ಸೋಮವಾರ, ಜೂಲೈ 13, 2020
25 °C

ಕ್ರಿಕೆಟ್ ಆಡಿದ ಜಿಲ್ಲಾಧಿಕಾರಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕ್ರಿಕೆಟ್ ಆಡಿದ ಜಿಲ್ಲಾಧಿಕಾರಿ!

ಕೋಲಾರ: ನಗರದ ಜಿಲ್ಲಾ ಕ್ರೀಡಾಂಗಣದ ಮೂಲೆಯಲ್ಲಿ ಗುರುವಾರ ಸಂಜೆ ಕ್ರಿಕೆಟ್ ಆಡುತ್ತಿದ್ದವರಿಗೆ ಅಚ್ಚರಿ ತರುವ ಘಟನೆ ನಡೆಯಿತು.ಕ್ರೀಡಾಂಗಣದಲ್ಲಿ ಇದೇ 12ರಿಂದ ಶುರುವಾಗಲಿರುವ ‘ರಾಯರಥ’ ಧ್ವನಿ ಬೆಳಕು ಕಾರ್ಯಕ್ರಮದ ವೇದಿಕೆ ನಿರ್ಮಾಣದ ಸಿದ್ಧತೆ ಪರಿಶೀಲಿಸಲು ಗುರುವಾರ ಸಂಜೆ ಅಲ್ಲಿಗೆ ಬಂದ ಜಿಲ್ಲಾಧಿಕಾರಿ ಮನೋಜ್‌ಕುಮಾರ್ ಮೀನಾ ಕೂಡಾ ಬ್ಯಾಟ್ ಹಿಡಿದರು. ಜಿಲ್ಲಾಧಿಕಾರಿಗಳು ತಮ್ಮ ಜೊತೆ ಕ್ರಿಕೆಟ್ ಆಡಬಹುದು ಎಂದು ಆಟಗಾರರ್ಯಾರೂ ಅಂದುಕೊಂಡಿರಲಿಲ್ಲ.ನಗುಮುಖ ಹೊತ್ತು ಬಂದ ಮೀನಾ ಸೌಜನ್ಯದಿಂದ ಬ್ಯಾಟ್ ಅನ್ನು ಕೇಳಿ ಪಡೆದರು. ಚೆಂಡಿನ ಎಸೆತಕ್ಕೆ ತಕ್ಕಂತೆ ಬ್ಯಾಟನ್ನು ಬೀಸಿ ಖುಷಿಪಟ್ಟರು. ಜಿಲ್ಲಾಧಿಕಾರಿ ತಮ್ಮೊಡನೆ ಆಟವಾಡಿದ ಖುಷಿಯಲ್ಲಿ ಇತರೆ ಆಟಗಾರರು ಮುಂದುವರಿದರು. ಕೆಲವು ನಿಮಿಷಗಳ ಕಾಲ ಆಟವಾಡಿದ ಮೀನಾ ಮತ್ತೆ ತಮ್ಮ ಕಚೇರಿಗೆ ತೆರಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.