ಬುಧವಾರ, ಜನವರಿ 29, 2020
30 °C

ಕೊಣನೂರು- ಮೈಸೂರು ರಸ್ತೆ ಸಂಚಾರ ದುಸ್ತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಾಥಪುರ: ಇಲ್ಲಿಗೆ ಸಮೀಪದ ಕೊಣನೂರು- ಮೈಸೂರು ಮಾರ್ಗದ ರಸ್ತೆ ಸಂಪೂರ್ಣ ಹದಗೆಟ್ಟು ದೂಳುಮಯವಾಗಿ ವಾಹನ ಸಂಚಾರ ದುಸ್ತರವಾಗಿದೆ.ಈ ರಸ್ತೆಯಲ್ಲಿ ಸದಾ ವಾಹನಗಳ ಸಂಚಾರದಿಂದ ಎಳುವ ಮಣ್ಣಿ ನಿಂದಾಗಿ ಸುತ್ತಮುತ್ತಲ ವಾತಾವರಣ ದೂಳಿನಿಂದ ಆವೃತವಾಗಿರುತ್ತದೆ. ಇದರಿಂದಾಗಿ ಜನರ ಆರೋಗ್ಯದ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ಈ ರಸ್ತೆಯಲ್ಲಿ ಸಣ್ಣ- ಪುಟ್ಟ ಅಪ ಘಾತಗಳು ಆಗಾಗ್ಗೆ ಸಂಭವಿಸುತ್ತಲೇ ಇವೆ.ಈ ರಸ್ತೆಯಲ್ಲಿ ನಿತ್ಯ ಹಗಲಿರು ಳೆನ್ನದೇ ಬೆಂಗಳೂರು, ಮೈಸೂರು, ಪಿರಿಯಾಪಟ್ಟಣ, ವೀರಾಜಪೇಟೆ ಮಾರ್ಗವಾಗಿ ಕೇರಳದ ಕಡೆಗೆ  ಕೆ.ಎಸ್.ಆರ್.ಟಿ.ಸಿ. ಬಸ್ಸುಗಳು, ಸಾವಿರಾರು ದ್ವಿಚಕ್ರ ವಾಹನಗಳು ಸಂಚರಿಸುತ್ತವೆ. ರಸ್ತೆಯ ಒಂದು ಬದಿಯಲ್ಲಿ ಹಲವು ವಾಸದ ಮನೆ ಗಳು, ದೇವಸ್ಥಾನಗಳಿವೆ. ರಸ್ತೆಯಲ್ಲಿ ಸಂಚರಿಸುವವರಿಗೆ ದೂಳಿನ ಸ್ನಾನ ಮಾಡುವ ದುಃಸ್ಥಿತಿ ಇದೆ.ಕೆಲ ದಿನಗಳಿಂದ ಲೋಕೋಪ ಯೋಗಿ ಇಲಾಖೆ ರಸ್ತೆಯಲ್ಲಿದ್ದ ಗುಂಡಿ ಗಳನ್ನು ಮುಚ್ಚಿ ಡಾಂಬರು ಹಾಕಿಸುವ ಕೆಲಸವನ್ನು ಕೈಗೆತ್ತಿಕೊಂಡಿದೆ. ಹಲವು ಕಡೆ ರಸ್ತೆಯ ಮಧ್ಯದಲ್ಲೇ ಇರುವ ಗುಂಡಿಗಳನ್ನು ಮುಚ್ಚಿಲ್ಲ. ದೊಡ್ಡ ಗುಂಡಿಗಳನ್ನು ಮುಚ್ಚಲು ಅಧಿಕ ಖರ್ಚಾಗುತ್ತದೆ ಎಂದು ಅವುಗಳನ್ನು ಹಾಗೇ ಬಿಟ್ಟು ಸಣ್ಣ ಗುಂಡಿಗಳಿಗೆ ತೇಪೆ ಹಾಕುತ್ತಿದ್ದಾರೆ. ಕಳೆದ ತಿಂಗಳು ಜಾತ್ರೆ ಹಿನ್ನೆಲಯಲ್ಲಿ ಗುಂಡಿಗಳಾಗಿ ಹದಗೆಟ್ಟ ರಸ್ತೆಗೆ ಬಿಳಿ ಮಣ್ಣು ಸುರಿದು ಮೇಲೆದ್ದ ಕಲ್ಲುಗಳನ್ನು ಮುಚ್ಚಿ ಸಮತಟ್ಟು ಮಾಡಲಾಗಿತ್ತು. ವಾಹನಗಳ ಸಂಚಾರ ಜಾಸ್ತಿಯಾದಂತೆ ಅದು ಮತ್ತಷ್ಟು ಹಾಳಾಗಿತ್ತು. ಮತ್ತೆ ಜೆಸಿಬಿ ಯಂತ್ರದ ಮೂಲಕ ರಸ್ತೆಯ ಎರಡು ಬದಿಯಲ್ಲಿ ತಗ್ಗು- ದಿಣ್ಣೆಯನ್ನು ಅಗೆದು ತೆಗೆದ ಮಣ್ಣಿನಿಂದಲೇ ದಾರಿ ಸಮತಟ್ಟು ಮಾಡಲು ಮುಂದಾದ ಪರಿಣಾಮ ಈಗ ರಸ್ತೆ ಪೂರ್ಣವಾಗಿ ದೂಳುಮಯವಾಗಿ ಹೋಗಿದೆ. ಈ ರಸ್ತೆಯಲ್ಲಿ ಪಾದಚಾರಿಗಳು ಮತ್ತು ಬೈಕ್ ಸವಾರರಿಗೆ ಎದುರಿನಿಂದ ವಾಹ ನಗಳು ಬರುತ್ತಿರುವುದು ಗೋಚರಿಸ ದಷ್ಟು ದೂಳು ತುಂಬಿರುತ್ತದೆ.ಲೋಕೋಪಯೋಗಿ ಇಲಾಖೆ ಯವರು ಇತ್ತ ಗಮನ ರಸ್ತೆ ದುರ ಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸ್ದ್ದಿದಾರೆ.

ಪ್ರತಿಕ್ರಿಯಿಸಿ (+)