ಭಾನುವಾರ, ಮಾರ್ಚ್ 7, 2021
30 °C

ಖಾದಿ ಉತ್ಪಾದನಾ ಕೇಂದ್ರಕ್ಕೆ ಕಂಟಕ!

ಚಂದ್ರಕಾಂತ ಬಾರಕೇರ Updated:

ಅಕ್ಷರ ಗಾತ್ರ : | |

ಖಾದಿ ಉತ್ಪಾದನಾ ಕೇಂದ್ರಕ್ಕೆ ಕಂಟಕ!

ಒಂದು ಕಾಲದಲ್ಲಿ ಖಾದಿ ಉದ್ಯೋಗ ನಿಧಿಗೊಂಡು ನೆಲೆ ನಿಂತಿತ್ತು. ಕಾರ್ಮಿಕರ ಪರಿಶ್ರಮದಿಂದ ಉದ್ಯೋಗ ಕೇಂದ್ರ ಅಭಿವೃದ್ಧಿ ಪಥದತ್ತ ಸಾಗಿ ಮೆರೆಯುತ್ತಿತ್ತು. ಸಮೃದ್ಧ ಖಾದಿ ತಯಾರಿಕಾ ಕ್ಷೇತ್ರವಾಗಿ ಕಂಗೊಳಿಸುತ್ತಿತ್ತು. ಆದರೆ, ಸಕಾಲಕ್ಕೆ ಹಂಜಿ–ನೂಲು ಮಂಜೂರಾಗಲಿಲ್ಲ. ಪರಿಣಾಮ ಗಜೇಂದ್ರಗಡದ ‘‘ಅಂಬರ ಚರಕಾ ಹಾಗೂ ಖಾದಿ ಉತ್ಪಾದನಾ ಕೇಂದ್ರ’’ ದಲ್ಲಿನ ಖಾದಿ ಮಗ್ಗಗಳು ಗೌಣವಾಗಿವೆ!ಹತ್ತು–ಹಲವು ವಿಶೇಷತೆಗಳಿಗೆ ಹೆಸರಾದ ಐತಿಹಾಸಿಕ ಗಜೇಂದ್ರಗಡ ಕೈಮಗ್ಗ ನೇಕಾರಿಕೆ ಕ್ಷೇತ್ರದಲ್ಲಿ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದರೆ, ಖಾದಿ ಕ್ಷೇತ್ರದಲ್ಲಿಯೂ ಕೈಮಗ್ಗ ನೇಕಾರಿಕೆಗೆ ಸರಿ–ಸಮಾನವಾದ ಹೆಸರು ಮಾಡಿದೆ.ಇದಕ್ಕೆ ಪುಷ್ಠಿ ಎಂಬಂತೆ ಗಜೇಂದ್ರಗಡದ ಹೊರ ವಲಯದಲ್ಲಿನ ಅಂಬರ ಚರಕಾ ಮತ್ತು ಖಾದಿ ಉತ್ಪಾದನಾ ಕೇಂದ್ರ ಮೂರೂವರೆ ದಶಕಗಳ ಕಾಲ ನೂರಾರು ಖಾದಿ ಉತ್ಪಾದನಾ ಕಾರ್ಮಿಕರಿಗೆ ಕೈತುಂಬ ಕೆಲಸ ನೀಡಿ, ರಾಷ್ಟ್ರ ಮಟ್ಟದ ಖಾದಿ ಕ್ಷೇತ್ರದ ಗಮನ ಸೆಳೆದು ಸರ್ಕಾರದ ದಿವ್ಯ ನಿರ್ಲಕ್ಷ್ಯದಿಂದ ಖಾದಿ ಮಗ್ಗಗಳು ಸದ್ದು ನಿಲ್ಲಿಸಿವೆ. ಕಾರ್ಮಿಕರ ಬದುಕು ಬೀದಿಗೆ ಬಂದಿದೆ.1957 ರಲ್ಲಿ ಗದಗ–ಬೆಟಗೇರಿಯಲ್ಲಿ ಸ್ಥಾಪನೆಗೊಂಡ ಕರ್ನಾಟಕ ಖಾದಿ ಕಾರ್ಯಕರ್ತರ ಸಂಘ 1980 ರಲ್ಲಿ ಗಜೇಂದ್ರಗಡದಲ್ಲಿ ಅಂಬರ ಚರಕಾ ಹಾಗೂ ಖಾದಿ ಉತ್ಪಾದನಾ ಕೇಂದ್ರವನ್ನು ಸ್ಥಾಪಿಸಿತು. ಕೇಂದ್ರದಲ್ಲಿ 200 ಅಂಬರ ಚರಕಾ (ನೂಲು ತಯಾರಿಸುವುದು), 200 ಖಾದಿ ಮಗ್ಗಗಳಿದ್ದವು. ಈ ಮಗ್ಗಗಳಿಗೆ ಅನುಗುಣವಾಗಿ 200 ಜನ ನೂಲಿಗರು, 200 ಜನ ಖಾದಿ ನೇಕಾರರು ಹಾಗೂ 6 ಜನ ಖಾದಿ ಕಾರ್ಮಿಕರು ಸಂಘದಲ್ಲಿ ಕಾರ್ಯನಿರ್ವಹಿಸುತ್ತಿದ್ದರು.ಕೇಂದ್ರಕ್ಕೆ ಗದಗ–ಬೆಟಗೇರಿಯ ಕರ್ನಾಟಕ ಖಾದಿ ಕಾರ್ಯಕರ್ತರ ಸಂಘದಿಂದ ಕಚ್ಚಾ ನೂಲನ್ನು ಒದಗಿಸಲಾಗುತ್ತಿತ್ತು. ಈ ಕಚ್ಚಾ ನೂಲಿನಿಂದ ಈ ಕೇಂದ್ರದಲ್ಲಿ ಗುಣಮಟ್ಟದ ಖಾದಿ ಬಟ್ಟೆಗಳಾದ ಲುಂಗಿ, ಟಾವಲ್‌, ಬೆಡ್‌ಸೀಟ್‌, ಪಾದಿ ವಸ್ತ್ರ, ಧ್ವಜದ ಬಟ್ಟೆಗಳನ್ನು ತಯಾರಿಸಲಾಗುತ್ತಿತ್ತು.

