ಕಂಪ್ಲಿ: ಸರ್ಕಾರ ವಿತರಿಸಿದ ಆಶ್ರಯ ಯೋಜನೆ ನಿವೇಶನ ಹಕ್ಕುಪತ್ರ (ಪಟ್ಟಾ) ಪ್ರತಿಯನ್ನು ಈ ಪರಿಶಿಷ್ಟರು ನಿತ್ಯ ಪೂಜಿಸುತ್ತಿದ್ದಾರೆ. ಇಂದಲ್ಲ ನಾಳೆ ಆ ಸರ್ವೆ ಸಂಖ್ಯೆಯಲ್ಲಿ ವಿನ್ಯಾಸ ರೂಪಿಸಿ ನಿವೇಶನ ನಮ್ಮ ಸುಪರ್ದಿಗೆ ವಹಿಸುತ್ತಾರೆ. ಆಗ ಅಲ್ಲೊಂದು ಶಾಶ್ವತ ಸೂರು ನಿರ್ಮಿಸಿಕೊಂಡು ಜೀವನ ಕಟ್ಟಿಕೊಳ್ಳೋಣ ಎಂದು 18 ವರ್ಷಗಳಿಂದ ಕಾಯುತ್ತಿದ್ದಾರೆ.

ಈ ರೀತಿ ನಿವೇಶನಕ್ಕಾಗಿ ಎದುರು ನೋಡುತ್ತಾ ಮೌನಕ್ಕೆ ಶರಣಗಾದೆ ಹೋರಾಟ ನಡೆಸುತ್ತಲೆ ಇದ್ದಾರೆ ಇಲ್ಲಿಯ ಪುರಸಭೆಯ 23ನೇ ವಾರ್ಡ್ ವ್ಯಾಪ್ತಿಯ ಹುಲಿಗೆಮ್ಮ ಕ್ಯಾಂಪ್ನ ಪರಿಶಿಷ್ಟ ಜಾತಿ(ಆದಿ ಕರ್ನಾಟಕ) ಕೃಷಿಕೂಲಿ ಕುಟುಂಬಗಳು.

ಆದರೆ, ಇಂದಿಗೂ ಅವರಿಗೆ ಅಧಿಕೃತ ನಿವೇಶನ ಗುರುತಿಸದೇ ಇರುವುದರಿಂದ ಇಲ್ಲಿಯ ಸಕ್ಕರೆ ಕಾರ್ಖಾನೆಗೆ ಸೇರಿದ ಪ್ರದೇಶದಲ್ಲಿ ಗುಡಿಸಲು ಹಾಕಿಕೊಂಡು ಜೀವಭಯದಲ್ಲಿ ದಿನಗಳನ್ನು ದೂಡುತ್ತಿದ್ದಾರೆ.

ಸುಮಾರು 200 ಕುಟುಂಬಗಳು ವಾಸಿಸುವ ಈ ಪ್ರದೇಶದಲ್ಲಿ ದಟ್ಟವಾಗಿ ಬೇಲಿ ಬೆಳೆದಿದ್ದು, ಸದಾ ವಿಷಜಂತುಗಳ ಸಂಚರಿಸುತ್ತಲೇ ಇರುತ್ತವೆ. ಮಳೆ ಬಂದರೆ ಇಡೀ ಕ್ಯಾಂಪ್ ರಸ್ತೆಗಳು ಕೆಸರುಗದ್ದೆಗಳಂತಾಗಿ ಓಡಾಡದಂತಹ ಪರಿಸ್ಥಿತಿ. ಬೀದಿದೀಪ, ಕುಡಿಯುವ ನೀರು, ಚರಂಡಿ ಸೇರಿದಂತೆ ಮೂಲ ಸೌಕರ್ಯಗಳು ದಶಕಗಳಿಂದ ಮರೀಚಿಕೆಯಾಗಿವೆ.

ಮಹಿಳೆಯರು ಸೂರ್ಯೋದಯ ಮತ್ತು ಸೂರ್ಯಾಸ್ತದ ನಂತರ ಬಹಿರ್ದೆಸೆಗಾಗಿ ಸುತ್ತಲಿನ ಮುಳ್ಳುಪೊದೆಯನ್ನು ಆಶ್ರಯಿಸಿಬೇಕಾದ ಅನಿವಾರ್ಯತೆ ಇದೆ. ಈ ಕುರಿತು ಕ್ಯಾಂಪ್ನ ಬಹುತೇಕ ಮಹಿಳೆಯರು ಮನನೊಂದು ತಿಳಿಸುತ್ತಾರೆ.

ತಹಶೀಲ್ದಾರರು 1998ರಲ್ಲಿ ಹುಲಿಗೆಮ್ಮ ಕ್ಯಾಂಪ್ನ 54 ಫಲಾನುಭವಿಗಳಿಗೆ, ಪುರಸಭೆ ಮುಖ್ಯಾಧಿಕಾರಿಗಳು 28 ಫಲಾನುಭವಿಗಳಿಗೆ ಆಶ್ರಯ ಯೋಜನೆ ನಿವೇಶನ ಪಟ್ಟಾ ವಿತರಿಸಿದ್ದಾರೆ. ಆದರೆ ನಿವೇಶನ ಎಲ್ಲಿದೆ ಎಂದು ತೋರಿಸುವಲ್ಲಿ ವಿಫಲರಾಗಿದ್ದಾರೆ.

