ಮಡಿಕೇರಿ: ಕೊಡವ ಭಾಷೆ ಮತ್ತು ಸಂಸ್ಕೃತಿ ಜಗತ್ತಿನಲ್ಲೇ ಅತ್ಯಂತ ವಿಶಿಷ್ಟ ವಾಗಿದ್ದು, ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲಾ ಕೊಡವರದ್ದಾಗಿದೆ ಎಂದು ಹಿರಿಯ ಜಾನಪದ ತಜ್ಞ, ಸಾಹಿತಿ ಬಾಚರಣಿಯಂಡ ಪಿ.ಅಪ್ಪಣ್ಣ ಅಭಿಪ್ರಾಯ ಪಟ್ಟರು.

ಅಮ್ಮತ್ತಿ ಕೊಡವ ಸಮಾಜದಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಗುರುವಾರ ನಡೆದ ಕೊಡವ ಸಾಹಿತ್ಯ ಸಾಂಸ್ಕೃತಿಕ ಸಂಗಮ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.

ಆಂಗ್ಲ ಇತಿಹಾಸಕಾರಲ್ಲೊಬ್ಬರು ಕೊಡವ ಭಾಷೆ ಪಂಚದ್ರಾವಿಡ ಭಾಷೆಗಳ ಮೂಲ ಭಾಷೆ ಎಂದು ಅಭಿ ಪ್ರಾಯ ವ್ಯಕ್ತಪಡಿಸಿದ್ದು, ಅಷ್ಟೊಂದು ಸುದೀರ್ಘ ಇತಿಹಾಸ ಮತ್ತು ಸಂಸ್ಕೃತಿ ಈ ಕೂಡಿ ಮಲೆ ನಾಡಿ ಕೊಡವ ಭಾಕರದ್ದಾಗಿದೆ ಎಂದು ಹೇಳಿದರು.

ಕೊಡವ ಸಂಸ್ಕೃತಿ `ಅಂದು- ಇಂದು~ ವಿಷಯ ಕುರಿತು ವಿಚಾರ ಮಂಡನೆ ಮಾಡಿದ ಎಪಿಎಂಸಿ ಮಾಜಿ ಅಧ್ಯಕ್ಷ ಮೂಕೊಂಡ ಬೋಸ್ದೇವಯ್ಯ ಕೊಡ ವರ ಬಗೆಗಿನ ಪುರಾಣದಲ್ಲಿನ ಉಲ್ಲೇಖ ಗಳು, ಇತಿಹಾಸ ಹಾಗೂ ಇಂದಿನ ಸ್ಥಿತಿಗತಿಗಳ ಬಗ್ಗೆ ವಿವರಿಸಿದರು.

ಕೊಡವ ಜನಾಂಗದಲ್ಲಿ ಗಂಡು, ಹೆಣ್ಣು ಮಕ್ಕಳ ಜನನವಾದಾಗ ಅನು ಸರಿಸುವ ಪದ್ಧತಿ, ಪ್ರಕೃತಿ ಆರಾಧನೆ ಹಿನ್ನೆಲೆ. ಆ ನಂತರ ಕೊಡವರ ಮೇಲಾ ಗಿರುವ ಇತರ ಸಂಸ್ಕೃತಿಗಳ ಪ್ರಭಾವ ಹಾಗೂ ಪುರಾತನ ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗಲು ಅನು ಸರಿಸಬೇಕಾದ ಕ್ರಮಗಳು ಮತ್ತು ಅದರ ಅನಿವಾರ್ಯತೆ ಬಗ್ಗೆ ವಿವರಿಸಿದರು.