ಇಲ್ಲಿ ಸಿದ್ಧಗೊಳ್ಳುವ ಬಟ್ಟೆಗಳಿಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇತ್ತು. ಕೇಂದ್ರದ ಕಾರ್ಮಿಕರ ಪರಿಶ್ರಮ ಹಾಗೂ ವೃತ್ತಿ ಪರ ಕಾಳಜಿಯನ್ನು ಮೆಚ್ಚಿ ಸಂಘ  Provident Fund (ಭವಿಷ್ಯ ನಿಧಿ)  (ಕಾರ್ಮಿಕರ ವೇತನದಲ್ಲಿ ₨ 10 ಹಾಗೂ ಸಂಸ್ಥೆ ₨ 10 ನೀಡುತ್ತಿತ್ತು). ಶೇ.10 ರಷ್ಟು  Incentive (ಉತ್ತೇಜನ ನಿಧಿ) ನೀಡಲಾಗುತ್ತಿತ್ತು.1980 ರಲ್ಲಿ ಬಾಡಿಗೆ ಕಟ್ಟಡದಲ್ಲಿ ಆರಂಭಗೊಂಡಿದ್ದ ಅಂಬರ ಚರಕ ಮತ್ತು ಖಾದಿ ಉತ್ಪಾದನಾ ಕೇಂದ್ರಕ್ಕೆ 1986 ರಲ್ಲಿ ಸ್ವಂತ ಕಟ್ಟಡದ ಭಾಗ್ಯ ದೊರಕಿತು. ಅಂದಿನ ಶಾಸಕ ಜ್ಞಾನದೇವ ದೊಡ್ಡಮೇಟಿ ಅವರು ಕೇಂದ್ರದ ನೂತನ ಕಟ್ಟಡ ಉದ್ಘಾಟಿಸಿ, ‘ಖಾದಿ ನೇಕಾರಿಕೆ ಕೇಂದ್ರದ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರ ಸೂಕ್ತ ಪ್ರೋತ್ಸಾಹ ನೀಡುತ್ತಿದೆ. ಇದರ ಸದುಪಯೋಗಕ್ಕೆ ಕೇಂದ್ರ ಮುಂದಾಗಬೇಕು’ ಎನ್ನುತ್ತಾರೆ ಕೇಂದ್ರದ ಕಾರ್ಮಿಕರಾದ ಪಾರ್ವತೆವ್ವ ಕವಡಿಮಟ್ಟಿ, ಸುರೇಶ ಗಾಯಕವಾಡ.ಪಿಂಚಣಿ ಸೌಲಭ್ಯವೂ ಇತ್ತು!:ಈ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರು ಸಂಸ್ಥೆಯಲ್ಲಿ 10 ವರ್ಷ ನಿರಂತರ ಸೇವೆ ಸಲ್ಲಿಸಿದ್ದರೆ ಅಸಂಘಟಿತ ಕಾರ್ಮಿಕರ ಪಿಂಚಣಿ ವತಿಯಿಂದ ವೇತನ ದೊರೆಯುತ್ತಿದೆ. ಈ ಕೇಂದ್ರದಲ್ಲಿ ಕಾರ್ಯನಿರ್ವಹಿಸಿದ ಅದೆಷ್ಟೋ ನಿವೃತ್ತ ಕಾರ್ಮಿಕರು ಇಂದಿಗೂ ನಿವೃತ್ತಿ ಪಿಂಚಣಿ ವೇತನ ಪಡೆಯುತ್ತಿದ್ದಾರೆ.