ಮಂಗಳವಾರ, ಏಪ್ರಿಲ್ 13, 2021
29 °C

ಗಾನ ಸುಧೆ ಹರಿಸಿದ ಶಿವಮೊಗ್ಗ ಸುಬ್ಬಣ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ಕೋಡಗನ ಕೋಳಿ ನುಂಗಿತ್ತ..ನೋಡವ್ವ ತಂಗಿ ಕೋಡಗನ ಕೋಳಿ ನುಂಗಿತ್ತ’...‘ಬಾಗಿಲೊಳು ಕೈಮುಗಿದು ಒಳಗೆ ಬಾ ಯಾತ್ರಿಕನೆ’...ಎಂಬ ಗೀತೆಗಳನ್ನು ಹಾಡುವ ಮೂಲಕ ಖ್ಯಾತ ಸುಗಮ ಸಂಗೀತ ಕಲಾವಿದ ಶಿವಮೊಗ್ಗ ಸುಬ್ಬಣ್ಣ ಅವರು ಕೇಳುಗರಿಗೆ ಸಂಗೀತ ಸುಧೆ ಉಣಬಡಿಸಿದರು.ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ನಗರದ ಜಯಮ್ಮ ಗೋವಿಂದೇಗೌಡ ಕಲ್ಯಾಣ ಮಂಟಪದಲ್ಲಿ ಗುರುವಾರ ಏರ್ಪಡಿಸಿದ್ದ 75ನೇ ತ್ರಿಮೂರ್ತಿ ಶಿವಜಯಂತಿ ಮಹೋತ್ಸವದಲ್ಲಿ ‘ಸುಗಮ ಸಂಗೀತ ಗಾಯನ’ ನಡೆಸಿಕೊಟ್ಟರು.‘ಮುತ್ತ ಕಂಡೇನವ್ವ ತಂಗಿ ನಾನೊಂದ’ ಎಂಬ ಜಾನಪದ ಗೀತೆ ಹಾಗೂ ‘ಕಾಡು ಕುದುರೆ’ ಚಲನಚಿತ್ರದ ‘ಕಾಡು ಕುದುರಿ ಓಡಿ ಬಂದಿತ್ತ’ ಗೀತೆ ಹಾಗೂ ಕುವೆಂಪು ಅವರ ‘ಓ ನನ್ನ ಚೇತನ, ಆಗು ನೀ ಅನಿಕೇತನ’ ಗೀತೆಗಳನ್ನು ಹಾಡುವ ಮೂಲಕ ಸಾಂಸ್ಕೃತಿಕ ನಗರಿ ಕೇಳುಗರ ಕಿವಿಗೆ ತಂಪೆರದರು.ಸಹ ಗಾಯಕಿ ಸೀಮಾ ರಾಯ್ಕರ್ ಅವರು ‘ಕರುಣಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲಿ’.., ದ.ರಾ.ಬೇಂದ್ರೆ ಅವರ ‘ಮುಗಿಲ ಮಾರಿಗೆ ರಾಗ ರತಿಯ ನಂಜ ಏರಿತ್ತ’..., ಜಿ.ಎಸ್.ಶಿವರುದ್ರಪ್ಪನವರ ‘ಎದೆ ತುಂಬಿ ಹಾಡಿದೆನು ಅಂದು ನಾನು, ಮನವಿಟ್ಟು ಕೇಳಿದಿರಿ ಅಲ್ಲಿ ನೀವು’ ಎಂಬ ಗೀತೆಗಳನ್ನು ಪ್ರಸ್ತುತ ಪಡಿಸಿದರು.ಶಿವ ಜಯಂತಿ ಆಚರಣೆ: ಸುಗಮ ಸಂಗೀತ ಕಾರ್ಯಕ್ರಮದ ಬಳಿಕ ಜರುಗಿದ 75ನೇ ತ್ರಿಮೂರ್ತಿ ಶಿವಜಯಂತಿ ಮಹೋತ್ಸವ ಕಾರ್ಯಕ್ರಮದಲ್ಲಿ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಆಶೀರ್ವಚನ ನೀಡಿದರು.ಜೆಎಸ್‌ಎಸ್ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಬಿ.ಸುರೇಶ್, ಈಶ್ವರೀಯ ವಿವಿ ಮೈಸೂರು ಉಪವಲಯದ ಮುಖ್ಯ ಸಂಚಾಲಕಿ ಬ್ರಹ್ಮಕುಮಾರಿ ಲಕ್ಷ್ಮಿ ಭಾಗವಹಿಸಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.