ಶುಕ್ರವಾರ, ಫೆಬ್ರವರಿ 26, 2021
19 °C

ಕೈನೋಡು ಕಾವಲು: ಕರಡಿ ಶವ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೈನೋಡು ಕಾವಲು: ಕರಡಿ ಶವ ಪತ್ತೆ

ಹೊಸದುರ್ಗ: ತಾಲ್ಲೂಕಿನ ಕೈನೋಡು ಕಾವಲಿನ ಎಸ್‌.ನೇರಲಕೆರೆ ಸಮೀಪ ಕರಡಿಯೊಂದು ಮೃತಪಟ್ಟಿರುವುದು ಸೋಮವಾರ ಬೆಳಕಿಗೆ ಬಂದಿದೆ.

ಎಸ್‌.ನೇರಲಕೆರೆ ಗ್ರಾಮಸ್ಥರೊಬ್ಬರು ಬೆಳಿಗ್ಗೆ ಕೃಷಿ ಕೆಲಸಕ್ಕೆ ತೋಟಕ್ಕೆ ಹೋಗುವಾಗ ಕರಡಿ ಶವ ನೋಡಿ, ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಬಳಿಕ ತಾಲ್ಲೂಕು ವಲಯ ಅರಣ್ಯ ಅಧಿಕಾರಿ ಡಿ.ಭರತ್‌, ಸಿಬ್ಬಂದಿಯೊಡನೆ ಸ್ಥಳ ಧಾವಿಸಿದರು.ಕರಡಿಯ ದೇಹವನ್ನು ಪಟ್ಟಣದ ಅರಣ್ಯ ಇಲಾಖೆ ಕಚೇರಿಗೆ ತಂದು ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಕರಡಿ ಶರೀರದಲ್ಲಿ ಗಾಯಗಳಾಗಿರಲಿಲ್ಲ. ಸುಮಾರು 12 ವರ್ಷ ವಯಸ್ಸು ಆಗಿದ್ದು, ಇದು ಸಹಜ ಸಾವು ಎಂದು ಪಶು ವೈದ್ಯರು ವರದಿ ನೀಡಿರುವುದಾಗಿ ಅರಣ್ಯ ಅಧಿಕಾರಿ ಡಿ.ಭರತ್‌ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.