ಭಾನುವಾರ, ಮಾರ್ಚ್ 7, 2021
22 °C

ಕೇಂದ್ರದ ನೇರ ತೆರಿಗೆ ಪದ್ಧತಿ ಮಾರಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೇಂದ್ರದ ನೇರ ತೆರಿಗೆ ಪದ್ಧತಿ ಮಾರಕ

ಮಹಾಲಿಂಗಪುರ :`ಸಹಕಾರಿ ಸಂಘ, ಸಂಸ್ಥೆಗಳು ಗ್ರಾಮೀಣ ಮತ್ತು ಮಧ್ಯಮ ಜನರಿಗೆ ಆರ್ಥಿಕ ಸೌಲಭ್ಯವನ್ನು ಕಲ್ಪಿಸಿ, ಅವರ ಜೀವನ ಮಟ್ಟ ಸುಧಾರಿಸುವಲ್ಲಿ ಪ್ರಮುಖ ಪಾತ್ರವಹಿಸಿವೆ~ ಎಂದು ಶಾಸಕ ಮತ್ತು ಸರ್ಕಾರದ ಮುಖ್ಯ ಸಚೇತಕ ಸಿದ್ದು ಕೆ. ಸವದಿ ಹೇಳಿದರು.ಮಹಾಲಿಂಗಪುರದಲ್ಲಿ ಮೂಡಲ ಗಿಯ ಕುರುಹಿನಶೆಟ್ಟಿ ಅರ್ಬನ್ ಕೋ. ಆಪ್ ಕ್ರೆಡಿಟ್ ಸೊಸೈಟಿಯ ಮೂರನೇ ಶಾಖೆಯನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಹಕಾರಿ ರಂಗವು ಇಂದು ಆರ್ಥಿಕ ವಲಯದಲ್ಲಿ ಬೃಹತ್ ಶಕ್ತಿಯಾಗಿ ಬೆಳೆದಿದೆ. ಸಹಕಾರಿ ರಂಗದ ಬೆಳವಣಿಗೆಗೆ ಸರ್ಕಾರವು ಉದಾರ ನೀತಿಯನ್ನು ಅನುಷ್ಠಾನಗೊಳಿಸಬೇಕು. ಸದ್ಯ ಕೇಂದ್ರ ಸರ್ಕಾರವು ಸಹಕಾರಿ ಸಂಸ್ಥೆಗಳ ಮೇಲೆ ನೇರ ತೆರಿಗೆ ಪದ್ಧತಿ ಜಾರಿ ಮಾಡುವ ನೀತಿಯನ್ನು ಸವದಿ   ತೀವ್ರವಾಗಿ ಖಂಡಿಸಿದರು. ವಿಧಾನ ಪರಿಷತ್ ಮಾಜಿ ಸದಸ್ಯೆ, ಚಿತ್ರನಟಿ ಉಮಾಶ್ರೀ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಹಕಾರಿ ಸಂಸ್ಥೆಗಳನ್ನು ಕಟ್ಟುವುದು ಸುಲಭ, ಆದರೆ ಅವನ್ನು ಬೆಳೆಸುವುದು ಅಷ್ಟೇ ಕಷ್ಟಕರ. ನಿಸ್ವಾರ್ಥ,  ಪಕ್ಷಾತೀತ, ಜಾತಿ ಭೇದಗಳನ್ನು ಮಾಡದೆ ಒಗ್ಗಟ್ಟಿನಿಂದ ಶ್ರಮಿಸಿದರೆ ಮಾತ್ರ ಸಹಕಾರಿ ಸಂಸ್ಥೆಗಳು ಬೆಳೆಯುತ್ತವೆ ಎಂದರು. ಅಧ್ಯಕ್ಷತೆ ವಹಿಸಿದ್ದ ಸೊಸೈಟಿ ಅಧ್ಯಕ್ಷ ಸದಾಶಿವ ಶೀಲವಂತ ಮಾತನಾಡಿ ಸೊಸೈಟಿ ಬೆಳವಣಿಗೆಯಲ್ಲಿ ಜನರ ಸಹಕಾರವನ್ನು ಸ್ಮರಿಸಿದರು. ಮಹಾಲಿಂಗಪುರ ಟಿ.ಎಂ.ಸಿ. ಅಧ್ಯಕ್ಷ ಗುರುಲಿಂಗಪ್ಪ ಗೊಂಬಿ ಠೇವು ಪತ್ರ ವಿತರಿಸಿದರು.ಸಾನ್ನಿಧ್ಯ ವಹಿಸಿದ್ದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಮತ್ತು ಶ್ರೆಪಾದ ಬೋಧ ಸ್ವಾಮೀಜಿ ಆಶೀರ್ವಚನ ನೀಡಿದರು.ಮುಖ್ಯ ಅತಿಥಿಯಾಗಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಜಿ. ಢವಳೇಶ್ವರ, ಬಾಗಲಕೋಟೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಹಾದೇವಪ್ಪ ಹಟ್ಟಿ, ಮಾಜಿ ಶಾಸಕ ಎ.ವಿ. ಬೆಣ್ಣಿ, ವಿ.ಎನ್. ಗುಂಡಾ, ಬಿ.ಬಿ. ಹಂದಿಗುಂದ, ಮಲ್ಲಪ್ಪ ಮದಗುಣಕಿ, ಟಿ.ಬಿ. ಕೆಂಚರಡ್ಡಿ ಭಾಗವಹಿಸಿದ್ದರು.ಸೊಸೈಟಿ ಉಪಾಧ್ಯಕ್ಷ ಲಕ್ಕಪ್ಪ ಪೂಜೇರಿ, ಸದಸ್ಯರಾದ ಬಸವರಾಜ ಬೆಳಕೂಡ, ಬಿ.ಸಿ. ಮುಗಳಖೋಡ, ಇಸ್ಮಾಯಿಲ್ ಕಳ್ಳಿಮನಿ, ಮೋಹನ ಬೆಳಕೂಡ,ಶ್ರೀಕಾಂತ ಕೊಡತೆ, ಸುಭಾಸ ಬೆಳಕೂಡ, ಬಸವರಾಜ ಬಟಕುರ್ಕಿ, ಸುರೇಶ ಶಿರೋಳ, ಬಿ.ಡಿ. ವಜ್ರಮಟ್ಟಿ, ಸಿ.ಬಿ. ಪಟ್ಟಣಶೆಟ್ಟಿ  ಉಪಸ್ಥಿತರಿದ್ದರು.ನಿದೇಶಕ ಗೊಡಚೆಪ್ಪ ಮುರಗೋಡ ಸ್ವಾಗತಿಸಿದರು, ಪ್ರ.ಕಾರ್ಯದರ್ಶಿ ರಮೇಶ ಒಂಟಗೋಡಿ ವರದಿ ವಾಚಿಸಿದರು, ರಮೇಶ ಅಳಗುಂಡಿ ನಿರೂಪಿಸಿದರು, ಚಿದಾನಂದ ಮುಗಳಖೋಡ ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.