ಆದರೆ, ಕಾರ್ಮಿಕರ ಸರ್ವಾಂಗೀಣ ಅಭಿವೃದ್ಧಿ ಕಲ್ಪನೆಯನ್ನಿಟ್ಟುಕೊಂಡು ಸುದೀರ್ಘ ವಸಂತಗಳ ಕಾಲ ಕಾರ್ಯನಿರ್ವಹಿಸಿದ ಅಂಬರ ಚರಕಾ ಹಾಗೂ ಖಾದಿ ಉತ್ಪಾದನಾ ಕೇಂದ್ರಕ್ಕೆ ಸರ್ಕಾರ  ರಿಯಾಯಿತಿ ಹಣ (Rebate Fund ) ಬಿಡುಗಡೆಗೊಳಿಸದಿರುವುದರಿಂದ ಕೇಂದ್ರದಲ್ಲಿನ ಖಾದಿ ಮಗ್ಗಗಳು ದೂಳು ತಿನ್ನುತ್ತಿವೆ.1980 ರಿಂದ ಆರಂಭಗೊಂಡು ವರ್ಷದಿಂದ ವರ್ಷಕ್ಕೆ ಅಭಿವೃದ್ಧಿ ಪಥದತ್ತ ಸಾಗಿದ್ದ ಗಜೇಂದ್ರಗಡದ ಅಂಬರ ಚರಕಾ ಮತ್ತು ಖಾದಿ ಉತ್ಪಾದನಾ ಕೇಂದ್ರಕ್ಕೆ 1996 ರಿಂದ Rebate ಕಂಟಕ ಎದುರಾಯಿತು. ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರ ಉದ್ಯೋಗಕ್ಕೆ ಅಗತ್ಯವಿರುವ ಹಂಜು–ನೂಲು ದೊರಯದಂತಾಯಿತು.ಸರ್ಕಾರದ ರಿಯಾಯಿತಿ ಹಣ ಕೇಂದ್ರಕ್ಕೆ ದೊರಕದಾಯಿತು. ಈ ಸಮಸ್ಯೆಗಳು ದಿನದಿಂದ ದಿನಕ್ಕೆ ಕೇಂದ್ರಕ್ಕೆ ಕಂಟಕವಾಗುತ್ತಾ ಸಾಗಿತು. ಸಮಸ್ಯೆ ನಿವಾರಣೆಗೆ ಕೇಂದ್ರದ ಕಾರ್ಮಿಕರು ಸರ್ಕಾರದ ಮೇಲೆ ಒತ್ತಡ ಹೇರಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಕೇಂದ್ರದಲ್ಲಿನ ಉದ್ಯೋಗವನ್ನೇ ನೆಚ್ಚಿಕೊಂಡು ಬದುಕು ಸಾಗಿಸುತ್ತಿದ್ದ ಕಾರ್ಮಿಕರು ಬೀದಿ ಪಾಲಾದರು ಎನ್ನುತ್ತಾರೆ ಕೇಂದ್ರದ ವ್ಯವಸ್ಥಾಪಕ ಎಂ.ಎಂ.ಪೀರ್‌ಜಾದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.