ಶುಕ್ರವಾರ, ಏಪ್ರಿಲ್ 16, 2021
25 °C

ಕೇಂದ್ರದ ಮಲತಾಯಿ ಧೋರಣೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೂನ್ ಕೊನೆಯ ವಾರದಲ್ಲಿ ಅಸ್ಸಾಂ ಪ್ರವಾಹಕ್ಕೆ ಸಿಲುಕಿತು. ಮಾರನೆಯ ದಿನವೇ ಪ್ರಧಾನಿ ಹಾಗೂ ಸೋನಿಯಾ ಅವರಿಂದ ವೈಮಾನಿಕ ಸಮೀಕ್ಷೆ, ಜುಲೈ 2 ರಂದೇ 500 ಕೋಟಿ ನೆರವಿನ ಪ್ರಕಟಣೆ. ಅಸ್ಸಾಂ ಜನ ಎಷ್ಟೊಂದು ಪುಣ್ಯವಂತರು!! ಮೂರು ವರ್ಷಗಳ ಹಿಂದೆ ಉತ್ತರ ಕರ್ನಾಟಕವನ್ನು ನಡುಗಿಸಿದ ನೆರೆ ಸಂತ್ರಸ್ತರಿಗೆ ಕೇಂದ್ರ ಯಾವಾಗ ಪರಿಹಾರ ನೀಡಿತ್ತು!? ಈ ವರ್ಷದ ಮೊದಲ 6 ತಿಂಗಳ ಕರ್ನಾಟಕದ ಬರಕ್ಕೆ ಕೇಂದ್ರ ಎಷ್ಟು ನೆರವು ನೀಡಿದೆ? ಕಳೆದ ಮೂರು ವರ್ಷಗಳಿಂದ ಕರ್ನಾಟಕ ಬರದಲ್ಲಿ ಬೆಂದಿದೆ! ನೆರೆಯಲ್ಲಿ ನಡುಗಿದೆ! ಕೇಂದ್ರ ಕರ್ನಾಟಕಕ್ಕೆ  ಆಗ ಸಕಾಲದಲ್ಲಿ ನೆರವಿಗೆ ಬಂತೆ!? 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.