ದುಬೈ: ವೇಗಿ ಉಮರ್ ಗುಲ್ (63ಕ್ಕೆ4) ಹಾಗೂ ಆಫ್ ಸ್ಪಿನ್ನರ್ ಸಯೀದ್ ಅಜ್ಮಲ್ (42ಕ್ಕೆ3) ಅವರ ಪ್ರಭಾವಿ ಬೌಲಿಂಗ್ ದಾಳಿ ನೆರವಿನಿಂದ ಪಾಕಿಸ್ತಾನ ತಂಡದವರು ಇಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ 10 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದ್ದಾರೆ.

ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಂದ್ಯದ ಮೂರನೇ ದಿನವಾದ ಗುರುವಾರ ಇಂಗ್ಲೆಂಡ್ ನೀಡಿದ 15 ರನ್ಗಳ ಗುರಿಯನ್ನು ಪಾಕ್ 3.4 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೇ ತಲುಪಿತು. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.

2011ರಲ್ಲಿ ಅದ್ಭುತ ಪ್ರದರ್ಶನದ ಮೂಲಕ ಅಗ್ರಪಟ್ಟ ಪಡೆದಿದ್ದ ಇಂಗ್ಲೆಂಡ್ ಮೂರೇ ದಿನದಲ್ಲಿ ಸೋಲು ಕಂಡಿತು. ಎರಡನೇ ಇನಿಂಗ್ಸ್ನಲ್ಲಿ ಆ್ಯಂಡ್ರ್ಯೂ ಸ್ಟ್ರಾಸ್ ಬಳಗ 57.5 ಓವರ್ಗಳಲ್ಲಿ 160 ರನ್ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡಿತು.

ಸಂಕ್ಷಿಪ್ತ ಸ್ಕೋರ್: ಇಂಗ್ಲೆಂಡ್ ಮೊದಲ ಇನಿಂಗ್ಸ್: 72.3 ಓವರ್ಗಳಲ್ಲಿ 192 ಹಾಗೂ 57.5 ಓವರ್ಗಳಲ್ಲಿ 160 (ಜೊನಾಥನ್ ಟ್ರಾಟ್ 49, ಗ್ರೇಮ್ ಸ್ವಾನ್ 39; ಉಮರ್ ಗುಲ್ 63ಕ್ಕೆ4, ಸಯೀದ್ ಅಜ್ಮಲ್ 42ಕ್ಕೆ3, ಅಬ್ದುರ್ ರೆಹಮಾನ್ 37ಕ್ಕೆ3); ಪಾಕಿಸ್ತಾನ ಮೊದಲ ಇನಿಂಗ್ಸ್: 119.5 ಓವರ್ಗಳಲ್ಲಿ 338 (ಅಡ್ನಾನ್ ಅಕ್ಮಲ್ 61; ಜೇ ಮ್ಸ ಆ್ಯಂಡರ್ಸನ್ 71ಕ್ಕೆ2, ಸ್ಟುವರ್ಟ್ ಬ್ರಾಡ್ 84ಕ್ಕೆ3, ಗ್ರೇಮ್ ಸ್ವಾನ್ 107ಕ್ಕೆ4). ಫಲಿತಾಂಶ: ಪಾಕಿಸ್ತಾನಕ್ಕೆ 10 ವಿಕೆಟ್ ಗೆಲುವು ಹಾಗೂ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ. ಪಂದ್ಯ ಶ್ರೇಷ್ಠ: ಸಯೀದ್ ಅಜ್ಮಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.