ಸೋಮವಾರ, ಜೂನ್ 14, 2021
22 °C

ಕೇರಳ ಪತ್ರಿಕಾ ವಿತರಕರ ಮುಷ್ಕರ: ಐಎನ್‌ಎಸ್ ಖಂಡನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ):  ಕೇರಳದ ವೃತ್ತಪತ್ರಿಕಾ ವಿತರಕರ ಒಂದು ವರ್ಗ ನಿರ್ದಿಷ್ಟ ರಾಜಕೀಯ ಪಕ್ಷಗಳ ಆಶ್ರಯದಲ್ಲಿ ಮಂಗಳವಾರದಿಂದ (ಮಾ. 20) ರಾಜ್ಯದಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿರುವುದನ್ನು `ಐಎನ್‌ಎಸ್~ (ಭಾರತೀಯ ವೃತ್ತಪತ್ರಿಕಾ ಸಂಘ) ಖಂಡಿಸಿದೆ.`ಬಹುತೇಕ ಪತ್ರಿಕಾ ಏಜೆಂಟರುಗಳು ಈ ರೀತಿಯ ಮುಷ್ಕರಕ್ಕೆ ಸಹಮತ ವ್ಯಕ್ತಪಡಿಸಿಲ್ಲ. ಆದರೆ, ಅವರಲ್ಲಿ ಒಂದು ಬಣ ಅವರಿಗೆಲ್ಲ ಬೆದರಿಕೆ ಒಡ್ಡುತ್ತಿದೆ. ಭೀತಿ ಹುಟ್ಟಿಸುವ ಮೂಲಕ ಪತ್ರಿಕೆಗಳ ವಿತರಣೆಗೆ ಅಡ್ಡಿ ಮಾಡಲು ಯತ್ನಿಸುತ್ತಿದೆ.ಪತ್ರಿಕೆ ವಿತರಿಸುವವರು, ವಾಹನಗಳ ಮಾಲೀಕರು ಹಾಗೂ ಪತ್ರಿಕೆಗಳ ಸಾಗಣೆಯ ಕೆಲಸದಲ್ಲಿ ತೊಡಗಿಸಿಕೊಂಡ ಕಾರ್ಮಿಕರಿಗೂ ಬೆದರಿಕೆ ಒಡ್ಡುತ್ತಿದೆ~ ಎಂದು ಭಾರತೀಯ ವೃತ್ತಪತ್ರಿಕಾ ಸಂಘದ ಅಧ್ಯಕ್ಷ ಆಶೀಶ್ ಬಗ್ಗಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.