ನಂಜನಗೂಡು: ರಾಜ್ಯದಲ್ಲಿ ಸ್ಥಾಪನೆ ಯಾಗುವ ಎಲ್ಲ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಕಡ್ಡಾಯವಾಗಿ ಉದ್ಯೋಗ ನೀಡಲೇಬೇಕು. ಈ ನಿಟ್ಟಿನಲ್ಲಿ ಕೆಐಎಡಿಬಿ ಹಾಗೂ ಕೈಗಾರಿಕೆ ಇಲಾಖೆ ಅಧಿಕಾರಿಗಳು ನಿಗಾ ವಹಿಸುವಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೂಚಿಸಿದರು.

ನಂಜನಗೂಡು ತಾಲ್ಲೂಕು ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿ ಶುಕ್ರವಾರ ನಡೆದ `ಜೆಎಸ್ಎಸ್ ನೈಪುಣ್ಯತಾ ತರಬೇತಿ ಸಂಸ್ಥೆ~ಯ ಕಟ್ಟಡ, ಜಲ ತಂತ್ರಜ್ಞಾನ, ಆರೋಗ್ಯ ವಿಜ್ಞಾನಗಳ ಸಾಮಾನ್ಯ ಸೌಕರ್ಯ ಕೇಂದ್ರ, ಸಿದ್ಧ ಉಡುಪು ತರಬೇತಿ ಮತ್ತು ಉತ್ಪಾದನಾ ಕೇಂದ್ರ ಪ್ರಾರಂಭೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೈಗಾರಿಕೆಗಳ ಮಾಲೀಕರು ರೈತರ ಜಮೀನು ಖರೀದಿಗೂ ಮುನ್ನ ಗೋಗರೆಯುತ್ತಾರೆ. ಖರೀದಿ ನಂತರ ನಿರ್ಲಕ್ಷಿಸುತ್ತಾರೆ. ಕೆಐಎಡಿಬಿ ಅಧಿಕಾರಿ ಗಳು ಜಮೀನು ಒದಗಿಸುವುದು, ಕೈಗಾರಿಕೆ ಇಲಾಖೆಯವರು ಪರವಾನಗಿ ನೀಡುವುದಷ್ಟೇ ಅವರ ಕೆಲಸವಲ್ಲ. ಸ್ಥಳೀಯರಿಗೆ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ಒದಗಿಸಿದ್ದಾರ ಎಂಬ ಬಗ್ಗೆಯೂ ಗಮನ ಹರಿಸಬೇಕು. ಇಲ್ಲಿನ ನೆಲ, ಜಲ ಬಳಸಿಕೊಂಡು, ಕಟ್ಟಡ ಕಟ್ಟಲಿಕ್ಕೆ, ಮಣ್ಣು ಹೊರಲಿಕ್ಕೆ ಮಾತ್ರ ಸ್ಥಳೀಯರು ಬೇಕು, ಸಂಬಳ ಪಡೆವ ಉದ್ಯೋಗಕ್ಕೆ ಹೊರ ರಾಜ್ಯದವರು ಬೇಕು ಎನ್ನುವುದಾರೆ, ನಮ್ಮ ರೈತರು ಜಮೀನನ್ನು ಯಾತಕ್ಕೆ ಕಳೆದುಕೊಳ್ಳ ಬೇಕು ಎಂದು ಪ್ರಶ್ನಿಸಿದರು.

ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಜವಾಬ್ದಾರಿ ಸರ್ಕಾರದ್ದು. ಕುಡಿಯುವ ನೀರು ಹಾಗೂ ನೀರಾವರಿ ಉದ್ದೇಶದಿಂದ ಮೂರು ದಶಕದಲ್ಲಿ ಸಾಕಷ್ಟು ಕೊಳೆವೆ ಬಾವಿ ಕೊರೆದು ಅಂತರ್ಜಲವನ್ನು ಬರಿದು ಮಾಡಿದ್ದೇವೆ. ಆದರೆ, ತಮಿಳುನಾಡು ಜನರು ಕಾವೇರಿ ಮುಖಜ ಭೂಮಿ ವ್ಯಾಪ್ತಿಯಲ್ಲಿ ಕೊಳವೆ ಬಾವಿ ಕೊರೆಯದೆ ಕೇವಲ 10- 15 ಅಡಿಗೆ ನೀರು ಸಿಗುವಂತೆ ಅಂತರ್ಜಲ ವನ್ನು ಕಾಪಾಡಿ ಕೊಂಡಿದ್ದಾರೆ.

