ್ಯಾರ್ಥಿಗಳಿಂದ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಣೆಬೆನ್ನೂರು: ಕರ್ನಾಟಕ ವಿಶ್ವ ವಿದ್ಯಾಲಯದ ಕಾಲೇಜುಗಳ ಪರೀಕ್ಷಾ ಶುಲ್ಕವನ್ನು ಹೆಚ್ಚಿಸಿರುವುದನ್ನು ವಿರೋಧಿಸಿ ನಗರದಲ್ಲಿ ಎಬಿವಿಪಿ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿ, ಉಪತಹಶೀಲ್ದಾರರಾದ ವಿ.ಎಂ. ಹಿರೇಮಠ ಮತ್ತು ಎಸ್.ಕೆ. ಕಾಮಠೆ ಅವರಿಗೆ ಮನವಿ ಸಲ್ಲಿಸಿದರು.



ಸರ್ಕಾರ ವಿದ್ಯಾರ್ಥಿಗಳಿಂದ ₨ 565  ಶುಲ್ಕ ಕಟ್ಟಿಸಿಕೊಂಡು, ನಂತರ ಮರುಪಾವತಿ ಮಾಡುತ್ತೇವೆಂದು ಹಿಂದಿನ ವರ್ಷಗಳ ವಿದ್ಯಾರ್ಥಿಗಳಿಗೆ ಆಶ್ವಾಸನೆ ಕೊಟ್ಟಿತ್ತು. ಆದರೆ ಈ ವರೆಗೂ ಯಾವುದೇ ಹಣವನ್ನು ಕೊಡದೇ ಮೋಸ ಮಾಡಿದೆ,

ಹಾಗೆಯೇ ಈ ವರ್ಷ ಕೂಡ ಅದೇ ರಾಗ ಹಾಡುತ್ತಿದೆ ಎಂದು ವಿದ್ಯಾರ್ಥಿಗಳು ದೂರಿದರು.



ನಗರ ಕಾರ್ಯದರ್ಶಿ ದೇವೆಂದ್ರ ಮಾಕನೂರು ಮಾತನಾಡಿ, ₨ 565  ಕಟ್ಟಬೇಕಂತೆ, ನಂತರ ಮರು ಪಾವತಿ ಮಾಡುತ್ತದೆ ಎಂದು ತಿಳಿಸಿದ್ದಾರೆ, ಅಲ್ಲದೇ ಶುಲ್ಕ ತುಂಬಲು ಮಾ.14 ಕೊನೆಯ ದಿನಾಂಕವಾಗಿದ್ದು, ತಪ್ಪಿದರೆ ದಿನಕ್ಕೆ ನೂರು ರೂಪಾಯಿ ದಂಡ ಕಟ್ಟಬೇಕಾಗುತ್ತದೆ, ಇದು ಗಾಯದ ಮೇಲೆ ಬರೆ ಎಳೆದಂತಾಗುತ್ತದೆ ಎಂದು ಆರೋಪಿಸಿದರು.



ಸರ್ಕಾರ ಮೋಸ ಮಾಡುವುದನ್ನು ನಿಲ್ಲಿಸಬೇಕು, ಹಿಂದಿನ ವರ್ಷದ ಹಣ ಮರು ಪಾವತಿ ಮಾಡಬೇಕು, ದಂಡ ಹಾಕುವಂತಿಲ್ಲ, ಇದು ಮುಂದುವರೆದರೆ ಎಬಿಪಿವಿಪಿ ವತಿಯಿಂದ ಹೋರಾಟ  ವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.



ಮಮತಾ ಜಾಧವ, ಶ್ವೇತಾ ಗೌಡನಾಯಕರ, ವಿದ್ಯಾ ಅಡ್ಮನಿ, ಸಂಗೀತಾ ಎನ್‌, ಉಷಾ ಶಿಡಗನಾಳ, ಶಿವಕುಮಾರ ಓಲೇಕಾರ, ಹನುಮಂತ ಆರ್‌.ಆರ್‌, ಹೇಮಂತ, ಗಿರೀಶ ಜಾಧವ, ಲವಾ ತಾರಿಕೊಪ್ಪ, ಗಣೇಶ ಬಡಿಗೇರ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.