ಚಾಮರಾಜನಗರ: ಜಿಲ್ಲೆಯ ಹನೂರು ಪಟ್ಟಣದ ಶ್ರೀಮಹದೇಶ್ವರ ಕ್ರೀಡಾಂಗಣದಲ್ಲಿ ಮಾರ್ಚ್ 24 ಹಾಗೂ 25ರಂದು ಗಡಿನಾಡ ಸಾಂಸ್ಕೃತಿಕ ಉತ್ಸವ ನಡೆಸಲು ಜಿಲ್ಲಾಡಳಿತ ಸಜ್ಜಾಗಿದೆ.ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಜಿಲ್ಲಾಡಳಿತ ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಡಿ ಉತ್ಸವದ ಯಶಸ್ವಿಗೆ ಸಿದ್ಧತೆ ಪೂರ್ಣಗೊಂಡಿದೆ. ಎರಡು ದಿನಗಳ ಈ ಉತ್ಸವದಲ್ಲಿ ಜಿಲ್ಲೆಯ ಸಾಂಸ್ಕೃತಿಕ ಹಿರಿಮೆ ಅನಾವರಣಗೊಳ್ಳಲಿದೆ.

ಕ್ರೀಡಾಂಗಣದಲ್ಲಿ 60*40 ಅಡಿ ವಿಸ್ತ್ರೀರ್ಣದ ನಾಲ್ಕು ಅಡಿ ಎತ್ತರದ ಬೃಹತ್ ವೇದಿಕೆ ಸಿದ್ಧವಾಗಿದೆ. ಬಿಸಿಲಿನ ಬೇಗೆ ತಡೆಯಲು ವಿಶಾಲವಾದ ಶಾಮಿಯಾನ ಹಾಕಲಾಗಿದೆ. ಉತ್ತಮ ಧ್ವನಿವರ್ಧಕ, ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮಕ್ಕೆ ವಿದ್ಯುತ್ ವ್ಯತ್ಯಯವಾಗದಂತೆ ಶಬ್ದರಹಿತ ಜನರೇಟರ್ ಅಳವಡಿಸಲಾಗಿದೆ. ಸೂಸೂತ್ರವಾಗಿ ಉತ್ಸವ ನಡೆಸಲು ಸ್ವಾಗತ ಸಮಿತಿ, ಊಟ ಮತ್ತು ವ್ಯವಸ್ಥೆ ಸಮಿತಿ, ವೇದಿಕೆ ನಿರ್ಮಾಣ, ಸಾಂಸ್ಕೃತಿಕ ಕಾರ್ಯ ಕ್ರಮ, ಪ್ರದರ್ಶನ ಮಳಿಗೆ ಸಮಿತಿಗಳು ಟೊಂಕಕಟ್ಟಿ ನಿಂತಿವೆ.

24ರಂದು ಬೆಳಿಗ್ಗೆ 11.30ಗಂಟೆಗೆ ಹಿರಿಯ ಕವಿ ಚನ್ನವೀರ ಕಣವಿ ಉತ್ಸವಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಂ.ಪಿ. ರೇಣುಕಾಚಾರ್ಯ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ಆರ್. ನರೇಂದ್ರ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕೆ. ರಾಜೇಶ್ವರಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಹನೂರು ಪ.ಪಂ. ಅಧ್ಯಕ್ಷೆ ಪುಟ್ಟಮ್ಮ ವಸ್ತುಪ್ರದರ್ಶನ ಮಳಿಗೆ ಉದ್ಘಾಟಿಸುವರು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ್ ಪ್ರಾಸ್ತಾವಿಕ ಮಾತನಾಡಲಿದ್ದಾರೆ.

