ಸರ್ಕಾರ ರಾಜ್ಯದ ಕೆಲವು ಜಿಲ್ಲೆಗಳನ್ನು ಬರಪೀಡಿತ ಎಂದು ಘೋಷಿಸಿರುವುದು ರೈತರ ಕಣ್ಣೊರೆಸುವ ತಂತ್ರದಂತೆ ಕಾಣುತ್ತಿದೆ. ವಿದ್ಯುತ್ ಕೊರತೆಯಿಂದ ಬೇಸತ್ತಿರುವ ರೈತರಿಗೆ ಈಗ ಬೆಸ್ಕಾಂ ಪಂಪ್ಸೆಟ್ಗಳನ್ನು ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳುವಂತೆ ಗಡುವು ನೀಡಿದೆ.

ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಲು 10 ರಿಂದ 15 ಸಾವಿರ ರೂ ನಿಗದಿ ಮಾಡಿ ಜನವರಿ 31ರ ಗಡುವು ನೀಡಿದೆ. ಫೆಬ್ರುವರಿ 1ರ ನಂತರ ನೋಂದಣಿ ಆಗದ ಪಂಪ್ಸೆಟ್ಗಳನ್ನು ರದ್ದು ಮಾಡುವಂತೆ ಆದೇಶ ನೀಡಿದೆ. ಇದರಿಂದ ರೈತರ ಹೊಟ್ಟೆ ಮೇಲೆ ಹೊಡೆದಂತಾಗಿದೆ. ಬರಗಾಲದಿಂದ ಬಸವಳಿದಿರುವ ರೈತರಿಗೆ ಬೆಸ್ಕಾಂ ಆದೇಶ ನುಂಗಲಾರದ ತುತ್ತಾಗಿದೆ.

ಇಂಧನ ಇಲಾಖೆ ಸಚಿವರು ಹಾಗೂ ಮುಖ್ಯಮಂತ್ರಿಗಳು ಈ ಆದೇಶವನ್ನು ಮರುಪರಿಶೀಲಿಸಿ ಉಚಿತವಾಗಿ ಪಂಪ್ಸೆಟ್ಗಳನ್ನು ನೋಂದಣಿ ಮಾಡಿಸಿಕೊಡುವ ವ್ಯವಸ್ಥೆ ಕಲ್ಪಿಸಿ ಅಸಹಾಯಕ ರೈತರಿಗೆ ನೆರವಾಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.