ನವದೆಹಲಿ: ರಾಜ್ಯ ಸರ್ಕಾರಿ ಸ್ವಾಮ್ಯದ ಗಣಿ ಕಂಪೆನಿ ~ಮೈಸೂರು ಮಿನರೆಲ್ಸ್~ (ಎಂಎಂಎಲ್) ಕೆಲವು ಖಾಸಗಿ ಗಣಿ ಕಂಪೆನಿಗಳ ಜತೆ ಮಾಡಿಕೊಂಡ ಒಪ್ಪಂದಗಳಿಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಕುಟುಂಬ ಸದಸ್ಯರ ಅಕ್ರಮ ವ್ಯವಹಾರಗಳಿಗೂ ಸಂಬಂಧವಿರುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಈ ಕುರಿತು ಸಿಬಿಐ ತನಿಖೆಗೆ ಶಿಫಾರಸು ಮಾಡಬೇಕೆಂದು `ಕೇಂದ್ರ ಉನ್ನತ ಅಧಿಕಾರದ ಸಮಿತಿ~ (ಸಿಇಸಿ) ಗೆ ಧಾರವಾಡದ `ಸಮಾಜ ಪರಿವರ್ತನಾ ಸಮುದಾಯ~ (ಎಸ್ಪಿಎಸ್) ಮನವಿ ಮಾಡಿದೆ.

ಯಡಿಯೂರಪ್ಪ ಅಧಿಕಾರದಲ್ಲಿದ್ದಾಗ ಎಂಎಂಎಲ್ ಕೆಲವು ಖಾಸಗಿ ಗಣಿ ಕಂಪೆನಿಗಳ ಜತೆ ಮಾಡಿಕೊಂಡಿದ್ದ ಒಪ್ಪಂದಗಳನ್ನು ತಿದ್ದುಪಡಿ ಮಾಡಿ ಅವುಗಳಿಗೆ ಅನುಕೂಲ ಮಾಡಿಕೊಟ್ಟಿದೆ. ಈ ಅನುಕೂಲಕ್ಕಾಗಿ ಯಡಿಯೂರಪ್ಪ ಮತ್ತು ಅವರ ಕುಟುಂಬದ ಸದಸ್ಯರು `ಲಾಭ~ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.

ಎಂಎಂಎಲ್ ಒಪ್ಪಂದಗಳು ಹಾಗೂ ಮಾಜಿ ಮುಖ್ಯಮಂತ್ರಿಯ ಕುಟುಂಬದ ಅಕ್ರಮ ವ್ಯವಹಾರಗಳ ಬಗ್ಗೆ ಸಿಬಿಐ ತನಿಖೆ ನಡೆದರೆ ಸತ್ಯಾಂಶ ಹೊರಬರಲಿದೆ ಎಂದು ಎಸ್ಪಿಎಸ್ ಹೇಳಿದೆ.

ಎಸ್ಪಿಎಸ್ನ ಎಸ್.ಆರ್. ಹಿರೇಮಠ, ಪಿ.ವಿ. ಜಯಕೃಷ್ಣನ್ ನೇತೃತ್ವದ ಸಿಇಸಿಗೆ ಈ ಸಂಬಂಧ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಜತೆಗೆ ಪೂರಕ ದಾಖಲೆಗಳನ್ನು ಲಗತ್ತಿಸಿದ್ದಾರೆ. ಸಿಬಿಐ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ಗೆ ಶಿಫಾರಸು ಮಾಡುವಂತೆ ಮನವಿ ಮಾಡಿದ್ದಾರೆ.

ಆರಗ ಜ್ಞಾನೇಂದ್ರ ಅಧ್ಯಕ್ಷರಾಗಿದ್ದ `ಸಾರ್ವಜನಿಕ ಉದ್ದಿಮೆಗಳ ಸಮಿತಿ~ (ವಿಧಾನ ಮಂಡಲ ಉಭಯ ಸದನಗಳ ಕೆಲ ಸದಸ್ಯರನ್ನು ಒಳಗೊಂಡ ಸಮಿತಿ) ಎಂಎಂಎಲ್ ವ್ಯವಹಾರಗಳನ್ನು ಕುರಿತು ಪರಿಶೀಲನೆ ನಡೆಸಿ 2007ರ ಜುಲೈ 12ರಂದು ಸರ್ಕಾರಕ್ಕೆ ವರದಿ ಸಲ್ಲಿಸಿದೆ. `ಈ ವರದಿಯಲ್ಲಿ ಎಂಎಂಎಲ್ ತನ್ನ ಹಿತಾಸಕ್ತಿ ಬಲಿಕೊಟ್ಟು ಖಾಸಗಿ ಕಂಪೆನಿಗಳಿಗೆ ಲಾಭ ಮಾಡಿಕೊಡುವ ಮೂಲಕ `ಕರ್ತವ್ಯಲೋಪ~ ಎಸಗಿದೆ. ಇದೇ ಧೋರಣೆ ಮುಂದುವರಿದರೆ ಎಂಎಂಎಲ್ ಮುಚ್ಚಬೇಕಾಗುತ್ತದೆ~ ಎಂದು ಉಲ್ಲೇಖಿಸಿದೆ.