ಶಾಸಕರಾದ ಎಚ್.ಎಸ್. ಮಹದೇವಪ್ರಸಾದ್, ಸಿ. ಪುಟ್ಟರಂಗಶೆಟ್ಟಿ, ಪ್ರೊ.ಕೆ.ಆರ್. ಮಲ್ಲಿಕಾರ್ಜುನಪ್ಪ, ಸಂದೇಶ್ ನಾಗರಾಜ್, ಮರಿತಿಬ್ಬೇಗೌಡ, ಗೋ. ಮಧುಸೂದನ್, ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ಆರ್. ಕೃಷ್ಣಮೂರ್ತಿ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿ ಕಾರದ ಸದಸ್ಯ ಜಿ.ಎಸ್. ಜಯದೇವ ಇತರರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. 25ರಂದು ಸಂಜೆ 5.30ಗಂಟೆಗೆ ಸಮಾರೋಪ ನಡೆಯಲಿದೆ.

ವಿಚಾರ ಗೋಷ್ಠಿ: ಉತ್ಸವದಲ್ಲಿ ವಿಚಾರ ಸಂಕಿರಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. 24ರಂದು ಮಧ್ಯಾಹ್ನ 3ಗಂಟೆಗೆ ‘ಗಡಿನಾಡ ಕನ್ನಡಿಗರ ಸ್ಥಿತಿಗತಿ’ ಕುರಿತು ವಿಚಾರಗೋಷ್ಠಿ ನಡೆಯಲಿದೆ. ಮೈಸೂರು ವಿವಿಯ ಕುವೆಂಪು ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಡಾ.ಕೃಷ್ಣಮೂರ್ತಿ ಹನೂರು ಅಧ್ಯಕ್ಷತೆ ವಹಿಸಲಿದ್ದಾರೆ. ‘ಗಡಿ ಅಂಚಿನ ಮತ್ತು ಗಡಿ ಆಚೆಯ ಕನ್ನಡಿಗರ ಸಮಸ್ಯೆ-ಪರಿಹಾರ’ ಕುರಿತು ಉಪ ನ್ಯಾಸಕ ನಾಗೇಶ್ಸೋಸ್ಲೆ ಉಪನ್ಯಾಸ ನೀಡು ವರು. ಚನ್ನನಂಜಪ್ಪ, ರಾಜಗೋಪಾಲ್, ಡಾ.ಎಸ್. ಶಿವರಾಜಪ್ಪ, ಕೆ. ವೆಂಕಟರಾಜು, ಶಾ. ಮುರಳಿ ಪ್ರತಿಕ್ರಿಯಿಸಲಿದ್ದಾರೆ.

‘ಹೊಗೇನಕಲ್ ವಿವಾದ: ಸ್ವರೂಪ ಮತ್ತು ಪರಿಹಾರ ಸಾಧ್ಯತೆಗಳು’ ಎಂಬ ವಿಷಯ ಕುರಿತು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಬ್ರಹಾಂ ಡಿ. ಸಿಲ್ವ ಉಪನ್ಯಾಸ ನೀಡುವರು. ಕೆ.ಎಸ್. ರಾಘವೇಂದ್ರ, ಪುಣಜ ನೂರು ದೊರೆಸ್ವಾಮಿ, ಪುಟ್ಟರಾಜೇ ಅರಸು, ಕೆ. ವೀರಭದ್ರಸ್ವಾಮಿ, ನಟರಾಜ ಮಾಳಿಗೆ ಪ್ರತಿಕ್ರಿಯಿಸಲಿದ್ದಾರೆ.

25ರಂದು ಬೆಳಿಗ್ಗೆ 10.30ಗಂಟೆಗೆ ‘ನಂಜುಂಡಪ್ಪ ವರದಿಯ ಶಿಫಾರಸು ಮತ್ತು ಅನುಷ್ಠಾನ’ ಕುರಿತು ಉಪನ್ಯಾಸ ಏರ್ಪಡಿಸಲಾ ಗಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಗಿರಡ್ಡಿ ಗೋವಿಂದರಾಜು ಅಧ್ಯಕ್ಷತೆ ವಹಿಸಲಿದ್ದಾರೆ.