ಈ ಕಾರಣದಿಂದ ಗೃಹ, ನ್ಯಾಯ ಮತ್ತು ಮಾನವ ಹಕ್ಕುಗಳ ಹಾಗೂ ಸಂಸದೀಯ ವ್ಯವಹಾರಗಳ ಆಪ್ತ ಕಾರ್ಯದರ್ಶಿಗಳಿಗೆ ಮಾರ್ಚ್ 21, 2007ರಲ್ಲಿ ನಿವೇಶನ ವಿತರಿಸುವಂತೆ ಆಗ್ರಹಿಸಿ ದಾಖಲೆ ಸಹಿತ ಪತ್ರ ಬರೆದಿದ್ದಾರೆ. ಅಂದಿನ ಪ್ರವಾಸೋದ್ಯಮ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವರಾಗಿದ್ದ ಬಿ. ಶ್ರೀರಾಮುಲು ಅವರು ಕೂಡಲೇ ನಿವೇಶನ ವಿತರಿಸಲು ಕ್ರಮ ತೆಗೆದುಕೊಳ್ಳುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.

ಇದಾದ ನಂತರ ಜಿಲ್ಲಾಧಿಕಾರಿಗಳು ಪುರಸಭೆ ಆಡಳಿತಕ್ಕೆ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ. ಆದರೂ ನಿವೇಶನ ಕುರಿತಂತೆ ಪ್ರತಿಕ್ರಿಯೆ ದೊರೆಯದ ಕಾರಣ ಅಕ್ಟೋಬರ್ 6, 2015ರಂದು

ನಿವೇಶನಕ್ಕಾಗಿ ಆಗ್ರಹಿಸಿ ಪುರಸಭೆ ಮುಖ್ಯಾಧಿಕಾರಿಗಳಿಗೆ ಫಲಾನುಭವಿಗಳೂ ಮನವಿ ಪತ್ರ ಸಲ್ಲಿಸಿದ್ದರು. ಇಷ್ಟಾದರೂ ಇಲ್ಲಿಯವರೆಗೆ ಪಟ್ಟಾದಾರರಿಗೆ ನಿವೇಶನ ವಿತರಿಸದೆ ನಿರ್ಲಕ್ಷ್ಯವಹಿಸಲಾಗಿದೆ. ಇದಾದ ನಂತರ ಪುರಸಭೆ ಅಧಿಕಾರಿಗಳು ಹುಲಿಗೆಮ್ಮಕ್ಯಾಂಪ್ನಲ್ಲಿ 76 ಕುಟುಂಬಗಳು ನಿವೇಶನರಹಿತರಿದ್ದಾರೆ ಎಂದು ಪಟ್ಟಿ ಸಿದ್ಧಪಡಿಸಿ ಕೈತೊಳೆದುಕೊಂಡಿದ್ದಾರೆ ಎಂದು ಅಲ್ಲಿನ ನಿವಾಸಿಗಳು ದೂರಿದರು.

ಕಳೆದ 50 ವರ್ಷಗಳಿಂದ ವಾಸಿಸುತ್ತಿರುವ ಹುಲಿಗೆಮ್ಮಕ್ಯಾಂಪ್ನ 200 ಕುಟುಂಬಗಳಿಗೆ ನಿವೇಶನ ವಿತರಿಸಲೆಂದೇ ಚಿಕ್ಕಜಾಯಿಗನೂರು ರಸ್ತೆಯಲ್ಲಿ 8.26 ಎಕರೆ ಭೂಮಿಯನ್ನು ಆಶ್ರಯ ಯೋಜನೆಯಡಿ ಪುರಸಭೆ ಖರೀದಿಸಿತು. ಸರ್ವೆ ನಂಬರ್ 1426ಸಿ/2ರಲ್ಲಿ 5ಎಕರೆ ಪ್ರದೇಶದಲ್ಲಿ 201ನಿವೇಶನಗಳನ್ನು ಮತ್ತು 1425ಬಿ/3ರಲ್ಲಿ 3.26 ಎಕರೆ ಪ್ರದೇಶದಲ್ಲಿ 126 ನಿವೇಶನ ಸೇರಿ 6ಮೀ ಅಗಲ 9ಮೀಟರ್ ಉದ್ದದ ಒಟ್ಟು 327 ನಿವೇಶನಗಳನ್ನು ವಿನ್ಯಾಸಗೊಳಿಸಲಾಯಿತು.

ಆದರೆ ಈ ನಿವೇಶನಗಳನ್ನು ಕೆಲ ತಿಂಗಳ ಹಿಂದೆ ಸ್ಥಳೀಯ ಸೋಮಪ್ಪ ಕೆರೆಯಿಂದ ತೆರವಾದ 234 ಕುಟುಂಬಗಳಿಗೆ ವಿತರಿಸಿ ಮೂಲ ಫಲಾನುಭವಿಗಳಾದ ನಮಗೆ ವಂಚಿಸಲಾಯಿತು ಎಂದು ಹುಲಿಗೆಮ್ಮಕ್ಯಾಂಪ್ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.
-ಪಂಡಿತಾರಾಧ್ಯ ಎಚ್.ಎಂ. ಮೆಟ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.