ಮಂಗಳವಾರ, ಮೇ 18, 2021
31 °C

ಕ್ರಿಕೆಟ್: ವಿಜೇತ ತಂಡಕ್ಕೆ ಒಂದು ಕೋಟಿ ರೂ. ಬಹುಮಾನ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಟಿ.ಪವನ್ ಕುಮಾರ್ ಅವರ ಆಲ್‌ರೌಂಡ್ ಪ್ರದರ್ಶನದ ನೆರವಿನಿಂದ ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ (ಎಸ್‌ಬಿಎಚ್) ತಂಡದವರು ಗುರುವಾರ ಇಲ್ಲಿ ಕೊನೆಗೊಂಡ ಬಿಸಿಸಿಐ ಕಾರ್ಪೊರೇಟ್ ಟ್ರೋಫಿ  ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದರು.ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಎಸ್‌ಬಿಎಚ್ ತಂಡದವರು ಒಂದು ವಿಕೆಟ್‌ನಿಂದ ಏರ್ ಇಂಡಿಯಾ ತಂಡವನ್ನು ಮಣಿಸಿದರು. ಏರ್ ಇಂಡಿಯಾ ನೀಡಿದ 283 ರನ್‌ಗಳ ಗುರಿಯನ್ನು ಎಚ್‌ಬಿಎಚ್ 49.2 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು ಮುಟ್ಟಿತು.ಅದಕ್ಕಾಗಿ ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ತಂಡ ಒಂದು ಕೋಟಿ ರೂಪಾಯಿ ಬಹುಮಾನ ಪಡೆಯಿತು. ರನ್ನರ್ ಅಪ್ ಏರ್ ಇಂಡಿಯಾ 50 ಲಕ್ಷ ರೂ.ಜೇಬಿಗಳಿಸಿತು.ಬೌಲಿಂಗ್‌ನಲ್ಲಿ 4 ವಿಕೆಟ್ ಪಡೆದಿದ್ದ ಪವನ್ ಕುಮಾರ್ ಬಳಿಕ ಬ್ಯಾಟಿಂಗ್‌ನಲ್ಲಿ ಕೇವಲ 19 ಎಸೆತಗಳಲ್ಲಿ ಅಜೇಯ 33 ರನ್ ಗಳಿಸಿದರು.ಸಂಕ್ಷಿಪ್ತ ಸ್ಕೋರ್: ಏರ್ ಇಂಡಿಯಾ: 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 282 (ರಾಬಿನ್ ಉತ್ತಪ್ಪ 56, ಮೊಹಮ್ಮದ್ ಕೈಫ್ 88, ನಮನ್ ಓಜಾ 48; ಟಿ.ಪವನ್ ಕುಮಾರ್ 60ಕ್ಕೆ4, ಡೇನಿಯಲ್ ಮನೋಹರ್ 37ಕ್ಕೆ3); ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ (ಎಸ್‌ಬಿಎಚ್): 49.2 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 283 (ಟಿ.ಸುಮನ್ 57, ಬಿ.ಸುಮಂತ್ 33, ಅನಿರುದ್ಧ ಸಿಂಗ್ 29, ಅಹ್ಮದ್ ಖಾದ್ರಿ 45, ಆಕಾಶ್ ಭಂಡಾರಿ 31, ಟಿ.ಪವನ್ ಕುಮಾರ್ ಔಟಾಗದೆ 33; ಧವಳ್ ಕುಲಕರ್ಣಿ 82ಕ್ಕೆ2, ಪ್ರದೀಪ್ ಸಾಂಗ್ವಾನ್ 49ಕ್ಕೆ2, ರಜತ್ ಭಟಿಯಾ 46ಕ್ಕೆ2): ಫಲಿತಾಂಶ: ಎಸ್‌ಬಿಎಚ್ ತಂಡಕ್ಕೆ ಒಂದು ವಿಕೆಟ್ ಗೆಲುವು. ಪಂದ್ಯ ಶ್ರೇಷ್ಠ: ಟಿ.ಪವನ್ ಕುಮಾರ್.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.