ಸೋಮವಾರ, ಆಗಸ್ಟ್ 3, 2020
23 °C

ಕ್ರಿಕೆಟ್: ಗೇಲ್ ಆರ್ಭಟ; ವಿಂಡೀಸ್‌ಗೆ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕ್ರಿಕೆಟ್: ಗೇಲ್ ಆರ್ಭಟ; ವಿಂಡೀಸ್‌ಗೆ ಜಯ

ಫ್ಲೋರಿಡಾ (ಎಪಿ): ಕ್ರಿಸ್ ಗೇಲ್ (52 ಎಸೆತಗಳಲ್ಲಿ 85) ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ವೆಸ್ಟ್‌ಇಂಡೀಸ್ ತಂಡದವರು ಇಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಟ್ವೆಂಟಿ-20 ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ 56 ರನ್‌ಗಳ ಗೆಲುವು ಸಾಧಿಸಿದ್ದಾರೆ.ತಟಸ್ಥ ಸ್ಥಳದಲ್ಲಿ ನಡೆಯುತ್ತಿರುವ ಸರಣಿಯ ಈ ಪಂದ್ಯದಲ್ಲಿ ವಿಂಡೀಸ್ ನೀಡಿದ 210 ರನ್‌ಗಳ ಸವಾಲಿನ ಗುರಿಗೆ ಉತ್ತರವಾಗಿ ಕಿವೀಸ್ ಬಳಗ 18.3 ಓವರ್‌ಗಳಲ್ಲಿ 153 ರನ್‌ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡಿತು.ಗೇಲ್ ಅವರ ಬಿರುಸಿನ ಆಟದಲ್ಲಿ ಏಳು ಬೌಂಡರಿ ಹಾಗೂ ಐದು ಸಿಕ್ಸರ್‌ಗಳಿದ್ದವು. ಅವರಿಗೆ ಕೀರನ್    ಪೊಲಾರ್ಡ್ (ಔಟಾಗದೆ 63; 29 ಎಸೆತ, 5 ಬೌಂಡರಿ, 5 ಸಿಕ್ಸರ್) ಉತ್ತಮ ಬೆಂಬಲ ನೀಡಿದರು. ಸಂಕ್ಷಿಪ್ತ ಸ್ಕೋರ್:   ವೆಸ್ಟ್‌ಇಂಡೀಸ್: 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 209 (ಕ್ರಿಸ್ ಗೇಲ್ ಔಟಾಗದೆ 85, ಕೀರನ್ ಪೊಲಾರ್ಡ್ ಔಟಾಗದೆ 63; ಡಗ್ ಬ್ರೇಸ್‌ವೆಲ್ 47ಕ್ಕೆ1, ಕೇನ್ ವಿಲಿಯಮ್ಸನ್ 21ಕ್ಕೆ2); ನ್ಯೂಜಿಲೆಂಡ್: 18.3 ಓವರ್‌ಗಳಲ್ಲಿ 153 (ರಾಬ್ ನಿಕೋಲ್ 32, ಟಿಮ್ ಸೌಥಿ 23, ಜೇಕಬ್ ಓರಮ್ 27; ಸುನಿಲ್ ನಾರಾಯಣ 34ಕ್ಕೆ3):

ಫಲಿತಾಂಶ: ವಿಂಡೀಸ್‌ಗೆ 56 ರನ್‌ಗಳ ಜಯ.

ಪಂದ್ಯ ಶ್ರೇಷ್ಠ: ಕ್ರಿಸ್ ಗೇಲ್.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.