ಲಂಡನ್ (ಪಿಟಿಐ): ವ್ಯಕ್ತಿಯೊಬ್ಬರಲ್ಲಿ ಮೇದೋಜೀರಕ ಗ್ರಂಥಿ (ಪ್ಯಾಂಕ್ರಿಯಾಟಿಕ್) ಕ್ಯಾನ್ಸರ್ ಗೋಚರಿಸಲಿರುವ ಬಗ್ಗೆ ಪೂರ್ವ ಸೂಚನೆ ನೀಡುವ ಹೊಸ ವಿಧಾನವನ್ನು ಸಂಶೋಧಕರು ಅಭಿವೃದ್ಧಿ ಪಡಿಸಿದ್ದಾರೆ.

ಗೊಟೆನ್ಬರ್ಗ್ನ ಸಹ್ಲಗ್ರೆನ್ಸ್ಕಾ ವಿಶ್ವವಿದ್ಯಾಲಯದ ಸಂಶೋಧಕರು ಈ ಹೊಸ ವಿಧಾನವನ್ನು ಅಭಿವೃದ್ಧಿ ಪಡಿಸಿದ್ದು, ಶೇಕಡಾ 97ರಷ್ಟು ಖಚಿತವಾಗಿ ಪೂರ್ವ ಮುನ್ಸೂಚನೆ ನೀಡಲಿದೆ ಎನ್ನುತ್ತಾರೆ ಅವರು.

‘ಹೊಸ ವಿಧಾನದ ಮೂಲಕ ಮುಂಚಿತವಾಗಿ ಕ್ಯಾನ್ಸರ್ನ ಗುಣ ಲಕ್ಷಣಗಳನ್ನು ಪತ್ತೆಮಾಡಲು ಸಾಧ್ಯವಾಗುವುದರಿಂದ ಅನಗತ್ಯವಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗುವ ಅಪಾಯದಿಂದ ಪಾರಾಗಬಹುದು. ಮುಂದಿನ ಐದು ವರ್ಷಗಳ ಒಳಗಾಗಿ ಈ ವ್ಯವಸ್ಥೆಯನ್ನು ರೋಗಿಗಳಿಗೆ ಒದಗಿಸಲಾಗುವುದು’ ಎನ್ನುತ್ತಾರೆ ಸಹ್ಲಗ್ರೆನ್ಸ್ಕಾ ವಿಶ್ವವಿದ್ಯಾಲಯದ ಆಸ್ಪತ್ರೆಯ ವೈದ್ಯ ಕರೊಲಿನಾ ಜಬ್ಬಾರ್.

ಅಲ್ಲದೇ ಕಾಯಿಲೆಯ ಬೆಳವಣಿಗೆಯ ಮಟ್ಟವನ್ನು ಗುರುತಿಸಲು ಹಾಗೂ ರೋಗಿಗೆ ತಕ್ಷಣದಲ್ಲಿ ಶಸ್ತ್ರಚಿಕಿತ್ಸೆಯ ಅಗತ್ಯವಿದೆಯೇ ಎಂಬುದನ್ನು ನಿರ್ಧರಿಸಲೂ ಈ ಹೊಸ ವಿಧಾನ ನೆರವಾಗಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.