ರಾಜ್ಯ ಪ್ರಧಾನ ಲೆಕ್ಕಾಧಿಕಾರಿ (ಅಕೌಂಟೆಂಟ್ ಜನರಲ್) ಕೂಡಾ ಎಂಎಂಎಲ್ ಮತ್ತು ಖಾಸಗಿ ಕಂಪೆನಿಗಳ ನಡುವಿನ ಒಪ್ಪಂದಗಳು ಅಕ್ರಮ ಮತ್ತು ಕಾನೂನುಬಾಹಿರವಾಗಿವೆ. ಇದರಿಂದ ಎಂಎಂಎಲ್ಗೆ ಆ ಮೂಲಕ ರಾಜ್ಯ ಬೊಕ್ಕಸಕ್ಕೆ ನೂರಾರು ಕೋಟಿ ನಷ್ಟವಾಗಿದೆ.

ಖಾಸಗಿ ಗಣಿ ಕಂಪೆನಿಗಳು ಸಿಕ್ಕಾಪಟ್ಟೆ ಲಾಭ ಮಾಡಿದ ಸಮಯದಲ್ಲಿ ಎಂಎಂಎಲ್ ಭಾರಿ ನಷ್ಟ ಅನುಭವಿಸಿದೆ ಎಂದು ಹೇಳಿರುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಿಇಸಿಗೆ ಸಲ್ಲಿಸಲಾಗಿದೆ. ಎಂಎಂಎಲ್ ಮತ್ತು ಜೆಎಸ್ಡಬ್ಲ್ಯು ಜಂಟಿ ಸಹಯೋಗದಲ್ಲಿ ವಿಜಯನಗರ ಮಿನೆರಲ್ಸ್ ಪ್ರೈ.ಲಿ. (ವಿಎಂಪಿಎಲ್) ಕಂಪೆನಿ ಸ್ಥಾಪಿಸಲಾಗಿದೆ.

ವಿಎಂಪಿಎಲ್ ಬೇಜವಾಬ್ದಾರಿ ಕಾರ್ಯಾಚರಣೆ ಫಲವಾಗಿ ಖಾಸಗಿ ಕಂಪೆನಿಗಳಿಗೆ ಅನುಕೂಲ ಆಗಿದೆ. ಅಲ್ಲದೆ, ಎಂಎಂಎಲ್ಗೆ ಜೆಎಸ್ಡಬ್ಲ್ಯು 118ಕೋಟಿ ಬಾಕಿ ಪಾವತಿಸಬೇಕಾಗಿದೆ. ಈ ಎಲ್ಲ ಅಂಶಗಳನ್ನು ಸಿಇಸಿ ಗಣನೆಗೆ ತೆಗೆದುಕೊಳ್ಳಬೇಕು ಎಂದು ಎಸ್ಪಿಎಸ್ ಕೋರಿಕೆ ಸಲ್ಲಿಸಿದೆ.

ಯಡಿಯೂರಪ್ಪ ಮತ್ತು ಅವರ ಕುಟುಂಬ ಸದಸ್ಯರು `ಜೆಎಸ್ಡಬ್ಲ್ಯು~ ಮತ್ತು `ಸೌತ್ವೆಸ್ಟ್ ಮೈನಿಂಗ್ ಕಂಪೆನಿ~ಯಿಂದ ಪಡೆದಿರುವ `ದೇಣಿಗೆ` ಕುರಿತು ಸಿಬಿಐ ತನಿಖೆ ಅಗತ್ಯ ಇದೆಯೇ ಎಂಬ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎಚ್. ಕಪಾಡಿಯಾ ನೇತೃತ್ವದ ಅರಣ್ಯ ಪೀಠ ಈಗಾಗಲೇ ಸಿಇಸಿಗೆ ಸೂಚಿಸಿದೆ.

ಈ ಆರೋಪ ಕುರಿತು ಪರಿಶೀಲಿಸುತ್ತಿರುವ ಸಿಇಸಿ ಮುಂದಿನ ಶುಕ್ರವಾರ ವರದಿ ಸಲ್ಲಿಸುವ ನಿರೀಕ್ಷೆಯಿದೆ. ಸಿಇಸಿ ಶಿಫಾರಸು ಪರಿಶೀಲಿಸಿ ನ್ಯಾಯಾಲಯ ತೀರ್ಮಾನ ಪ್ರಕಟಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.