ಕಾರವಾರ: ತಾಲ್ಲೂಕಿನ ಕೈಗಾದಲ್ಲಿರುವ ಪರಮಾಣು ವಿದ್ಯುತ್ ಸ್ಥಾವರದ 4ನೇ ಘಟಕದಲ್ಲಿ ಶೇ.50ರಷ್ಟು ವಿದ್ಯುತ್ ಉತ್ಪಾದನೆ ಬುಧವಾರ ಮಧ್ಯಾಹ್ನದಿಂದ ಆರಂಭಗೊಂಡಿದೆ ಎಂದು ಕೈಗಾ ಘಟಕದ ಸ್ಥಾನಿಕ ನಿರ್ದೇಶಕ ಜೆ.ಪಿ.ಗುಪ್ತ ತಿಳಿಸಿದ್ದಾರೆ.

ವಿದ್ಯುತ್ ಉತ್ಪಾದನೆಗೆ ಅಣು ವಿದಳನವನ್ನು ರಿಯಾಕ್ಟರ್ಗಳಲ್ಲಿ ಸಮಾನಾಂತರ ಹಾಗೂ ಸುಸ್ಥಿರಗೊಳಿಸುವ ಕ್ರಿಟಿಕ್ಯಾಲಿಟಿ ಪ್ರಕ್ರಿಯೆಯನ್ನು ನ.27ರಂದು ಯಶಸ್ವಿಯಾಗಿ ಪೂರ್ತಿಗೊಳಿಸಿರುವ ನಾಲ್ಕನೇ ಘಟಕ ಮಧ್ಯಾಹ್ನ 1.56 ಗಂಟೆಗೆ ವಿದ್ಯುತ್ ಉತ್ಪಾದನೆಯನ್ನು ಆರಂಭಿಸಿದೆ ಎಂದು ಅವರು ತಿಳಿಸಿದ್ದಾರೆ.

220 ಮೆಗಾವಾಟ್ ಸಾಮರ್ಥ್ಯದ ಈ ಘಟಕದಿಂದ ಉತ್ಪಾದನೆಯಾದ ವಿದ್ಯುತ್ ದಕ್ಷಿಣದ ಕೇಂದ್ರೀಯ ವಿದ್ಯುತ್ ಜಾಲಕ್ಕೆ ಪೂರೈಕೆ ಆಗಲಿದೆ. ಈ ಘಟಕದಿಂದ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ಮತ್ತು ಪಾಂಡಿಚೇರಿಗೆ ವಿದ್ಯುತ್ ಪೂರೈಕೆ ಆಗಲಿದೆ. ಈ ನಾಲ್ಕನೇ ಘಟಕದ ವಿದ್ಯುತ್ ಉತ್ಪಾದನೆಯಿಂದಾಗಿ ಭಾರತವು ಅಣುವಿದ್ಯುತ್ ಉತ್ಪಾದನೆಯಲ್ಲಿ 6ನೇ ದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.