ಜೆಎಸ್ಎಸ್ ಕಾಲೇಜಿನ ಸ್ನಾತಕೋತ್ತರ ವಿಭಾಗದ ನಿರ್ದೇಶಕ ಪ್ರೊ.ಆರ್.ಎಂ. ಚಿಂತಾ ಮಣಿ ಉಪನ್ಯಾಸ ನೀಡಲಿದ್ದಾರೆ. ಪ್ರೊ.ಕೆ.ಎಂ. ವೀರಯ್ಯ, ಬೆಳ್ಳೇಗೌಡ, ಪ್ರೊ.ಸತ್ಯನಾರಾಯಣ ಪ್ರತಿಕ್ರಿಯಿಸಲಿದ್ದಾರೆ. ಬೆಳಿಗ್ಗೆ 11.30ಗಂಟೆಗೆ ‘ಗಡಿ ಅಂಚಿನ ಕಲೆಗಳು ಮತ್ತು ಸಂಸ್ಕೃತಿ’ ಕುರಿತ ವಿಚಾರಗೋಷ್ಠಿ ನಡೆಯಲಿದೆ. ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಮೋಹನ ನಾಗಮ್ಮನವರ್ ಅಧ್ಯಕ್ಷತೆ ವಹಿಸಲಿದ್ದಾರೆ.

ಕುರುಬನಕಟ್ಟೆ ದೇಸಿ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ವೆಂಕಟೇಶ ಇಂದ್ವಾಡಿ ‘ಗಡಿ ಅಂಚಿನ ಜಾನಪದ ಕಲೆಗಳು’ ವಿಷಯ ಕುರಿತು ಉಪನ್ಯಾಸ ನೀಡುವರು. ಮಹದೇವ ಶಂಕನ ಪುರ, ಡಾ.ಮಹದೇವಿ, ಡಾ.ಸುಮಂಗಲಿ, ಸೋಮಶೇಖರ ಬಿಸಲ್ವಾಡಿ ಪ್ರತಿಕ್ರಿಯಿಸುವರು.

ಕುವೆಂಪು ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಡಾ.ರಾಮಕೃಷ್ಣ ‘ಚಾಮರಾಜನಗರ ಜಿಲ್ಲೆಯ ಸಂಸ್ಕೃತಿ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡುವರು. ಮೈಸೂರು ಭಾರತೀಯ ಭಾಷಾ ಅಧ್ಯಯನ ಸಂಸ್ಥೆಯ ಡಾ.ಮಂಜುಳಾಕ್ಷಿ ‘ಚಾಮರಾಜನಗರ ಜಿಲ್ಲೆಯ ಭಾಷೆ’ ಕುರಿತು ಉಪನ್ಯಾಸ ನೀಡುವರು. ಸರಸ್ವತಿ ಹೊನ್ನಪ್ಪ, ಡಾ.ರಾಜಶೇಖರ ಜಮದಂಡಿ, ಮಲ್ಲೇಶಪ್ಪ, ಎಂ. ಶಿವಸ್ವಾಮಿ ಪ್ರತಿಕ್ರಿಯಿಸಲಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮ: ಉತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. 24ರಂದು ಸಂಜೆ 5ರಿಂದ 5.15ಗಂಟೆಗೆ ಕೊಳ್ಳೇಗಾಲದ ಕೈಲಾಸಮೂರ್ತಿ ಸಂಗಡಿಗರಿಂದ ತಂಬೂರಿ ಪದ, 5.15ರಿಂದ 5.30ರವರೆಗೆ ರಾಜಪೇಟೆಯ ಕಾವೇರಿ ಮತ್ತು ಸಂಗಡಿಗರಿಂದ ಉಮ್ಮ ತ್ತಾಟ್ ನಡೆಯಲಿದೆ. ಬಳಿಕ, ಡಾ.ಪಂಡಿತ್ ನರಸಿಂಹಲು ವಡವಾಟಿ ಅವರಿಂದ ಕ್ಲಾರಿಯೋನೆಟ್ ವಾದನವಿದೆ.

