ಗುರುವಾರ , ಮೇ 28, 2020
27 °C

ಗಡಿಯಲ್ಲಿ ಮುಗ್ಧರ ಹತ್ಯೆ: ಭಾರತ-ಬಾಂಗ್ಲಾ ಸಭೆ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಢಾಕಾ (ಪಿಟಿಐ): ಬಾಂಗ್ಲಾದೇಶ ಮತ್ತು ಭಾರತದ ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳ ನಡುವೆ ಮಂಗಳವಾರದಿಂದ ಎರಡು ದಿನಗಳ ಕಾಲ ನಡೆಯಲಿರುವ ದ್ವಿಪಕ್ಷೀಯ ಮಾತುಕತೆ ಸಂದರ್ಭದಲ್ಲಿ ಗಡಿ ಪ್ರದೇಶದಲ್ಲಿ ನಡೆಯುತ್ತಿರುವ ಗುಂಡಿನ ಚಕಮಕಿ ಪ್ರಮುಖ ವಿಷಯವಾಗಲಿದೆ.‘ಗಡಿಯಲ್ಲಿ ಅಮಾಯಕ ಬಾಂಗ್ಲಾ ದೇಶಿಯರ ಹತ್ಯೆ ನಿಲ್ಲದಿರುವುದು ಪ್ರಮುಖ ವಿಷಯವಾಗಲಿದೆ’ ಎಂದು ಬಾಂಗ್ಲಾ ದೇಶದ ಗೃಹ ಕಾರ್ಯದರ್ಶಿ ಅಬ್ದುಸ್ ಶೋಭನ್ ಸಿಕ್ದರ್ ತಿಳಿಸಿರುವುದಾಗಿ ‘ಡೇಲಿ ಸ್ಟಾರ್’ ಪತ್ರಿಕೆ ವರದಿ ಮಾಡಿದೆ. ಕಳೆದ ಒಂದು ವರ್ಷದಿಂದ ಕನಿಷ್ಠ 74 ನಾಗರಿಕರು ಬಿಎಸ್‌ಎಫ್‌ನಿಂದ ಹತ್ಯೆಯಾಗಿದ್ದು ಎಂದು ‘ಅಧಿಕಾರ್’ ಪತ್ರಿಕೆ ಹೇಳಿದೆ.ಏಏಳಿಅ, 72 ಮಂದಿ ಗಾಯಗೊಂಡಿದ್ದಾರೆ ಎಂದು ‘ಅಧಿಕಾರ್’ ಪತ್ರಿಕೆ ಜನವರಿ ಮೊದಲ ವಾರದಲ್ಲಿ ಪ್ರಕಟಿಸಿತ್ತು. ಈ ಪೈಕಿ ಐವತ್ತು ಜನರನ್ನು ಗುಂಡು ಹಾರಿಸಿ ಹತ್ಯೆ ಮಾಡಿದ್ದರೆ, ಇತರ 24 ಮಂದಿಯನ್ನು ಕ್ರೂರವಾಗಿ ಹಿಂಸೆ ನೀಡಿ ಕೊಲ್ಲಲಾಗಿದೆ. ಕಳೆದ ಹತ್ತು ದಿನಗಳಲ್ಲಿ ಕನಿಷ್ಠ ಮೂರು ಮಂದಿ ನಾಗರಿಕರನ್ನು ಕೊಲೆ ಮಾಡಲಾಗಿದೆ ಎಂದೂ ಪತ್ರಿಕೆ ತನ್ನ ವರದಿಯಲ್ಲಿ ತಿಳಿಸಿತ್ತು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.