ಸೋಮವಾರ, ಮೇ 10, 2021
21 °C

ಕೆ-ಸೆಟ್ ಫಲಿತಾಂಶ: ಪುರುಷರ ಮೇಲುಗೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯ 2011ರ ಅಕ್ಟೋಬರ್‌ನಲ್ಲಿ ನಡೆಸಿದ ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (ಕೆ-ಸೆಟ್) ಫಲಿತಾಂಶ ಭಾನುವಾರ ಪ್ರಕಟಗೊಂಡಿದ್ದು, ಪುರುಷ ಅಭ್ಯರ್ಥಿ ಗಳು ಮೇಲುಗೈ ಸಾಧಿಸಿದ್ದಾರೆ.

ಒಟ್ಟು ಪರೀಕ್ಷಾರ್ಥಿಗಳ ಪೈಕಿ ಶೇ 64.96ರಷ್ಟು (1,194) ಪುರುಷ ಅಭ್ಯರ್ಥಿಗಳಿದ್ದರೆ, ಶೇ 35.04ರಷ್ಟು (644) ಮಹಿಳಾ ಅಭ್ಯರ್ಥಿಗಳು ಇದ್ದಾರೆ. ಆದರೆ, ಗಣಿತವಿಜ್ಞಾನ ವಿಷಯದಲ್ಲಿ ಒಟ್ಟು 1,038 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರೂ ಯಾರೊಬ್ಬರೂ ಉಪನ್ಯಾಸಕ ಹುದ್ದೆಗೆ ಅರ್ಹತೆ ಪಡೆದಿಲ್ಲ.ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ವಿವಿ ಕುಲಪತಿ ಪ್ರೊ.ವಿ.ಜಿ.ತಳವಾರ, `ಭೌತವಿಜ್ಞಾನ-1064, ಸಾಯನವಿಜ್ಞಾನ-1584, ಇಂಗ್ಲಿಷ್-1980, ಕನ್ನಡ-5949, ಗಣಕ ವಿಜ್ಞಾನ-1363, ಅರ್ಥಶಾಸ್ತ್ರ-3873, ಇತಿಹಾಸ-3991, ವಾಣಿಜ್ಯ-3628, ಜೀವ ವಿಜ್ಞಾನ-2576, ಶಿಕ್ಷಣ-1939, ಮ್ಯಾನೇಜ್‌ಮೆಂಟ್-1427, ಗ್ರಂಥಾಲಯ ವಿಜ್ಞಾನ-1106, ರಾಜ್ಯಶಾಸ್ತ್ರ-2964, ಭೂಗೋಳಶಾಸ್ತ್ರ-444, ಭೂವಿಜ್ಞಾನ-64, ಸಮಾಜ ಶಾಸ್ತ್ರ-2196, ಮನಶಾಸ್ತ್ರ- 331, ಸಮಾಜ ಕಾರ್ಯ- 1105, ಗೃಹವಿಜ್ಞಾನ-76, ಸಂಸ್ಕೃತ-164, ಹಿಂದಿ-671, ದೈಹಿಕ ಶಿಕ್ಷಣ-1023, ಪರಿಸರ ವಿಜ್ಞಾನ-124, ಉರ್ದು- 185 ಹಾಗೂ ತತ್ವಶಾಸ್ತ್ರದಲ್ಲಿ 38 ಸೇರಿದಂತೆ ಒಟ್ಟು 40,903 ಅಭ್ಯರ್ಥಿಗಳು ಪರೀಕ್ಷೆಗೆ ಹಾಜ ರಾಗಿದ್ದರು. ಈ ಪೈಕಿ 1,838 ಅಭ್ಯರ್ಥಿಗಳು ಉಪನ್ಯಾಸಕ ಹುದ್ದೆಗೆ ಅರ್ಹತೆ ಪಡೆದಿದ್ದಾರೆ~ ಎಂದು ತಿಳಿಸಿದರು.`ಪತ್ರಿಕೆ-1 ಮತ್ತು ಪತ್ರಿಕೆ-2ರಲ್ಲಿ ಉತ್ತೀರ್ಣ ರಾಗಿದ್ದರೆ ಮಾತ್ರ 3ನೇ ಪತ್ರಿಕೆಯನ್ನು ಮೌಲ್ಯಮಾಪನ ಮಾಡಲಾಗಿದೆ. ಮೊದಲೆರಡು ಪತ್ರಿಕೆಗಳು ವಸ್ತುನಿಷ್ಠವಾಗಿದ್ದು, ಮೂರನೇ ಪತ್ರಿಕೆ ವಿವರಣೆ ಯಿಂದ ಕೂಡಿತ್ತು.ಅಲ್ಲದೆ ಮೂರನೇ ಪತ್ರಿಕೆಯನ್ನು ಐದು ಭಾಗಗಳಾಗಿ ವಿಂಗಡಿಸಿ ಬೇರೆ ಬೇರೆ ಅಧ್ಯಾಪಕರಿಂದ ಮೌಲ್ಯಮಾಪನ ಮಾಡಿಸಲಾಗಿದೆ. ಆದರೆ, ಗಣಿತವಿಜ್ಞಾನ, ಭೌತವಿಜ್ಞಾನ, ರಸಾಯನ ವಿಜ್ಞಾನ, ಗ್ರಂಥಾಲಯ ವಿಜ್ಞಾನದಲ್ಲಿ ಅತ್ಯಂತ ಕಡಿಮೆ ಅಭ್ಯರ್ಥಿಗಳು ಅರ್ಹತೆ ಪಡೆದಿರುವುದು ಬೇಸರ ವನ್ನುಂಟು ಮಾಡಿದೆ~ ಎಂದರು.`ಆರು ವರ್ಷಗಳ ಹಿಂದೆ ಕುವೆಂಪು ವಿವಿ ಕೆ-ಸೆಟ್ ಪರೀಕ್ಷೆ ನಡೆಸಿದಾಗ ಸುಮಾರು 6 ಸಾವಿರ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಆ ಪೈಕಿ ಶೇ 2.5ರಷ್ಟು ಅಭ್ಯರ್ಥಿಗಳು ಉಪನ್ಯಾಸಕ ಹುದ್ದೆಗೆ ಅರ್ಹತೆ ಪಡೆದಿದ್ದರು. ಬೇರೆ ವಿಶ್ವವಿದ್ಯಾನಿಲಯಗಳಿಗೆ ಹೋಲಿಸಿದರೆ ನಮ್ಮ ಸಾಧನೆ ಕಡಿಮೆ ಏನಲ್ಲ.

 

ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ) ಹಾಗೂ ಪುಣೆ ವಿಶ್ವವಿದ್ಯಾನಿಲಯದ ತಜ್ಞರ ಸಮಿತಿ ಪರೀಕ್ಷಾ ಮೌಲ್ಯಮಾಪನ ಪ್ರಕ್ರಿಯೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿವೆ. ಮುಂದಿನ ಪರೀಕ್ಷೆಯಲ್ಲಿ ಮೂರನೇ ಪತ್ರಿಕೆಯನ್ನೂ ವಸ್ತುನಿಷ್ಠ ಮಾದರಿಯಲ್ಲಿ ನಡೆಸಬೇಕು ಎಂದು ತೀರ್ಮಾನಿ ಸಲಾಗಿದೆ~ ಎಂದು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಕುಲಸಚಿವ (ಪರೀಕ್ಷಾಂಗ) ಬಿ.ರಾಮು, ಕೆ-ಸೆಟ್ ಸಂಚಾಲಕ ಪ್ರೊ.ಸಿ. ಶ್ರೀಕಂಠಪ್ಪ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.