ಸಂಜೆ 6.30ರಿಂದ 7.30ರವರೆಗೆ ವೈ.ಕೆ. ಮುದ್ದುಕೃಷ್ಣ ಸಂಗಡಿಗರಿಂದ ಸುಗಮ ಸಂಗೀತ, 7.30ರಿಂದ 7.45ರವರೆಗೆ ಮಂಡ್ಯದ ಕ್ಷೀರಸಾಗರ ಮಿತ್ರಕೂಟ ತಂಡದಿಂದ ಜಾನಪದ ನೃತ್ಯ, ರಾತ್ರಿ 7.45ರಿಂದ 8.45ರವರೆಗೆ ಮೈಸೂರು ನಿಮಿಷಾಂಬ ನೃತ್ಯಶಾಲೆಯ ಹೆಜ್ಜೆ ಗೆಜ್ಜೆ ತಂಡದಿಂದ ಭಾರತೀಯ ನೃತ್ಯ ವೈಭವ ನಡೆಯಲಿದೆ.

ಬಳಿಕ ಕಲಾವಿದರಾದ ಸಿ.ಎಂ. ನರಸಿಂಹ ಮೂರ್ತಿ, ಎಸ್.ಬಿ. ನಾಗರಾಜು, ಬಿ. ಬಸವರಾಜು, ರಾಮದಾಸ್, ಎಸ್. ನಟರಾಜು, ಆರ್. ರವಿಕುಮಾರ್, ಮಂಗಳಗೌರಿ ಅವರಿಂದ ಕನ್ನಡ ಗಾಯನ ಸಂಭ್ರಮ ಕಾರ್ಯಕ್ರಮ ಆಯೋಜಿಸಲಾಗಿದೆ.

25ರಂದು ಸಂಜೆ 4.30ರಿಂದ 5ಗಂಟೆವರೆಗೆ ಯಳಂದೂರು ರಂಗದೇಗುಲ ಕಲಾ ವೇದಿಕೆಯಿಂದ ಬೀದಿ ನಾಟಕದ ಪ್ರದರ್ಶನವಿದೆ. 5ರಿಂದ 5.30ರವರೆಗೆ ಕೊಳ್ಳೇಗಾಲ ಹಂಸಧ್ವನಿ ಕಲಾ ಬಳಗದಿಂದ ವಾದ್ಯಗೋಷ್ಠಿ ನಡೆಯಲಿದೆ. ಸಂಜೆ 6.30ರಿಂದ 7.30ರವರೆಗೆ ಅಂಬಳೆ ಸಿದ್ದರಾಜು ಇತರರಿಂದ ಜಾನಪದ ಸಂಗೀತ ಕಾರ್ಯಕ್ರಮವಿದೆ.

ರಾತ್ರಿ 8ಗಂಟೆಯಿಂದ 9.30ಗಂಟೆವರೆಗೆ ಮೈಸೂರಿನ ನಿರಂತರ ಪೌಂಡೇಶನ್ನಿಂದ ಬಸವಣ್ಣನ ವಚನ ಆಧರಿಸಿದ ಕೂಡಲ ಸಂಗಮ ಎಂಬ ನೃತ್ಯರೂಪಕ ಏರ್ಪಡಿಸಲಾಗಿದೆ. ರಾತ್ರಿ 9.30ರಿಂದ 10.15ರವರೆಗೆ ದಯಾನಂದ, ಗುಂಡುರಾವ್, ಮಿಮಿಕ್ರಿ ಗೋಪಾಲ್, ಉಮ್ಮತ್ತೂರು ಬಸವರಾಜು ಅವರಿಂದ ಹಾಸ್ಯಸಂಜೆ ಆಯೋಜಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.