ಶನಿವಾರ, ಮೇ 15, 2021
25 °C
`ಸೆಬಿ' ಆದೇಶ; ಶೇ25 ಷೇರು ಸಾರ್ವಜನಿಕರಿಗೆ

ಗಡುವು ಅಂತ್ಯ:ದಂಡ ಸಾಧ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ(ಪಿಟಿಐ): ಖಾಸಗಿ ಕ್ಷೇತ್ರದ ಕಂಪೆನಿಗಳು ಸಾರ್ವಜನಿಕರ ಹೂಡಿಕೆಗಾಗಿ ಷೇರುಪಾಲಿನಲ್ಲಿ ಕಡ್ಡಾಯವಾಗಿ ಶೇ 25ರಷ್ಟು ಅವಕಾಶ ನೀಡಬೇಕು ಎಂಬ `ಭಾರತೀಯ ಷೇರು ವಿನಿಮಯ ಮಂಡಳಿ'(ಸೆಬಿ) ಆದೇಶ ಜಾರಿಗೆ ವಿಧಿಸಿದ್ದ ಗಡುವು ಸೋಮವಾರಕ್ಕೆ ಕೊನೆಗೊಂಡಿದೆ. ಹಾಗಿದ್ದೂ ನೂರಕ್ಕೂ ಅಧಿಕ ಕಂಪೆನಿಗಳು `ಸೆಬಿ' ನಿರ್ದೇಶನವನ್ನು ಇನ್ನೂ ಪಾಲಿಸಿಯೇ ಇಲ್ಲ. ಈ ಕಂಪೆನಿಗಳ ವಿರುದ್ಧ `ಸೆಬಿ' ದಂಡ ವಿಧಿಸುವ ಸಾಧ್ಯತೆ ಇದೆ.ಸೂಚನೆ ಪಾಲಿಸದ ಕಂಪೆನಿಗಳ ವಿರುದ್ಧ ಯಾವ ಕ್ರಮ ಕೈಗೊಳ್ಳಬೇಕು ಎಂಬುದನ್ನು ನಿರ್ಧರಿಸಲು `ಸೆಬಿ' ಆಂತರಿಕವಾಗಿ ಸಮಾಲೋಚನೆ ನಡೆಸಿದೆ. ಪ್ರಕರಣಗಳ ತೀವ್ರತೆ ಆಧರಿಸಿ ಕಂಪೆನಿಗಳಿಗೆ ಭಿನ್ನ ಪ್ರಮಾಣದಲ್ಲಿ ದಂಡ ವಿಧಿಸುವ ಸಾಧ್ಯತೆ ಇದೆ.ಈ `ಕಡ್ಡಾಯ ನಿಯಮ' ಪಾಲಿಸಲು ಕಂಪೆನಿಗಳು ನಡೆಸಿದ ಪ್ರಾಮಾಣಿಕ ಪ್ರಯತ್ನ ಅಥವಾ ನಿರ್ಲಕ್ಷ್ಯ ತೋರಿರುವುದು ಮೊದಲಾದ ಅಂಶಗಳನ್ನು ಪರಿಗಣಿಸಿ ದಂಡದ ಪ್ರಮಾಣ ನಿರ್ಧಾರವಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.