ಬೆಂಗಳೂರು: `ಅಂಗವಿಕಲರು ಯಾವ ರೀತಿಯ ಗಾಲಿಕುರ್ಚಿಗಳನ್ನು ಹೇಗೆ ಬಳಸಬೇಕು ಎಂಬುದರ ಬಗ್ಗೆ ಆಗ್ನೇಯ ಏಷ್ಯಾ ದೇಶಗಳಲ್ಲಿ ಯಾರಿಗೂ ಅರಿವಿಲ್ಲ. ಇದರಿಂದ ಗಾಲಿಕುರ್ಚಿ ಬಳಸುವವರು ಸಾಕಷ್ಟು ದೈಹಿಕ ಹಾಗೂ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ' ಎಂದು `ಮೊಬಿಲಿಟಿ ಇಂಡಿಯಾ' ಸಂಸ್ಥೆಯ ನಿರ್ದೇಶಕಿ ಅಲ್ಬಿನಾ ಶಂಕರ್ ಬೇಸರ ವ್ಯಕ್ತಪಡಿಸಿದರು.

ವಿಶ್ವ ಆರೋಗ್ಯ ಸಂಸ್ಥೆ ಹಾಗೂ `ಮೊಬಿಲಿಟಿ ಇಂಡಿಯಾ'ದ ಆಶ್ರಯದಲ್ಲಿ ಏರ್ಪಡಿಸಿದ್ದ ಗಾಲಿ ಕುರ್ಚಿ ಸೇವಾ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಯಾರು, ಯಾವ ಗಾಲಿಕುರ್ಚಿಯನ್ನು ಬಳಸಬೇಕು ಹಾಗೂ ಎಲ್ಲೆಲ್ಲಿ ಹೇಗೆ ಬಳಸಬೇಕು ಎಂಬುದರ ಬಗ್ಗೆ ತರಬೇತಿ ನೀಡಿ, ಅರಿವು ಮೂಡಿಸಲು ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಅಂಗವಿಕಲ ವ್ಯಕ್ತಿಯ ದೇಹದ ಅಳತೆ, ತೂಕ ಹಾಗೂ ಅವರು ವಾಸಿಸುವ ಸ್ಥಳಕ್ಕೆ ತಕ್ಕಂತೆ ಗಾಲಿ ಕುರ್ಚಿಯನ್ನು ತಯಾರಿಸಬೇಕು. ನಂತರ ಅವರಿಗೆ ಅದನ್ನು ಬಳಸುವ ಬಗ್ಗೆ ತರಬೇತಿ ನೀಡಿ, ಸ್ವತಂತ್ರವಾಗಿ ಅದನ್ನು ಬಳಸುವ ಆತ್ಮವಿಶ್ವಾಸವನ್ನು ಅವರಲ್ಲಿ ಬೆಳೆಸಬೇಕು. ಇದು ಗಾಲಿ ಕುರ್ಚಿ ನೀಡುವವರ ಕರ್ತವ್ಯ ಎಂಬುದರ ಬಗ್ಗೆ ಈ ಐದು ದಿನಗಳ ಕಾರ್ಯಾಗಾರದಲ್ಲಿ ಕಲಿಸಿಕೊಡಲಾಗಿದೆ.

ಇಲ್ಲಿ ತರಬೇತಿ ಪಡೆದ ಶಿಬಿರಾರ್ಥಿಗಳು ಗಾಲಿಕುರ್ಚಿ ತಯಾರಿಸುವ ಹಾಗೂ ಈ ವಲಯದಲ್ಲಿ ಸರ್ಕಾರಿ ಸಂಸ್ಥೆಗಳಲ್ಲಿ ಕೆಲಸ ಮಾಡುವವರಾಗಿದ್ದು, ತಮ್ಮ ದೇಶಗಳಿಗೆ ಹಿಂತಿರುಗಿದ ನಂತರ ಅಲ್ಲಿನ ಜನರು, ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಈ ಬಗ್ಗೆ ತರಬೇತಿಯನ್ನು ನೀಡಲಿದ್ದಾರೆ ಎಂದು ಅವರು ವಿವರಿಸಿದರು.

