ಬುಧವಾರ, ಸೆಪ್ಟೆಂಬರ್ 18, 2019
22 °C

ಗಣಿ ಧಣಿಗಳಿಗೆ ಬಿಸಿ: ವರ್ಗಕ್ಕೆ ಹೆಚ್ಚಿದ ಒತ್ತಡ

Published:
Updated:

ಬೆಂಗಳೂರು: ಗಣಿ ಧಣಿಗಳಿಗೆ ಬಿಸಿ ಮುಟ್ಟಿಸಿರುವ ಬಳ್ಳಾರಿ ಜಿಲ್ಲಾಧಿಕಾರಿ ಆಮ್ಲಾನ್ ಆದಿತ್ಯ ಬಿಸ್ವಾಸ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಚಂದ್ರಗುಪ್ತ ಅವರ ವರ್ಗಾ ವಣೆಗೆ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಿದೆ.`ರಾಜಕೀಯ ವಿರೋಧಿಗಳಿ ಗಿಂತಲೂ ಈ ಅಧಿಕಾರಿಗಳು ಹೆಚ್ಚು ಅಪಾಯಕಾರಿ. ಹೀಗಾಗಿ ಅವರನ್ನು ಮೊದಲು ಎತ್ತಂಗಡಿ ಮಾಡಿ~ ಎನ್ನುವ ಬೇಡಿಕೆ ಬಿಜೆಪಿಯ ಗಣಿ ಧಣಿಗಳಿಂದ ಬಂದಿದೆ.

ಒತ್ತಡ ಹೆಚ್ಚಾಗುವ ವೇಳೆಗೆ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರನ್ನು ಸಿಬಿಐ ಬಂಧಿಸಿದೆ. 

ಆ ನಂತರ ಮಾಜಿ ಸಚಿವ ಶ್ರೀರಾಮುಲು ಈ ಅಧಿಕಾರಿಗಳ ಎತ್ತಂಗಡಿಗೆ ಪಟ್ಟು ಹಿಡಿದಿದ್ದು, ಅವರನ್ನು ವರ್ಗಾವಣೆ ಮಾಡದಿದ್ದರೆ ಬಿಜೆಪಿಗೆ ವಿದಾಯ ಹೇಳುವ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

Post Comments (+)