ಪಣಜಿ (ಪಿಟಿಐ): ಉತ್ತಮ ಲಯದಲ್ಲಿರುವ ಗ್ರ್ಯಾಂಡ್ಮಾಸ್ಟರ್ ಅರ್ಜುನ್ ಇರಿಗೇಶಿ ಅವರು ಶುಕ್ರವಾರ ವಿಶ್ವಕಪ್ ಚೆಸ್ ಟೂರ್ನಿಯ ಮೂರನೇ ಸುತ್ತಿನ ಪಂದ್ಯದ ಮೊದಲ ಕ್ಲಾಸಿಕಲ್ ಆಟದಲ್ಲಿ ಉಜ್ಬೇಕಿಸ್ತಾನದ ಶಂಸಿದ್ದೀನ್ ವೊಖಿಡೋವ್ ಅವರನ್ನು ಸೋಲಿಸಿ ಉತ್ತಮ ಆರಂಭ ಪಡೆದರು.

ಶನಿವಾರ ಮರು ಕ್ಲಾಸಿಕಲ್ ಆಟ ನಡೆಯಲಿದೆ. ವಿಶ್ವ ಚಾಂಪಿಯನ್ ಹಾಗೂ ಅಗ್ರ ಶ್ರೇಯಾಂಕದ ಡಿ.ಗುಕೇಶ್ ಅವರು ಮೊದಲ ಕ್ಲಾಸಿಕಲ್ ಆಟವನ್ನು ಜರ್ಮನಿಯ ಫ್ರೆಡರಿಕ್ ಸ್ವೇನ್ ಜೊತೆ ಡ್ರಾ ಮಾಡಿಕೊಂಡರು. ಕಪ್ಪು ಕಾಯಿಗಳನ್ನು ನಡೆಸಿದ ಮೂರನೇ ಶ್ರೇಯಾಂಕದ ಪ್ರಜ್ಞಾನಂದ ಸಹ ಅರ್ಮೇನಿಯಾದ ರಾಬರ್ಟ್ ಹೊವನೀಸಿಯನ್ ಜೊತೆ ಪಾಯಿಂಟ್ ಹಂಚಿಕೊಳ್ಳಬೇಕಾಯಿತು.

ಇರಿಗೇಶಿ ಅವರಂತೆ ಅನುಭವಿ ಆಟಗಾರ ಪೆಂಟಾಲ ಹರಿಕೃಷ್ಣ, ವಿಶ್ವ ಜೂನಿಯರ್ ಚಾಂಪಿಯನ್ ವಿ.ಪ್ರಣವ್ ಅವರೂ ಸಹ ಮುನ್ನಡೆ ಪಡೆದರು. ಹರಿಕೃಷ್ಣ ಅವರು ಬೆಲ್ಜಿಯಂನ ಗ್ರ್ಯಾಂಡ್ಮಾಸ್ಟರ್ ಡೇನಿಯಲ್ ದರ್ಧಾ ಅವರ ವಿರುದ್ಧ ಜಯಗಳಿಸಿ 1–0 ಮುನ್ನಡೆ ಪಡೆದರು. ಶನಿವಾರ ಎರಡನೇ ಆಟ ಡ್ರಾ ಮಾಡಿಕೊಂಡರೂ ಅವರು ನಾಲ್ಕನೇ ಸುತ್ತಿಗೆ ಮುನ್ನಡೆಯಬಹುದಾಗಿದೆ.

ಪ್ರಣವ್ ಮೊದಲ ಕ್ಲಾಸಿಕಲ್ ಆಟದಲ್ಲಿ ಲಿಥುನೇನಿಯಾದ ಸ್ಟ್ರೆಮವೀಸಿಯಸ್ ತಿತಾಸ್ ಅವರನ್ನು ಸೋಲಿಸಿ ಗಮನಸೆಳೆದರು.

ಗ್ರ್ಯಾಂಡ್ಮಾಸ್ಟರ್ ವಿದಿತ್ ಗುಜರಾತಿ ಅವರು ಅಮೆರಿಕದ ಸ್ಯಾಮ್ ಶಂಕ್ಲಾಂಡ್ ಜೊತೆ ಡ್ರಾ ಮಾಡಿಕೊಳ್ಳುವ ಮೂಲಕ ಮೂರನೇ ಸುತ್ತನ್ನು ಆರಂಭಿಸಿದರು.

ಮೆಕ್ಸಿಕೊದ ಮಾರ್ಟಿನೆಝ್ ಅಲ್ಕಂತರ ಜೋಸ್ ಎಡ್ವರ್ಡೊ ಅವರು ಇನ್ನೊಂದು ಪಂದ್ಯದಲ್ಲಿ ಅನುಭವಿ ಜಿಎಂ ನದಿರ್ಬೆಕ್ ಅಬ್ದುಸತ್ತಾರೋವ್ (ಉಜ್ಬೇಕಿಸ್ತಾನ) ವಿರುದ್ಧ ಮೊದಲ ಆಟ ಗೆದ್ದು ಮುನ್ನಡೆ ಸಾಧಿಸಿದರು.

ಮತ್ತೊಬ್ಬ ಅನುಭವಿ ಆಟಗಾರ ಫ್ರಾನ್ಸ್ನ ಮ್ಯಾಕ್ಸಿಂ ವೇಷಿಯರ್ ಲಗ್ರಾವ್ ಅವರು ಫಿಡೆ ಪ್ರತಿನಿಧಿಸುತ್ತಿರುವ ವ್ಲಾಡಿಸ್ಲಾವ್ ಆರ್ಟೆಮೀವ್ ಜೊತೆ ಪಾಯಿಂಟ್ ಹಂಚಿಕೊಳ್ಳಬೇಕಾಯಿತು.

ವಿಯೆಟ್ನಾಮ್ನ ಲೀ ಕ್ವಾಂಗ್ ಲೀಮ್, ಇರಾನ್ನ ಇದಾನಿ ಪೌಯಾ, ಅರ್ಮೇನಿಯಾದ ಶಾಂತ್ ಸೆರ್ಗೆಸಿಯನ್ ಅವರು ತಮ್ಮ ಎದುರಾಳಿಗಳ ವಿರುದ್ಧ ಜಯಗಳಿಸಿ ಮುನ್ನಡೆ ಸಾಧಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.