ರಾಜ್ಯ ಅಂಗವಿಕಲರ ಅಧಿನಿಯಮದ ಆಯುಕ್ತ ಕೆ.ವಿ.ರಾಜಣ್ಣ, ರಾಜ್ಯದಲ್ಲಿ ಗಾಲಿಕುರ್ಚಿ ವಿತರಿಸುವ ಇಲಾಖೆ ಹಾಗೂ ಸರ್ಕಾರೇತರ ಸಂಸ್ಥೆಗಳಲ್ಲಿನ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಗಾಲಿಕುರ್ಚಿಯ ಸೇವೆ ಹಾಗೂ ಬಳಕೆಯ ಬಗ್ಗೆ ಅರಿವಿನ ಕೊರತೆ ಇದೆ. ಹೀಗಾಗಿ ಸದ್ಯದಲ್ಲೇ ಅವರಿಗಾಗಿ ಒಂದು ತರಬೇತಿ ಕಾರ್ಯಕ್ರಮ ನಡೆಸಲಾಗುವುದು ಎಂದು ತಿಳಿಸಿದರು.

ವಿಶ್ವ ಆರೋಗ್ಯ ಸಂಸ್ಥೆಯ ಅಂಗವಿಕಲ ಮತ್ತು ಪುನರ್ವಸತಿ ಇಲಾಖೆಯ ತಾಂತ್ರಿಕ ಅಧಿಕಾರಿ ಚಾಪೆಲ್ ಖಾಸ್ನಾಬಿಸ್, `ಜ್ಞಾನ ಶಕ್ತಿ ಇದ್ದಂತೆ. ಅದು ಹಂಚಿದಷ್ಟು ಹೆಚ್ಚುತ್ತದೆ. ಇಲ್ಲವಾದಲ್ಲಿ ಅದು ವ್ಯರ್ಥ. ಹೀಗಾಗಿ ತಮ್ಮ ಬಳಿ ಇರುವ ಜ್ಞಾನದಿಂದ ಬೇರೆಯವರಿಗೆ ಉಪಯೋಗವಾಗುವಂತೆ ಮಾಡುವುದು ಮಹತ್ವಪೂರ್ಣವಾದ ಕೆಲಸ' ಎಂದು ಸಲಹೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಭಾರತ ಸೇರಿದಂತೆ ಆಗ್ನೇಯ ಏಷ್ಯಾದ 8 ದೇಶಗಳಿಂದ ಬಂದಿದ್ದ 25 ಮಂದಿ ಭಾಗವಹಿಸಿದ್ದರು. ಅವರಿಗೆ ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಗಾಲಿ ಕುರ್ಚಿಯ ಬಳಕೆ ಹಾಗೂ ಸೇವೆಯಲ್ಲಿ ತರಬೇತಿ ಪಡೆದ 5 ಮಂದಿ ವಿಶೇಷ ತರಬೇತುದಾರರಿಂದ ತರಬೇತಿ ನೀಡಲಾಗಿದೆ ಎಂದರು.

ಶ್ರೀಲಂಕಾದಿಂದ ತರಬೇತಿಗಾಗಿ ಬಂದಿದ್ದ ಮಂಜುಳಾ ಮಾತನಾಡಿ, `ನಾನು ಅಪಘಾತದಲ್ಲಿ ಕಾಲುಗಳನ್ನು ಕಳೆದುಕೊಂಡಾಗ ಸರಿಯಾದ ಗಾಲಿಕುರ್ಚಿ ಸಿಗದೆ ತುಂಬಾ ತೊಂದರೆ ಎದುರಿಸಿದ್ದೇನೆ. ಆಗ ಇದರ ಬಗ್ಗೆ ನನಗೆ ಅರಿವಿರಲಿಲ್ಲ. ಈ ಕಾರ್ಯಾಗಾರದಿಂದ ನನಗೆ ಮಹತ್ವದ ವಿಷಗಳು ತಿಳಿದಿದ್ದು, ತಾನು ಅನುಭವಿಸಿದ ಕಷ್ಟವನ್ನು ತನ್ನ ದೇಶದವರು ಅನುಭವಿಸದಂತೆ ಪ್ರಯತ್ನಿಸುತ್ತೇನೆ' ಎಂದು ಸಂತಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.