ಮಂಗಳವಾರ, ಜುಲೈ 14, 2020
25 °C

ಗಮನ ಸೆಳೆದ ಎತ್ತಿನ ಗಾಡಿ ಓಟ ಸ್ಪರ್ಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಮನ ಸೆಳೆದ ಎತ್ತಿನ ಗಾಡಿ ಓಟ ಸ್ಪರ್ಧೆ

ಮಂಡ್ಯ:  ತಾಲ್ಲೂಕಿನ ಕೀಲಾರ ಗ್ರಾಮದಲ್ಲಿ ದಿ. ಕೆ.ವಿ.ಶಂಕರಗೌಡರ ಸ್ಮಾರಕ ರಾಜ್ಯಮಟ್ಟದ ಎತ್ತಿನಗಾಡಿ ಓಟದ ಸ್ಪರ್ಧೆಯಲ್ಲಿ ಹಾಸನ ಜಿಲ್ಲೆ ಅರಕಲಗೂಡುವಿನ ರಕ್ಷಿತ ಅವರಿಗೆ ಸೇರಿದ ಎತ್ತಿನಗಾಡಿ ಪ್ರಥಮ ಸ್ಥಾನ ಪಡೆಯಿತು. ಪ್ರಥಮ ಬಹುಮಾನವಾಗಿ 15 ಸಾವಿರ ನಗದು ಮತ್ತು ನೆನಪಿನ ಕಾಣಿಕೆ ನೀಡಲಾಯಿತು. ಹಾಸನ ಜಿಲ್ಲೆಯ ಮೈಲಾತಪುರದ ಕುಮಾರ ಅವರಿಗೆ ದ್ವಿತೀಯ ಬಹುಮಾನ ರೂ. 10 ಸಾವಿರ ಮತ್ತು ಮಂಡ್ಯ ಜಿಲ್ಲೆ ಅಗ್ರಹಾರದ ಸುನೀಲ್ ಕುಮಾರ್ ಅವರಿಗೆ ತೃತೀಯ ರೂ. 7 ಸಾವಿರ ಬಹುಮಾನ ನೀಡಲಾಯಿತು.ಮೈಸೂರು ಜಿಲ್ಲೆ ಸಾಲಿಗ್ರಾಮದ ಸ್ವಾಮೇಗೌಡ ಅವರಿಗೆ ಸೇರಿದ ಎತ್ತಿನ ಗಾಡಿಗೆ  ಸಮಾಧಾನಕರ ಬಹುಮಾನ ವಾಗಿ ರೂ. 5 ಸಾವಿರ ಮತ್ತು ನೆನಪಿನ ಕಾಣಿಕೆ ನೀಡಲಾಯಿತು.

ಅಲ್ಲದೆ, ಸ್ಪರ್ಧೆಯಲ್ಲಿ ಭಾಗವಹಿ ಸಿದ್ದ ರಾಸುವೊಂದಕ್ಕೆ ಕಾಲು ಮುರಿದ ಹಿನ್ನೆಲೆಯಲ್ಲಿ ರಾಸುವಿನ ಮಾಲೀಕರಿಗೆ ಕೀಲಾರದ ಗ್ರಾಮಸ್ಥ ರಿಂದ ಸಹಾಯ ಧನವಾಗಿ 35,600 ರೂಪಾಯಿ ನೀಡ ಲಾಯಿತು.ಜಿಪಂ ಸಿಇಒ ಜಯರಾಂ ಸ್ಪರ್ಧೆ ಯನ್ನು ಉದ್ಘಾಟಿಸಿದರೆ,  ಜಿಪಂ ಸದಸ್ಯ ಕೆ.ಎಸ್.ವಿಜಯಾ ನಂದ್, ಮೇಲ್ಮನೆ ಸದಸ್ಯ ರಾಮಕೃಷ್ಣ, ವಕೀಲ ಕೆ.ಸಿ.ಸುದರ್ಶನ್, ಗ್ರಾ. ಪಂ.ಸದಸ್ಯ ಕೆ.ಎಸ್. ರಮೇಶ್, ಕೆ.ಆರ್.ಶಂಕರ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.