ಆನೇಕಲ್: ತೋಟಗಾರಿಕೆಯಲ್ಲಿ ಆಧುನಿಕ ಸಂಶೋಧನೆಗಳನ್ನು ಬಳಸಿಕೊಂಡು ಉತ್ತಮ ಇಳುವರಿ ಪಡೆಯುವತ್ತ ರೈತರು ಮುಂದಾಗಬೇಕು. ತಂತ್ರಜ್ಞಾನ ಹಾಗೂ ಸಂಶೋಧನೆಯ ಫಲ ಎಲ್ಲರಿಗೂ ದೊರೆ ಯುವಂತಾಗಬೇಕು ಎಂದು ಭಾರತೀಯ ತೋಟಗಾರಿಕೆ ಸಂಸ್ಥೆಯ ಸಂಶೋಧನಾ ಸಲಹಾ ಸಮಿತಿ ಅಧ್ಯಕ್ಷ ಡಾ.ಗೌತಮ್ ಕಲ್ಹೂ ತಿಳಿಸಿದರು.

ಅವರು ತಾಲ್ಲೂಕಿನ ಹೆನ್ನಾಗರದ ಪ್ರಗತಿಪರ ರೈತ ಎಂ.ಬಾಬುರೆಡ್ಡಿ ಅವರ ತೋಟದಲ್ಲಿ ಭಾರತೀಯ ತೋಟಗಾರಿಕೆ ಸಂಸ್ಥೆಯ ವಿಜ್ಞಾನಿಗಳು ಸಂಶೋಧಿಸಿ ಅಭಿವೃದ್ದಿ ಪಡಿಸಿರುವ ಅರ್ಕಾರಕ್ಷಕ್ ಟೊಮೊಟೊ ಬೆಳೆಯನ್ನು ವೀಕ್ಷಿಸಿ ಮಾತನಾಡಿದರು.

ಅರ್ಕಾರಕ್ಷಕ್ ಟೊಮೊಟೊ ತಳಿಯು ಬೇರೆಲ್ಲಾ ತಳಿಗಳಿಗಿಂತ ವಿಶಿಷ್ಟವಾಗಿದೆ. ಮುಖ್ಯವಾಗಿ ರೋಗ ನಿರೋಧಕ ಶಕ್ತಿ, ಅಧಿಕ ಇಳುವರಿ ಹಾಗೂ ಅಧಿಕ ಬಾಳಿಕೆ ಹಾಗೂ ಸಾಗಾಣಿಕೆಗೆ ಸಹಕಾರಿಯಾಗಿದೆ. ಹಾಗಾಗಿ ರೈತರು ಹೆಚ್ಚಿನ ಆದಾಯ ಪಡೆಯಬಹುದು. ಈ ತಳಿಯನ್ನು ಭಾರತೀಯ ತೋಟಗಾರಿಕಾ ಸಂಸ್ಥೆಯ ಪ್ರಧಾನ ವಿಜ್ಞಾನಿ ಡಾ.ಎ.ಟಿ.ಸದಾಶಿವ ಮತ್ತು ತಂಡದವರು ಅಭಿವೃದ್ದಿ ಪಡಿಸಿದ್ದು ಈ ತಳಿಯಿಂದ ಸಹಸ್ರಾರು ರೈತರಿಗೆ ಉಪಯುಕ್ತವಾಗಿದೆ. ಹಣ್ಣು ಗಟ್ಟಿಯಾಗಿದ್ದು ರಫ್ತಿಗೆ ಸಹಕಾರಿಯಾಗಿದೆ. ಉತ್ತಮ ಬಣ್ಣ ಮತ್ತು ರುಚಿಯಿದೆ ಎಂದರು.

ಪ್ರಗತಿಪರ ರೈತ ಎಂ.ಬಾಬುರೆಡ್ಡಿ ಮಾತನಾಡಿ ರೈತರಿಗೆ ಅಧಿಕ ಲಾಭದ ಜತೆ ರೋಗ ನಿರೋಧಕ ತಳಿಯನ್ನು ಅಭಿವೃದ್ಧಿಪಡಿಸಿದ ವಿಜ್ಞಾನಿಗಳನ್ನು ಅಭಿನಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.