ನದಿ ನೀರಿನ ಮೂಲಕ ಶುದ್ಧ ಕುಡಿಯುವ ನೀರು ಒದಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಸಾಕಷ್ಟು ಹಣ ಖರ್ಚು ಮಾಡುತ್ತಿದೆ. ಅಶುದ್ಧ ನೀರು ಆರೋಗ್ಯದ ಮೇಲೆ ತೀವ್ರ ಪರಿಣಾಮ ಉಂಟುಮಾಡುತ್ತದೆ.

ಈ ನಿಟ್ಟಿನಲ್ಲಿ ಜಲ ತಂತ್ರಜ್ಞಾನ, ಆರೋಗ್ಯ ವಿಜ್ಞಾನ ಮತ್ತು ವಿವಿಧ ವೃತ್ತಿಗಳಲ್ಲಿ ಮಾನವ ನೈಪುಣ್ಯತೆ ಸಾಧಿಸಲು ಜೆಎಸ್ಎಸ್ ಸಂಸ್ಥೆ ಸರ್ಕಾರದ ಸಹಯೋಗ ದೊಂದಿಗೆ ಇಲ್ಲಿ ತರಬೇತಿ ಕೇಂದ್ರ ಸ್ಥಾಪಿಸಿರುವದು ಉತ್ತಮ ಬೆಳವಣಿಗೆ. ಇದಕ್ಕೆ ಫ್ರೆಂಚ್ ತಜ್ಞರ ನೆರವು ಪಡೆದಿರುವುದು ಶ್ಲಾಘನೀಯ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರಾಮದಾಸ್ ಮಾತನಾಡಿ, ವಿಶ್ವಸಂಸ್ಥೆ ಮುಂದಿನ ದಶಕವನ್ನು `ವಿಶ್ವ ಆರೋಗ್ಯ ದಶಕ~ ಎಂದು ಘೋಷಿಸಿದೆ. ಕಲುಷಿತ ನೀರು ಸೇವನೆಯಿಂದ ಮನುಷ್ಯನ ಆರೋಗ್ಯ ಕ್ಷೀಣಿಸುತ್ತಿದೆ. ಕೈಗಾರಿಕೆಗಳು ತ್ಯಾಜ್ಯ ನೀರನ್ನು ಶುದ್ಧೀಕರಿಸದೆ ನೇರವಾಗಿ ನದಿಗೆ, ಚರಂಡಿಗೆ ಬಿಡದಂತೆ ಎಚ್ಚರ ವಹಿಸ ಬೇಕು. ಆರೋಗ್ಯ ವ್ಯಕ್ತಿ ದೇಶಕ್ಕೆ ಆಸ್ತಿ. ಅನಾರೋಗ್ಯ ವ್ಯಕ್ತಿ ದೇಶಕ್ಕೆ ಹೊರೆ. ಈ ನಿಟ್ಟಿನಲ್ಲಿ ಶುದ್ಧ ನೀರು ಒದಗಿಸಲು ಸರ್ಕಾರ ಹಲವು ಯೋಜಗಳನ್ನು ಜಾರಿಗೆ ತಂದಿದೆ ಎಂದರು.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ಜೆಎಸ್ಎಸ್ ವಿಶ್ವ ವಿದ್ಯಾನಿಲಯದ ಕುಲಪತಿ ಬಿ.ಸುರೇಶ್, ಕರ್ನಾಟಕ ಮೂಲದ ಫ್ರೆಂಚ್ ನಿವಾಸಿ ಚಂದ್ರಿಕಾ ಕಸಲಿ, ಜೆನ್ನಿಫರ್ ಕ್ಲಾರ್ಕ್, ಎರಿಕ್ ಲಾವೆರ್ಟು, ಕೈಗಾರಿಕಾ ಇಲಾಖೆ ಯ ಅಜೀಜ್ ಮಾತನಾಡಿದರು.

ಪ್ರೊ.ಎಂ.ಎಚ್.ಧನಂಜಯ, ಜಿಲ್ಲಾ ಪಂಚಾಯಿತಿ ಸದಸ್ಯೆ ರೇವಮ್ಮ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮಲ್ಲಿಕಾರ್ಜುನಸ್ವಾಮಿ, ಸದಸ್ಯರಾದ ಶ್ರೀಕಂಠ, ಆರ್.ಗೋವಿಂದರಾಜು ಇದ್ದರು. ಬಿ.ಆರ್.ಉಮಾಕಾಂತ್ ಸ್ವಾಗತಿಸಿದರು. ಎನ್.ಶೇಖರ್ ನಿರೂಪಿಸಿದರು. ಡಾ.ಶೈಲೇಂದ್ರ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.