ಅಮ್ಮತ್ತಿ ಕೊಡವ ಸಮಾಜದ ಅಧ್ಯಕ್ಷ ಕುಟ್ಟಂಡ ವಿನು ಪೂವಯ್ಯ ಮಾತನಾಡಿ ಕೊಡಗಿನಲ್ಲಿ ಜ್ವಲಂತ ಸಮಸ್ಯೆಗಳು ಸಾಕಷ್ಟಿವೆ. ಪಾಶ್ಚಿಮಾತ್ಯ ಸಂಸ್ಕೃತಿಯ ಅಪ್ಪುಗೆಯ ಅಪಾಯದ ಎಚ್ಚರಿಕೆಯು ನಮ್ಮ ಮುಂದಿದೆ. ನಮ್ಮ ಸಂಸ್ಕೃತಿ ಬಿಟ್ಟರೆ ಜನಾಂಗ ಉಳಿಯು ವುದಿಲ್ಲ. ಇದನ್ನು ಎಲ್ಲಾ ಭಾಕ ಜನಾಂಗ ದವರು ಅರ್ಥಮಾಡಿಕೊಂಡು ಭಾಷೆ, ಸಂಸ್ಕೃತಿಯ ಏಳಿಗೆಗೆ ಶ್ರಮಿಸಿ ಎಂದು ಕರೆ ನೀಡಿದರು.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ವಿನೋದ್ಚಂದ್ರ ಮಾತನಾಡಿ ಕೊಡವ ಭಾಷೆ ಸಂಸ್ಕೃತಿಯ ಏಳಿಗೆಗೆ ಅಕಾಡೆಮಿ ಹಮ್ಮಿ ಕೊಂಡಿರುವ ಯೋಜನೆಗಳ ಬಗ್ಗೆ ವಿವರಿಸಿದರು. ಮಂಗಳೂರು ವಿಶ್ವ ವಿದ್ಯಾಲಯದ ಕೊಡವ ಅಧ್ಯಯನ ಪೀಠಕ್ಕೆ ಅಕಾಡೆಮಿ ವತಿಯಿಂದ 5 ಲಕ್ಷ ರೂಪಾಯಿ ಧನ ಸಹಾಯ ನೀಡ ಲಾಗಿದೆ. ಸರ್ಕಾರ ಮತ್ತು ಕೊಡವ ಸಾಹಿತ್ಯ ಅಕಾಡೆಮಿ ಎಷ್ಟೇ ಶ್ರಮಿಸಿ ದರೂ, ಭಾಷೆ ಮತ್ತು ಸಂಸ್ಕೃತಿಯ ಉಳಿವು ನಮ್ಮೆಲ್ಲರ ಬಳಕೆ ಮತ್ತು ಆಚರಣೆಯಿಂದ ಮಾತ್ರ ಸಾಧ್ಯ ಎಂದರು.

ಕರ್ನಾಟ ಕೊಡವ ಸಾಹಿತ್ಯ ಅಕಾ ಡೆಮಿಯ ಅಧ್ಯಕ್ಷರಾದ ಐಮುಡಿಯಂಡ ರಾಣಿ ಮಾಚಯ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಕಾಡೆಮಿಯ ಸದಸ್ಯ ರಾದ ಸಬಿತಾ ಕಾರ್ಯಪ್ಪ ಪ್ರಾರ್ಥಿಸಿ ದರು. ಗೀತಾ ಮಂದಣ್ಣ ಸ್ವಾಗತಿಸಿದರು. ಕವನ್ ಕಾರ್ಯಪ್ಪ ಮತ್ತು ಪ್ರಭು ಕುಮಾರ್ ನಿರೂಪಿಸಿದರು. ಬೀನಂಡ ಪೂಣಚ್ಚ ಅವರು ವಂದಿಸಿದರು.

ಇದೇ ವೇಳೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಬೊ ಕಾಟ್, ಕತ್ತಿಯಾಟ್, ಕೋಲಾಟ್, ಉಮ್ಮತ್ತಾಟ್, ಪೊರಪಾಡ್ ರಸಪ್ರಶ್ನೆ ಸ್ಪರ್ಧೆಗಳು ನಡೆದವು. ಅಲ್ಲದೆ ಕೊಡವ ಹಾಗೂ ಕನ್ನಡ ಜಾನಪದ ಕಲೆಗಳ ಪ್ರದರ್ಶನವೂ ನಡೆಯಿತು.

ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಕಳ್ಳಿರ ಕಾಂತಿ ಬೆಳ್ಯಪ್ಪ, ಕಾಫಿ ಬೆಳೆಗಾರರಾದ ನೆಲ್ಲಮಕ್ಕಡ ಎ. ಸೋಮಯ್ಯ, ಅಮ್ಮತ್ತಿ ಗ್ರಾ.ಪಂ. ಅಧ್ಯಕ್ಷ ಬಿದ್ದಪಂಡ ನರು ನಾಚಪ್ಪ, ಅಮ್ಮತ್ತಿ ಕಾರ್ಮಾಡ್ ಗ್ರಾ.ಪಂ. ಅಧ್ಯಕ್ಷ ಸೋಮೆಯಂಡ ಕತ್ರಿನಾ ಪೂಣಚ್ಚ, ಬಿಳುಗುಂದ ಗ್ರಾ.ಪಂ. ಅಧ್ಯಕ್ಷ ಮುಕ್ಕಾಟಿರ ಸಂತೋಷ್ ಹಾಗೂ ಮತ್ತೂರು ಗ್ರಾಮದ ಬಾನಂಡ ಡಾ. ಕಿರಣ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.