ಗುರುವಾರ , ಸೆಪ್ಟೆಂಬರ್ 19, 2019
26 °C

ಗಡಾಫಿ ಆಡಳಿತಕ್ಕೆ ಚೀನಾದ ಶಸ್ತ್ರಾಸ್ತ್ರ

Published:
Updated:

ಟೊರಾಂಟೊ (ಪಿಟಿಐ): ಲಿಬಿಯಾದ ಮುಅಮ್ಮರ್ ಗಡಾಫಿ ಸರ್ಕಾರಕ್ಕೆ ಆಡಳಿತದ ಕೊನೆಯ ತಿಂಗಳವರೆಗೂ (ವಿರೋಧಿಗಳಿಂದ ಗಡಾಫಿ ಪದಚ್ಯುತಿಯ ತನಕ) ಆ ರಾಷ್ಟ್ರಕ್ಕೆ ಚೀನಾ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡಿರುವುದಾಗಿ ಕೆನಡಾ ದೈನಿಕಗಳಾದ `ಗ್ಲೋಬ್~ ಮತ್ತು `ಮೆಯಿಲ್~ ವರದಿ ಪ್ರಕಟಿಸಿವೆ.ಚೀನಾದ ಸರ್ಕಾರಿ ನಿಯಂತ್ರಿತ ಶಸ್ತಾಸ್ತ್ರ ಸಂಸ್ಥೆಗಳು ಕಳೆದ ಜುಲೈನಲ್ಲಿ ಗಡಾಫಿ ಆಡಳಿತಕ್ಕೆ 20 ಕೋಟಿ ಡಾಲರ್ ಮೊತ್ತದ ಶಸ್ತ್ರಾಸ್ತ್ರ ಮಾರಾಟ ಮಾಡಲು ಬಯಸಿದ್ದಲ್ಲದೆ, ಗಡಾಫಿ  ಅವರನ್ನು ಗುಪ್ತವಾಗಿ ಅಲ್ಜೀರಿಯಾ ಮತ್ತು ದಕ್ಷಿಣ ಆಫ್ರಿಕಾಕ್ಕೆ ಹಡಗಿನ ಮೂಲಕ ಸ್ಥಳಾಂತರ ಮಾಡಲು ಮಾತುಕತೆ ನಡೆಸಿದ್ದಾಗಿಯೂ ಪತ್ರಿಕೆಗಳು ತಿಳಿಸಿವೆ.

 

Post Comments (+)