ಭಾನುವಾರ, ಮಾರ್ಚ್ 7, 2021
27 °C

ಕೋಡುರಿಗೆ ನೀರು ಕೊಡೋರಿಲ್ಲ !

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಡುರಿಗೆ ನೀರು ಕೊಡೋರಿಲ್ಲ !

ಮಾಲೂರು: ಬೇಸಿಗೆಯಿಂದ ಉಲ್ಬಣ ಗೊಳ್ಳು ತ್ತಿರುವ ಸಮಸ್ಯೆಗಳಿಂದ ಈ ಗ್ರಾಮಗಳು ಹೊರತಾಗಿಲ್ಲ. ಇಲ್ಲಿನ ಕೊಳವೆ ಬಾವಿ ಬೇಸಿಗೆ ಮುನ್ನವೇ ಬತ್ತಿದ್ದರಿಂದ ಈಗ ನೀರಿನ ಸಮಸ್ಯೆ ತೀವ್ರವಾಗಿದೆ. ಇನ್ನು ಸಿಸ್ಟನ್‌ನಲ್ಲಿ ಬರುವ ಅಲ್ಪ ಸ್ವಲ್ಪ ನೀರನ್ನು ಹಿಡಿಯಲು ಮಹಿಳೆಯರು ಇಡೀ ರಾತ್ರಿ ಬಿಂದಿಗೆಗಳೊಂದಿಗೆ ಕಾಯುವ ಪರಿಸ್ಥಿತಿ ಎದುರಾಗಿದೆ.ತಾಲ್ಲೂಕಿನ ದೊಡ್ಡಶಿವಾರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಈ ಗ್ರಾಮದಲ್ಲಿ 235 ಮನೆಗಳಿವೆ. ಸುಮಾರು 1800 ಜನರು ವಾಸಿಸುತ್ತಿದ್ದಾರೆ.  ಗ್ರಾಮದಲ್ಲಿ ಮೂಲ ಸೌಲಭ್ಯ ಗಳಾದ ಕುಡಿಯುವ ನೀರು, ಚರಂಡಿ ಸೌಕರ್ಯ ಇಲ್ಲದೇ ಜನ ಪರಿತಪಿಸುತ್ತಿದ್ದಾರೆ.ಗ್ರಾಮದ ಅಕ್ಕಪಕ್ಕದ ಕೃಷಿಭೂಮಿಗಳಲ್ಲಿನ ಕೊಳವೆ ಬಾವಿಗಳಿಂದ ಕ್ಯಾನ್‌ಗಳ ಮುಖಾಂತರ ನೀರನ್ನು ತರಲಾಗುತ್ತಿದೆ. ತಾಲ್ಲೂಕಿನಾದ್ಯಂತ ಅಳ ವಡಿಸಿರುವ ನಿರಂತರ ಜ್ಯೋತಿಯನ್ನು ಕೋಡೂರು ಗ್ರಾಮಕ್ಕೆ ಅಳವಡಿಸದೇ ಇರುವು ದರಿಂದ ಶಿಫ್ಟ್ ಮೂಲಕ ವಿದ್ಯುತ್ ಪೂರೈಸ ಲಾಗುತ್ತಿದೆ. ಬೆಳಗಿನ ಜಾವ 3ಕ್ಕೆ ವಿದ್ಯುತ್ ನೀಡುವುದರಿಂದ ಆಗ ಎದ್ದು ನೀರು ಹಿಡಿ ಯುವುದು ಪ್ರತಿ ಮಧ್ಯರಾತ್ರಿ ಕೆಲಸವಿದು.`ಒಂದು ಕೊಡ ನೀರಿಗಾಗಿ ರಾತ್ರಿ ಇಡೀ ನಿದ್ರೆ ಕೆಡಬೇಕು. ದಿನ ಪೂರ್ತಿ ಕೂಲಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ~ ಎಂದು ಗ್ರಾಮದ ನಂಜಮ್ಮ ತಮ್ಮ ಅಳಲನ್ನು ವ್ಯಕ್ತಪಡಿಸಿದರು.ಪಟ್ಟಣದಿಂದ 3 ಕಿ.ಮೀ ದೂರದಲ್ಲಿರುವ ಕೋಡೂರು ಗ್ರಾಮಕ್ಕೆ ಇಲ್ಲಿಯ ತನಕ ಬಸ್ ಸೌಲಭ್ಯವಿಲ್ಲ.  ಶಾಲೆಗೆ ಹೋಗುವ ಮಕ್ಕಳು ಸೇರಿದಂತೆ ವೃದ್ಧರು, ರೋಗಿಗಳು ಮತ್ತು ಜನತೆ  ಪಟ್ಟಣಕ್ಕೆ ತೆರಳಲು ಖಾಸಗಿ ವಾಹನಗಳನ್ನೇ ಅವ ಲಂಬಿಸಿದ್ದಾರೆ.ಗ್ರಾಮದ ಕಾಲೊನಿಯಲ್ಲಿ ಚರಂಡಿ ಕಾಮಗಾರಿ ಅರ್ಧಕ್ಕೆ ನಿಂತಿರುವುದರಿಂದ ಗ್ರಾಮ ದ ಕೊಳಚೆ ಮನೆಗಳ ಮುಂದೆ ನಿಲ್ಲುತ್ತದೆ. ಇದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿ ಸಾಂಕ್ರಾ ಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ.ಶಾಸಕರು ಸೇರಿದಂತೆ ಅಧಿಕಾರಿಗಳ ಬಳಿ ಹಲವು ಬಾರಿ ನೀರಿನ ಸೌಲಭ್ಯ ಕಲ್ಪಿಸುವಂತೆ ಮನವಿ ಮಾಡಿದರು ಯಾವುದೇ ರೀತಿ ಅನು ಕೂಲವಾಗಲಿಲ್ಲ.ಚುನಾವಣಾ ವೇಳೆಯಲ್ಲಿ ಸ್ಥಳೀಯ ಶಾಸಕರು  ಗ್ರಾಮಕ್ಕೆ ಐದು ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದರು. ಆದರೆ ಭರವಸೆ ಮಾತ್ರ ಇಂದಿಗೂ ಮರೀಚಿಕೆ. ಹಣ ನೀಡಿದ್ದರೆ ಗ್ರಾಮ ದಲ್ಲಿ ಕೊಳವೆ ಬಾವಿ ಕೊರೆಯಿಸಿ ನೀರಿನ ಸಮಸ್ಯೆ ನೀಗಿಸಬಹುದಾಗಿತ್ತು.ಕೇವಲ ಭರವಸೆ ನೀಡುವ ಶಾಸಕ ಎಸ್.ಎನ್.ಕೃಷ್ಣಯ್ಯಶೆಟ್ಟಿ ಇನ್ನು ಮುಂದಾದರೂ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಪ್ರತಿಭಟನೆ ನಡೆಸಲಾಗುವುದು ಎಂದು ಮುಖಂಡ ಶಂಕರ್‌ಬಾಬು ಆಕ್ರೋಶದಿಂದ `ಪ್ರಜಾವಾಣಿ~ ಜತೆ ಹಂಚಿಕೊಂಡರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.